ಹೃದಯದ ಮಾತು ಕೇಳಿ
ವಿಶ್ವ ಹೃದಯ ದಿನ
Team Udayavani, Sep 29, 2019, 5:39 AM IST
ನಮ್ಮನ್ನು ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹೃದಯದ ಕಾಯಿಲೆಯೂ ಒಂದು. ಇದಕ್ಕೆ ವಯಸ್ಸಿನ ಭೇದವಿಲ್ಲದೆ ಜನ ಬಲಿಯಾಗುತ್ತಿದ್ದು, ಜಾಗೃತಿ ಅಗತ್ಯ. ಸಕಲ ಜೀವಿಗಳ ಅಸ್ತಿತ್ವಕ್ಕೆ ಸಂಕೇತವಾಗಿರುವ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ದಿನವನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ.
ಶೇ.45 ರೋಗಿಗಳು
ದೇಶದಲ್ಲಿ ಶೇ.45 ರಷ್ಟು ಜನರಲ್ಲಿ ಹೃದಯ ಸಮಸ್ಯೆ ಕಂಡುಬರುತ್ತದೆ. ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ 2.6 ಕೋಟಿ ಜನರು ಹೃದಯಾ ಘಾತದಿಂದ ಸಾಯುತ್ತಿದ್ದಾರೆ. 2017ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೇವಲ ಶೇ.50 ರಷ್ಟು ಜನ ಮಾತ್ರ ಹೃದಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಲಿನ್ಯವೂ ಕಾರಣ!
ವಾಯು ಮಾಲಿನ್ಯದಿಂದ ಬರುವ ಮಿಥೇನ್ ಅನಿಲವೂ ಹೃದಯದ ಸಮಸ್ಯೆಗೆ ಕಾರಣವಾಗಬಹುದಾಗಿದೆ. ಇದು ಶ್ವಾಸಕೋಶದಲ್ಲಿ ರಕ್ತದ ಹರಿವಿಗೆ ಅಡ್ಡಿಯನ್ನುಂಟು ಮಾಡಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ.
ಹೃದಯ ವೈಫಲ್ಯ ಹೇಗಾಗುತ್ತದೆ?
ಪದೇ ಪದೇ ಉಂಟಾಗುವ ಹೃದಯಾಘಾತವು ಹೃದಯದ ಪಂಪಿಂಗ್ ಸಾಮರ್ಥ್ಯವನ್ನು ಶೇ.70 ರಿಂದ ಶೇ.30ಕ್ಕೆ, ಕೆಲವು ಸಲ ಇನ್ನೂ ಕಡಿಮೆಯಾಗುತ್ತದೆ. ಹೃದಯದ ನಾಳದಲ್ಲಿ ಸಮಸ್ಯೆ, ಪರಿಧಮನಿಯ ಕಾಯಿಲೆ, ಹೆಚ್ಚಿನ ರಕ್ತದೊತ್ತಡಗಳು ಕಾರಣವಾಗುತ್ತವೆ.
ಕೊಲೆಸ್ಟ್ರಾಲ್‌ನಿಂದ ದೂರ ಇರಿ
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರವನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿ ಅವುಗಳು ಸಂಗ್ರಹ ಗೊಳ್ಳುತ್ತವೆ. ಇವು ಒಂದು ಹಂತದ ಬಳಿಕ ಹೃದಯದ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದ ಹೃದಯಸ್ತಂಭನ ಸಂಭವಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ನಾರು ಪದಾರ್ಥ, ಕಡಿಮೆ ಕೊಲೆಸ್ಟ್ರಾಲ್ ಇರುವ ಆಹಾರ ಸೇವನೆ, ವ್ಯಾಯಾಮಗಳನ್ನು ಅನುಸರಿಸಬಹುದಾಗಿದೆ.
ಬಿ.ಪಿ. ನಿಯಂತ್ರಣ
ಅಧಿಕ ರಕ್ತದೊತ್ತಡ ಹೃದಯಕ್ಕೆ ಕಂಟಕವಾದುದು. ರಕ್ತನಾಳಗಳೊಳಗೆ ಸಂಗ್ರಹಗೊಳ್ಳುವ ಕೊಬ್ಬು, ಜಿಡ್ಡುಗಳು ರಕ್ತದೊತ್ತಡಕ್ಕೆ ಕಾರಣವಾಗುತ್ತವೆ. ಇದನ್ನು ವೈದ್ಯರ ಚಿಕಿತ್ಸೆಯಿಂದ ನಿಯಂತ್ರಣಕ್ಕೆ ತರಬಹುದು.
