Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
6 ತಿಂಗಳ ಬಳಿಕ ಬೆಳಕಿಗೆ ಬಂತು ಪ್ರಕರಣ
Team Udayavani, Jan 11, 2025, 12:40 PM IST
ಭೋಪಾಲ್: ಮಧ್ಯಪ್ರದೇಶದ ದೇವಾಸ್ ನಲ್ಲಿ ಹೃದಯ ವಿದ್ರಾವಕ ಘಟಣೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಜೊತೆಗಿದ್ದ ಲಿವ್-ಇನ್ ಸಂಗಾತಿಯನ್ನೇ ಕೊಲೆಗೈದು ದೇಹದ ಭಾಗಗಳನ್ನು ತುಂಡರಿಸಿ ರೆಫ್ರಿಜರೇಟರ್ ಒಳಗೆ ಇಟ್ಟಿದ್ದು ಇದೀಗ ಘಟನೆ ನಡೆದು ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಪ್ರಕರಣ:
ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ವೃಂದಾವನಧಾಮದಲ್ಲಿ ಧೀರೇಂದ್ರ ಶ್ರೀವಾಸ್ತವ್ ಎಂಬ ಉದ್ಯಮಿಯೊಬ್ಬರು ಎರಡು ಅಂತಸ್ತಿನ ಮನೆಯನ್ನು ಹೊಂದಿದ್ದರು ಆದರೆ ಉದ್ಯಮಿ ದುಬೈಯಲ್ಲಿ ನೆಲೆಸಿದ್ದು ಇಲ್ಲಿನ ಮನೆಯನ್ನು ಬಾಡಿಗೆಗೆ ನೀಡಿದ್ದರು, ಅದರಂತೆ ಕಳೆದ ವರ್ಷ 2024 ರ ಜುಲೈ ನಲ್ಲಿ ಉಜ್ಜಯಿನಿಯ ಇಂಗೋರಿಯಾದ ನಿವಾಸಿ ಬಲ್ವೀರ್ ರಜಪೂತ್ ಕುಟುಂಬ ಈ ಮನೆಯ ನೆಲಮಹಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಇದಕ್ಕೂ ಮೊದಲು, ಸಂಜಯ್ ಪಾಟಿದಾರ್ ಎಂಬ ವ್ಯಕ್ತಿ ನೆಲಮಹಡಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಪಾಟಿದಾರ್ ಅವರು 2024 ರ ಜೂನ್ ನಲ್ಲಿ ಮನೆಯನ್ನು ಖಾಲಿ ಮಾಡಿದರು ಇದೇ ವೇಳೆ ಈ ಮನೆಗೆ ರಜಪೂತ್ ಕುಟುಂಬ ಬಂದು ವಾಸವಾಗಿತ್ತು, ಆದರೆ ಪಾಟಿದಾರ್ ಮನೆ ಖಾಲಿ ಮಾಡುವ ವೇಳೆ ರೆಫ್ರಿಜರೇಟರ್ ಸೇರಿದಂತೆ ಕೆಲವು ವಸ್ತುಗಳನ್ನು ಎರಡು ಕೊಠಡಿಗಳಲ್ಲಿ ಬಿಟ್ಟು ಹೋಗಿದ್ದರು ಹಾಗಾಗಿ ಬಾಕಿ ವಸ್ತುಗಳನ್ನು ಕೊಂಡೊಯ್ಯುವವರೆಗೆ ಪಾಟಿದಾರ್ ಆ ಕೊಠಡಿಗೆ ಬೀಗ ಹಾಕಿದ್ದರು ಅಲ್ಲದೆ ಮನೆ ಮಾಲೀಕರಿಗೂ ಸ್ವಲ್ಪ ಸಮಯದ ಬಳಿಕ ಉಳಿದ ವಸ್ತುಗಳನ್ನು ಕೊಂಡೊಯ್ಯುವುದಾಗಿ ಹೇಳಿದ್ದರು ಅದಕ್ಕೆ ಮಾಲೀಕರು ಹಾ.. ಎಂದಿದ್ದರು.
ಇದರ ನಡುವೆ ಬಲ್ವೀರ್ ರಜಪೂತ್ ಕುಟುಂಬ ಬಾಡಿಗೆ ಮನೆಗೆ ಬಂದು ಆರು ತಿಂಗಳಾದರೂ ಪಾಟಿದಾರ್ ಮಾತ್ರ ತನ್ನ ಉಳಿದ ವಸ್ತುಗಳನ್ನು ಕೊಂಡೊಯ್ಯಲಿಲ್ಲ ಇದರಿಂದ ರಜಪೂತ್ ಕುಟುಂಬ ತೊಂದರೆ ಅನುಭವಿಸುತ್ತಿತ್ತು ಈ ಕುರಿತು ಹಲವು ಬಾರಿ ಮಾಲೀಕರಲ್ಲೂ ಕೊಠಡಿಯ ಬಾಗಿಲನ್ನು ತೆರೆದು ಕೊಡುವಂತೆ ಕೇಳಿದ್ದಾರೆ. ಆದರೆ ಮಾಲೀಕರು ಕೊಠಡಿ ಖಾಲಿ ಮಾಡುವಂತೆ ಪಾಟಿದಾರ್ ಗೆ ಕರೆ ಮಾಡಿದರೆ ಇಂದು ಬರುವೆ ನಾಳೆ ಬರುವೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದ, ಒಂದು ದಿನ ಮಾಲೀಕರೆ ರಜಪೂತ್ ಕುಟುಂಬಕ್ಕೆ ಕರೆ ಮಾಡಿ ಪಾಟಿದಾರ್ ವಸ್ತುಗಳನ್ನು ಇಟ್ಟಿರುವ ಕೊಠಡಿಯ ಬೀಗ ಒಡೆದು ಅದನ್ನು ಹೊರ ಹಾಕಿ ನಿಮ್ಮ ವಸ್ತುಗಳನ್ನು ಅಲ್ಲಿ ಇಡಿ ಎಂದು ಹೇಳಿದ್ದಾರೆ ಅದರಂತೆ ಗುರುವಾರ(ಜ.9) ರಂದು ಕೆಲಸ ಮುಗಿಸಿ ಬಂದ ಬಳಿಕ ರಾತ್ರಿ ಕೊನೆಯ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ ಆಗ ಕೊಠಡಿಯಲ್ಲಿ ಒಂದು ಫ್ರಿಡ್ಜ್ ಇತ್ತು ಅಲ್ಲದೆ ಅದು ಚಾಲೂ ಸ್ಥಿತಿಯಲ್ಲಿತ್ತು ಇದನ್ನು ನೋಡಿ ಅದರ ಸ್ವಿಚ್ ಬಂದ್ ಮಾಡಿ ನಾಳೆ ಬೆಳಿಗ್ಗೆ ಕೊಠಡಿಯನ್ನು ಸ್ವಚ್ಛಗೊಳಿಸುವ ನಿರ್ಧಾರಕ್ಕೆ ಬಂದು ಮಲಗಿದ್ದ,
