ಗೋವಾದಲ್ಲೂ ಮದ್ಯ ದುಬಾರಿ; ಸುಂಕ ಹೆಚ್ಚಿಸಲು ಸರಕಾರ ನಿರ್ಧಾರ
Team Udayavani, Oct 15, 2022, 5:37 PM IST
ಪಣಜಿ: ಗೋವಾದಲ್ಲಿ ಅಗ್ಗದ ಮದ್ಯದ ಕಾರಣದಿಂದಾಗಿ ಅನೇಕ ಪ್ರವಾಸಿಗರು ಮತ್ತು ಹತ್ತಿರದ ರಾಜ್ಯಗಳ ಜನರು ಗೋವಾಕ್ಕೆ ಬರುತ್ತಾರೆ. ಆದರೆ, ಈಗ ಗೋವಾದಲ್ಲೂ ಮದ್ಯ ದುಬಾರಿಯಾಗಲಿದೆ. ಗೋವಾ ಸರ್ಕಾರವು ಬಿಯರ್ ಮೇಲಿನ ಅಬಕಾರಿ ಸುಂಕವನ್ನು 10 ರಿಂದ 12 ರೂ.ಗೆ ಹೆಚ್ಚಿಸಲು ನಿರ್ಧರಿಸಿದೆ. ಹಾಗಾಗಿ ಈಗ ಗೋವಾದಲ್ಲಿ ಪ್ರತಿ ಲೀಟರ್ ಸಗಟು ಬಿಯರ್ ಗೆ ಹತ್ತು ರೂಪಾಯಿ ಹೆಚ್ಚು ತೆರಬೇಕಾಗಿದೆ.
ಗೋವಾದಲ್ಲಿ ಮದ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ, ಇಲ್ಲಿ ಲಭ್ಯವಿರುವ ಅಗ್ಗದ ಮದ್ಯದಿಂದಾಗಿ ಅನೇಕ ಪ್ರವಾಸಿಗರು ರಾಜ್ಯಕ್ಕೆ ಬರುತ್ತಾರೆ. ಇದರಿಂದ ರಾಜ್ಯ ಸರ್ಕಾರಕ್ಕೂ ಭಾರಿ ಆದಾಯ ಬರುತ್ತಿದೆ. ಆದರೆ, ಗೋವಾದಲ್ಲಿ ಮದ್ಯದ ಬೆಲೆ ಹೆಚ್ಚಾಗಲಿದೆ ಎಂದು ಮದ್ಯ ಉದ್ಯಮ ಈಗಾಗಲೇ ಸೂಚಿಸಿತ್ತು. ಸಗಟು ಬಿಯರ್ ಖರೀದಿಯ ಮೇಲಿನ ಅಬಕಾರಿ ಸುಂಕ 30 ರಿಂದ 42 ರೂ.ಗೆ ಹೆಚ್ಚಳವಾಗಿದ್ದು, ಇಲ್ಲಿ 12 ರೂ. ಏರಿಕೆಯಾಗಿದೆ.
ಅಲ್ಲದೆ, ಪ್ರೀಮಿಯಂ ಗುಣಮಟ್ಟದ ಬಿಯರ್ ಅಂದರೆ ಶೇಕಡಾ ಐದು ಆಲ್ಕೋಹಾಲ್ ಹೊಂದಿರುವ ಬಿಯರ್ ನ ಚಿಲ್ಲರೆ ಬೆಲೆ ಪ್ರತಿ ಬಾಟಲಿಗೆ 160 ರೂ.ಗೆ ತಲುಪಿದೆ. ಇಲ್ಲಿ 60 ರೂಪಾಯಿ ತೆರಿಗೆ ವಿಧಿಸಲಾಗಿದ್ದು, ಮೊದಲು ಈ ತೆರಿಗೆ 50 ರೂಪಾಯಿ ಇತ್ತು. ಹೀಗಾಗಿ ಇಲ್ಲಿ ಹತ್ತು ರೂಪಾಯಿ ಹೆಚ್ಚಳವಾಗಿದ್ದು, ಗ್ರಾಹಕರು 10 ರೂ ಹೆಚ್ಚು ಭರಿಸಬೇಕಾಗಿದೆ. ಹಾಗಾಗಿ ಬಿಯರ್ ದರ ಏರಿಕೆಯ ಪರಿಣಾಮ ಇದೀಗ ಗೋವಾದಲ್ಲಿಯೂ ಮದ್ಯ ಪ್ರೀಯರು ಹೆಚ್ಚಿನ ಹಣ ತೆರುವ ಅನಿವಾರ್ಯತೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.