ಅಯ್ಯೋ, ಅಯ್ಯೋ; ಕಾಲೇಜಿನಲ್ಲಿ ಎಬಿವಿಪಿ, ಎಸ್ಎಫ್ಐ ಮಾರಾಮಾರಿ!
Team Udayavani, Mar 18, 2017, 4:27 PM IST
ತ್ರಿಶ್ಯೂರ್: ಎಬಿವಿಪಿ ಮತ್ತು ಎಸ್ಎಫ್ಐ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕೇರಳದ ವರ್ಮಾ ಕಾಲೇಜಿನಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಎಸ್ಎಫ್ ಐಗೆ ವಿರುದ್ಧವಾಗಿ ಎಬಿವಿಪಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹೊರಗಡೆಯಿಂದ ಬಂದ ಆರ್ಎಸ್ಎಸ್ ಕಾರ್ಯಕರ್ತರು ಕಾಲೇಜು ಕ್ಯಾಂಪಸ್ ಒಳಗೆ ನುಗ್ಗಿ ಎಸ್ಎಫ್ಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಕಲ್ಲು ತೂರಾಟ, ದೊಣ್ಣೆಯಿಂದ ಸುಮಾರು ಒಂದು ಗಂಟೆಗಳ ಕಾಲ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಎಸ್ಎಫ್ ಐ ಆರೋಪದ ಪ್ರಕಾರ, ಡಿ ಝೋನ್ ಟೂರ್ನ್ ಮೆಂಟ್ ತರಬೇತಿಗಾಗಿ ಆಗಮಿಸಿದ್ದ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರಂತೆ. ಎಬಿವಿಪಿ ದೂರಿನ ಪ್ರಕಾರ, ಸಭೆ ನಡೆಸುತ್ತಿದ್ದಾಗ ಎಸ್ಎಫ್ ಐ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವುದಾಗಿ ಹೇಳಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ
Mumbai: ಬಿಜೆಪಿಯನ್ನು ನಾಯಿಗೆ ಹೋಲಿಸಿದ ಕೈ ನಾಯಕ ನಾನಾ ಪಟೋಲೆ: ಟೀಕೆ
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
U.P: ಪತ್ನಿ, ಮಕ್ಕಳ ಕೊಂದು ಸ್ಟೇಟಸ್ ಹಾಕಿದ!
Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ
MUST WATCH
ಹೊಸ ಸೇರ್ಪಡೆ
Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ
Mumbai: ಬಿಜೆಪಿಯನ್ನು ನಾಯಿಗೆ ಹೋಲಿಸಿದ ಕೈ ನಾಯಕ ನಾನಾ ಪಟೋಲೆ: ಟೀಕೆ
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.