ಹೈಜಾಕ್ ಭೀತಿ ಸೃಷ್ಟಿಸಿದ್ದಕ್ಕೆ ಜೀವಾವಧಿ
Team Udayavani, Jun 12, 2019, 6:10 AM IST
ಅಹ್ಮದಾಬಾದ್: ಎರಡು ವರ್ಷಗಳ ಹಿಂದೆ, ಜೆಟ್ ಏರ್ವೆàಸ್ ವಿಮಾನ ಅಪಹರಿಸುವುದಾಗಿ ಸುಳ್ಳು ಬೆದರಿಕೆ ಹಾಕಿ, ತುರ್ತು ಭೂ ಸ್ಪರ್ಶಕ್ಕೆ ಕಾರಣವಾಗಿದ್ದ ಮುಂಬಯಿ ಮೂಲದ ಉದ್ಯಮಿ ಬಿರ್ಜು ಸಲ್ಲಾ ಎಂಬವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, 5 ಕೋಟಿ ರೂ.ಗಳ ದಂಡವನ್ನೂ ವಿಧಿಸಿದೆ. ಅಲ್ಲದೆ, ವಸೂಲಾದ ದಂಡವನ್ನು ಆತ ಬೆದರಿಕೆ ಹಾಕಿದ ವಿಮಾನದಲ್ಲಿದ್ದ ಸಿಬಂದಿ, ಪ್ರಯಾಣಿಕರಿಗೆ ಸಮವಾಗಿ ಹಂಚಬೇಕು ಎಂದು ತೀರ್ಪು ನೀಡಿದೆ. 2017ರ ಅ. 30ರಂದು ಮುಂಬಯಿ – ದಿಲ್ಲಿ ವಿಮಾನದಲ್ಲಿ ಪ್ರಯಾ ಣಿಸುತ್ತಿದ್ದ ಬಿರ್ಜು, ವಿಮಾನವನ್ನು ಹೈಜಾಕ್ ಮಾಡಲಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಕೊಂಡೊಯ್ಯಬೇಕು. ಅಲ್ಲಾ ಈಸ್ ಗ್ರೇಟ್ ಎಂದು ಇಂಗ್ಲಿಷ್ ಮತ್ತು ಉರ್ದುವಿನಲ್ಲಿ ಬರೆದು ಅದನ್ನು ಟಾಯ್ಲೆಟ್ನ ಟಿಶ್ಯೂ ಪೇಪರ್ ಡಬ್ಬಿಯಲ್ಲಿ ಹಾಕಿ ಬಂದಿದ್ದ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.