ಇತ್ತ ಶುಕ್ರವಾರ ಬೆಳಗಾಗುತ್ತಲೇ ಪ್ರದೇಶ ತುಂಬಾ ದುರ್ವಾಸನೆ ಬೀರಲು ಶುರುವಾಗಿದೆ ಇದರ ಬೆನ್ನಲ್ಲೇ ನೆರೆಮನೆಯವರೂ ಬಂದು ರಜಪೂತ್ ಮನೆಯ ಬಾಗಿಲು ಬಡಿದಿದ್ದಾರೆ ಮನೆ ಒಳಗಿನಿಂದ ವಿಚಿತ್ರ ವಾಸನೆ ಬರುತ್ತಿದೆ ಏನೆಂದು ಕೇಳಿದ್ದಾರೆ ಅಷ್ಟೋತ್ತಿಗೆ ರಜಪೂತ್ ಕಳೆದ ರಾತ್ರಿ ಕೊಠಡಿಯ ಬೀಗ ಒಡೆದ ಕೊಠಡಿಗೆ ಹೋಗಿ ನೋಡಿದಾಗ ಫ್ರಿಡ್ಜ್ ಬಳಿ ವಾಸನೆ ಬರಲು ಶುರುವಾಗಿದೆ ಬಳಿಕ ಫ್ರಿಡ್ಜ್ ಬಾಗಿಲು ತೆರೆದಾಗ ಒಳಗೆ ವ್ಯಕ್ತಿಯ ಕೊಳೆತ ದೇಹದ ಭಾಗಗಳು ಪತ್ತೆಯಾಗಿವೆ. ಇದನ್ನು ಕಂಡು ಗಾಬರಿಗೊಂಡ ರಜಪೂತ್ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಬಳಿಕ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ ಇದಾದ ಬಳಿಕ ತನಿಖೆ ನಡೆಸಿದ ಪೊಲೀಸರು ಈ ಹಿಂದೆ ಈ ಮನೆಯಲ್ಲಿ ಬಾಡಿಗೆಗೆ ಇದ್ದ ಸಂಜಯ್ ಪಾಟಿದಾರ್ ನನ್ನು ಸಂಪರ್ಕಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತನಗೆ ಈಗಾಗಲೇ ಮದುವೆಯಾಗಿದ್ದು ಇದರ ನಡುವೆ ಪಿಂಕಿ ಅಲಿಯಾಸ್ ಪ್ರತಿಭಾ ಪ್ರಜಾಪತಿ ಎಂಬಯುವತಿ ನನ್ನ ಜೊತೆ ಐದು ವರ್ಷದಿಂದ ಲಿವ್ ಇನ್ ರಿಲೇಶನಲ್ಲಿ ಇದ್ದು ಆಕೆ ನನ್ನನು ಮದುವೆಯಾಗುವಂತೆ ಪೀಡಿಸುತಿದ್ದಳು ಇದಕ್ಕೆ ನನಗೆ ಈಗಾಗಲೇ ಮದುವೆಯಾಗಿದೆ ಎಂದು ಹೇಳಿದರೂ ಕೇಳದೆ ತನ್ನನ್ನೂ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಳು ಇದರಿಂದ ರೋಸಿಹೋದ ನಾನು ನನ್ನ ಗೆಳೆಯರ ಜೊತೆ ಸೇರಿ ಆಕೆಯನ್ನು ಹತ್ಯೆಗೈದು ಬಳಿಕ ದೇಹವನ್ನು ತುಂಡರಿಸಿ ಮನೆಯಲ್ಲಿದ್ದ ಫ್ರಿಡ್ಜ್ ಒಳಗೆ ಇಟ್ಟು ಅದನ್ನು ಮನೆಯ ಕೊಠಡಿಯಲ್ಲಿ ಬಿಟ್ಟು ನಾನು ಮನೆ ಬದಲಾಯಿಸಿದೆ ಎಂದು ಹೇಳಿಕೊಂಡಿದ್ದಾನೆ.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಜೊತೆಗೆ ಆತನಿಗೆ ಸಹಾಯ ಮಾಡಿದವರ ಪತ್ತೆಗೆ ಬಲೆ ಬಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
MUST WATCH
ಹೊಸ ಸೇರ್ಪಡೆ
UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ
ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್ ಗೆ ಬಿಸಿಸಿಐ ವಿಶೇಷ ಸಂದೇಶ
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
Venkatesaya Namaha: ವೆಂಕಟೇಶನ ನಂಬಿ ಬಂದವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.