ಸಾಲು ನಿಂತ ಮದ್ಯಪ್ರಿಯರ ಮೇಲೆ ಪುಷ್ಪವೃಷ್ಟಿ ; ಉತ್ತರಪ್ರದೇಶದಲ್ಲಿ ನಡೆಯಿತು ಈ ಚಮತ್ಕಾರ!
Team Udayavani, May 4, 2020, 8:49 PM IST
ಮಿರ್ಜಾಪುರ: ಕೋವಿಡ್ 19 ವೈರಸ್ ಕಾಟದಿಂದಾಗಿ ಸರಿ ಸುಮಾರು ಒಂದೂವರೆ ತಿಂಗಳುಗಳಿಂದ ಬಾಗಿಲೆಳೆದುಕೊಂಡಿದ್ದ ವೈನ್ ಶಾಪ್ ಗಳೆಲ್ಲಾ ಇಂದು ಬಾಗಿಲು ತೆರೆದು ಮದ್ಯ ಪ್ರಿಯರ ಕಿಕ್ ಗೆ ಹೊಸ ಲುಕ್ ಕೊಟ್ಟವು.
ಈ ನಡುವೆ ದೇಶದ ವಿವಿಧ ಭಾಗಗಳಲ್ಲಿ ಮದ್ಯಪ್ರಿಯರು ಇಂದು ಬೆಳಿಗ್ಗೆಯಿಂದಲೇ ವೈನ್ ಶಾಪ್ ಗಳ ಎದುರು ಸಾಲುಗಟ್ಟಿ ನಿಂತು, ಸರಕಾರದ ನಿಯಮಗಳನ್ನು ಪಾಲಿಸಿ ತಮ್ಮ ನೆಚ್ಚಿನ ಬ್ರ್ಯಾಂಡ್ ಗಳನ್ನು ಖರೀದಿಸಿ ಸಂತಸಪಟ್ಟರು.
ಈ ನಡುವೆ ಮದ್ಯ ಖರೀದಿ ವಿಷಯದಲ್ಲೂ ಕೆಲವು ಕಡೆಗಳಲ್ಲಿ ಸ್ವಾರಸ್ಯಕರವಾದ ಘಟನೆಗಳು ನಡೆದಿರುವುದು ವರದಿಯಾಗಿದೆ. ಅದರಲ್ಲಿ ಒಂದು ತನ್ನ ವೈನ್ ಅಂಗಡಿಯ ಮಾಲಿಕರೊಬ್ಬರು ತಮ್ಮ ಗ್ರಾಹಕರ ಮೇಲೆ ಪುಷ್ಟವೃಷ್ಟಿ ಮಾಡಿ ಅವರ ತಾಳ್ಮೆಯನ್ನು ಅಭಿನಂದಿಸಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.
ಇಲ್ಲಿನ ಲಿಕ್ಕರ್ ಶಾಪೊಂದರ ಮುಂದೆ ಮದ್ಯಪ್ರಿಯರು ಮದ್ಯ ಖರೀದಿಗೆ ಸಾಲುಗಟ್ಟಿ ನಿಲ್ಲುತ್ತಿದ್ದಂತೆ ಆ ಅಂಗಡಿಯ ಮಾಲಕ ಕೈಯಲ್ಲಿ ಹೂವಿನ ಪಕಳೆಗಳನ್ನು ಹಿಡಿದುಕೊಂಡು ಸಾಲು ನಿಂತಿದ್ದ ಗ್ರಾಹಕರ ಮೇಲೆ ಸುರಿಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಲವರು ಇದಕ್ಕೆ ಫನ್ನಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
Mirzapur! ?
The name says it all.
(Not the web series)
Flower petals showered on liquor customers at Mirzapur, Uttar Pradesh.
(200 Kms from Ayodhya)By any chance was this also in the package??
???#LiquorShopspic.twitter.com/rIXPagfWJ4— AutoRaja (@AutoRaja1212) May 4, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.