ಸಿಂಹಕ್ಕೆ ಕೃತಕ ಗರ್ಭಧಾರಣೆ ; ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗ
Team Udayavani, Oct 1, 2018, 8:50 AM IST
ಪ್ರಿಟೋರಿಯಾ: ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಸಿಂಹಕ್ಕೆ ಕೃತಕ ಗರ್ಭಧಾರಣೆ ನಡೆಸಲಾಗಿದೆ. ಕಳೆದ ತಿಂಗಳು 25ರಂದು ಜನಿಸಿದ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯು ಸಂಪೂರ್ಣ ಆರೋಗ್ಯಯುತವಾಗಿ ದಕ್ಷಿಣ ಆಫ್ರಿಕಾದ ಕನ್ಸರ್ವೇಶನ್ ಸೆಂಟರ್‌ನಲ್ಲಿವೆ. ಪ್ರಿಟೋರಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಂತಾನೋತ್ಪತ್ತಿ ಸಂಬಂಧಿ ಸಂಶೋಧನೆಯಿಂದ ಇದು ಸಾಧ್ಯವಾಗಿದೆ. ಸತತ 18 ತಿಂಗಳುಗಳವರೆಗೆ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದೆವು ಎಂದು ವಿಶ್ವವಿದ್ಯಾಲಯದ ನಿರ್ದೇಶಕ ಆಂಡ್ರೆ ಗನ್ ಸ್ವಿಟ್ ಹೇಳಿದ್ದಾರೆ.
ಕೃತಕ ಗರ್ಭಧಾರಣೆ ಹೇಗೆ?: ಆರೋಗ್ಯವಂತ ಸಿಂಹದಿಂದ ವೀರ್ಯವನ್ನು ತೆಗೆದುಕೊಂಡು, ಅದನ್ನು ಸೂಕ್ತ ಸಮಯದಲ್ಲಿ ಹೆಣ್ಣು ಸಿಂಹಕ್ಕೆ ಕೃತಕವಾಗಿ ಇಂಜೆಕ್ಟ್ ಮಾಡಲಾಗಿದೆ. ಈ ಪ್ರಕ್ರಿಯೆ ಅತ್ಯಂತ ಸರಳವಾಗಿ ನಡೆದಿದೆ. ಆದರೆ ಇದಕ್ಕೂ ಮೊದಲು ಸಾಕಷ್ಟು ಅಧ್ಯಯನ ನಡೆಸಲಾಗಿತ್ತು. ಅಲ್ಲದೆ ಹಲವು ಬಾರಿ ಯತ್ನ ವಿಫಲವೂ ಆಗಿದೆ ಎಂದು ಅವರು ಹೇಳಿದ್ದಾರೆ.
ಸಂತತಿ ರಕ್ಷಣೆಗೆ ಅನುಕೂಲ: ಕೃತಕ ಗರ್ಭಧಾರಣೆ ಮಹತ್ವದ್ದಾಗಿದ್ದು, ಅಳಿವಿನಂಚಿನಲ್ಲಿರುವ ಸಿಂಹಗಳ ಹಲವು ಪ್ರಭೇದಗಳನ್ನು ರಕ್ಷಿಸುವಲ್ಲಿ ನೆರವು ನೀಡಲಿವೆ. 2 ದಶಕಗಳಲ್ಲಿ ಸಿಂಹಗಳ ಸಂಖ್ಯೆ ಶೇ.43ರಷ್ಟು ಕುಸಿದಿದೆ. ಸದ್ಯ ಆಫ್ರಿಕಾ ದೇಶಗಳಲ್ಲಿ ಕೇವಲ 20 ಸಾವಿರ ಸಿಂಹಗಳಿವೆ. ಆದರೆ ಈ ಸಂಶೋಧನೆ ಬಗ್ಗೆ ಪಾಶ್ಚಾತ್ಯ ದೇಶಗಳ ಪರಿಸರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸಿಂಹ ಸಂತತಿ ರಕ್ಷಣೆಗೆ ನೆರವಾಗುವುದರ ಬದಲಿಗೆ, ಸಿಂಹದ ಮರಿಗಳ ವ್ಯಾಪಾರಕ್ಕೆ ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಸಿಂಹಗಳನ್ನು ಬೋನಿನಲ್ಲಿಟ್ಟಾಗ ಹೆಚ್ಚು ಮರಿ ಹಾಕುತ್ತವೆ. ಈ ಸಂಶೋಧನೆಯಲ್ಲಿ ಸಿಂಹಿಣಿಯನ್ನು ಬೋನಿನಲ್ಲಿಟ್ಟು ಕೃತಕ ಗರ್ಭಧಾರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ
Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.