ಮಿರ್ಜಾಪುರ: ಶಾಲಾ ಮಕ್ಕಳ ಆಹಾರದಲ್ಲಿ ಹಲ್ಲಿ;90 ಮಂದಿ ಆಸ್ಪತ್ರೆಗೆ
Team Udayavani, Oct 14, 2017, 12:40 PM IST
ಮಿರ್ಜಾಪುರ : ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಉಣ ಬಡಿಸಲಾದ ಆಹಾರದಲ್ಲಿ ಹಲ್ಲಿಯ ತಲೆ ಪತ್ತೆಯಾಗಿದ್ದು, ಕನಿಷ್ಠ 90 ಮಂದಿ ವಿದ್ಯಾರ್ಥಿಗಳು ಈ ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ.
ವಿಷಾಹಾರ ಸೇವಿಸಿದೊಡನೆಯೇ ವಿದ್ಯಾರ್ಥಿಗಳಿಗೆ ವಾಂತಿ, ಹೊಟ್ಟೆ ನೋವು ಉಂಟಾಯಿತು. ಕೂಡಲೇ ಕನಿಷ್ಠ 90 ಮಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ವಿಂದ್ಯಾಚಲ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು ಎಂದು ಎಎನ್‌ಐ ವರದಿ ತಿಳಿಸಿದೆ.
ಅಸ್ವಸ್ಥರ ಪೈಕಿ 45 ವಿದ್ಯಾರ್ಥಿಗಳ ಆರೋಗ್ಯ ವಿಷಮಿಸಿದ್ದು ಅವರನ್ನು ಇನ್ನೊಂದು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಜೈ ಸಿಂಗ್ ಹೇಳಿದ್ದಾರೆ.
ಈ ಶಾಲೆಯು ವಿಂದ್ಯಾಚಲದ ಪರ್ಸಿಯಾ ಧುಂವಾ ಗ್ರಾಮದಲ್ಲಿದೆ. ಯಾವುದೇ ಜೀವ ಹಾನಿಯ ವರದಿಗಳು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