ತೂಕ ಕಡಿಮೆ ಮಾಡಿ
ರಕ್ತದೊತ್ತಡ ಕಡಿಮೆ ಮಾಡ ಬೇಕಾದರೆ ತೂಕ ಇಳಿಸುವುದೂ ಅನಿವಾರ್ಯ. ಸ್ಥೂಲ ಕಾಯದವರಲ್ಲಿ ಮಧುಮೇಹ, ಹೆಚ್ಚಿನ ಕೊಲೆಸ್ಟ್ರಾಲ್ ಸಾಮಾನ್ಯವಾಗಿವೆ. ಇದನ್ನು ದೂರವಿಡಲು ಆಹಾರ ಮತ್ತು ಜೀವನಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವುದು ಮುಖ್ಯ.
ಹಣ್ಣು-ತರಕಾರಿ ಸೇವಿಸಿ
ಹಣ್ಣು ಮತ್ತು ಹಸಿ ತರಕಾರಿಗಳನ್ನು ಸೇವಿಸಬೇಕು. ಇವುಗಳಲ್ಲಿ ವಿಟಮಿನ್, ಇತರ ಪೋಷಕಾಂಶಗಳು ಹೇರಳ ವಾಗಿರುತ್ತದೆ. ಜತೆಗೆ ನಾರುಗಳು, “ಆ್ಯಂಟಿ ಆಕ್ಸಿಡೆಂಟ್’ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಲಬ್-ಡಬ್ ಯಾಕೆ ಗೊತ್ತಾ..?
ಹೃದಯದಲ್ಲಿ 4 ಕವಾಟಗಳಿವೆ. ಅವುಗಳ ಕಾರ್ಯ ಏನೆಂದರೆ ರಕ್ತವನ್ನು ದೇಹದ ಮೂಲೆ ಮೂಲೆಗೆ ಪಂಪ್ ಮಾಡುವುದು. ಈ 4 ಕವಾಟಗಳು ಮುಚ್ಚಿ ತೆರೆದುಕೊಳ್ಳುವುದರಿಂದ ಈ ಲಬ್-ಡಬ್ ಶಬ್ದ ಬರುತ್ತದೆ.
ಕಾಯಿಲೆಗೆ ಕಾರಣಗಳು?
· ಮದ್ಯಪಾನ, ಧೂಮಪಾನ ದಿಂದ ಬರುತ್ತದೆ.
· ಸಂಸ್ಕರಿಸಿದ ಆಹಾರ ಮತ್ತು ಜಂಕ್‌ಫುಡ್ ಸೇವನೆಯಿಂದ.
· ಅಧಿಕ ಒತ್ತಡ, ವ್ಯಾಯಾಮ ರಹಿತ ಜೀವನ ಇತ್ಯಾದಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
ಈ ವರ್ಷದ ಧ್ಯೇಯವಾಕ್ಯ ಏನು?
ಈ ವರ್ಷ ನನ್ನ ಹೃದಯ-ನಿಮ್ಮ ಹೃದಯ ಎಂಬ ಧ್ಯೇಯವಾಕ್ಯದೊಡನೆ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಹೃದಯದೊಂದಿಗೆ‡ ನಿಮ್ಮವರ ಹೃದಯದ ಕಾಳಜಿಯೂ ನಿಮ್ಮ ಹೊಣೆಗಾರಿಕೆ ಎಂಬ ಸಂದೇಶವನ್ನು ನೀಡಿದೆ.
· ದಿನಕ್ಕೆ 1ಲಕ್ಷ ಬಾರಿ ಹೃದಯ ಪಂಪ್ ಆಗುತ್ತದೆ.
· ಜೀವಿತಾವಧಿಯಲ್ಲಿ ಇದು ಪಂಪ್ ಮಾಡುವ ರಕ್ತದ ಪ್ರಮಾಣ 10 ಲಕ್ಷ ಬ್ಯಾರೆಲ್.
· ಭಾರತದಲ್ಲಿ ಶೇ.40 ರಷ್ಟು ಮಂದಿ ಹೃದಯ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.