ನಮ್ಮ ಸುರಕ್ಷೆಗೆ ಬಂಕರ್ ಬೇಕು: ರಾಜೋರಿ ಗ್ರಾಮಸ್ಥರ ಆಗ್ರಹ
Team Udayavani, Sep 12, 2017, 12:08 PM IST
ನೌಶೇರಾ : ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನೆಯ ನಿರಂತರ ಗುಂಡಿನ ದಾಳಿಯಿಂದಾಗಿ ತಮ್ಮ ಮನೆ ಮಾರು ಕಳೆದುಕೊಂಡು ಶಾಲೆಗಳಲ್ಲಿ ಆಸರೆ ಪಡೆದಿರುವ ಸ್ಥಳೀಯರು ಸರಕಾರ ತಮ್ಮ ಸುರಕ್ಷೆಗಾಗಿ ವೈಯಕ್ತಿಕ ಬಂಕರ್‌ಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿನ ಸುಮಾರು 23 ಚಿಕ್ಕಪುಟ್ಟ ಗ್ರಾಮಗಳ 5,000ಕ್ಕೂ ಮಿಕ್ಕಿದ ಜನರು ರಾಜೋರಿ ಜಿಲ್ಲೆಯ ನೌಶೇರಾ ವಲಯದಲ್ಲಿನ ತಮ್ಮ ಮನೆಗಳನ್ನು, ಪಾಕ್ ಸೇನೆಯ ನಿರಂತರ ಶೆಲ್ಲಿಂಗ್ ಪರಿಣಾಮವಾಗಿ, ಬಲವಂತದಿಂದ ತ್ಯಜಿಸಿ, ಶಿಬಿರಗಳಾಗಿ ಪರಿವರ್ತಿತವಾಗಿರುವ ಶಾಲೆಗಳಲ್ಲಿ ಈಗ ಹಲವು ತಿಂಗಳಿಂದ ನೆಲೆಸಿದ್ದಾರೆ.
ಇತ್ತೀಚೆಗೆ ರಾಜೋರಿ ವಲಯದ ಗ್ರಾಮಗಳ ಮೇಲೆ ಪಾಕ್ ಸೇನೆ ನಡೆಸಿದ ನಿರಂತರ ಗುಂಡಿನ ದಾಳಿಗೆ ನಾಲ್ವರು ಪೌರರು ಮೃತಪಟ್ಟು ಇತರ ಐವರು ಗಾಯಗೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಸೋಮವಾರ ರಾಜೋರಿ ವಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮನೆ ಮಾರು ಕಳೆದುಕೊಂಡಿರುವ ಗ್ರಾಮಸ್ಥರು ತಮ್ಮ ಸುರಕ್ಷೆಗಾಗಿ ಸರಕಾರ ತಮಗೆ ವೈಯಕ್ತಿಕ ಬಂಕರ್‌ಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.