ಹೆದ್ದಾರಿ ಅಲ್ಲ ಸ್ಥಳೀಯ ರಸ್ತೆಗಳು!
Team Udayavani, Apr 10, 2017, 10:40 AM IST
ನವದೆಹಲಿ: ಹೆದ್ದಾರಿ ಸನಿಹ 220 ಮೀ. ದೂರದವರೆಗೆ ಮದ್ಯದಂಗಡಿಗಳ ಸುಪ್ರೀಂ ಕೋರ್ಟ್ ನಿಷೇಧಿಸಿದ ಬೆನ್ನಲ್ಲೇ ದೇಶಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಸ್ಥಳೀಯ ಮಾರ್ಗಗಳಾಗಿ ಬದಲಾಗಿವೆ!
ಅದೂ ಕೇಂದ್ರ ಸರ್ಕಾರದಿಂದ ಅನುದಾನ ಕಡಿತಗೊಳ್ಳಲಿದೆ ಎಂಬ ಎಚ್ಚರಿಕೆಯ ಹೊರತಾಗಿಯೂ, ತೀರ್ಪಿನಿಂದ ಪಾರಾಗಲು ಮಹಾರಾಷ್ಟ್ರ, ಹಿಮಾಚಲ, ಉತ್ತರಾಖಂಡ, ರಾಜಸ್ಥಾನ ಸರ್ಕಾರಗಳು ಹೈವೇಗಳನ್ನು ಜಿಲ್ಲಾ, ತಾಲೂಕು, ಸ್ಥಳೀಯ ರಸ್ತೆಗಳನ್ನಾಗಿ ಘೋಷಿಸಿವೆ! ಹೆದ್ದಾರಿಗಳನ್ನು ಹೀಗೆ ಏಕಾಏಕಿ ಸ್ಥಳೀಯ ರಸ್ತೆಗಳನ್ನಾಗಿ ಘೋಷಿಸಿದ್ದಕ್ಕೆ ಸರ್ಕಾರಗಳು ಯಾವುದೇ ಕಾರಣಗಳನ್ನು ನೀಡಿಲ್ಲವಾದರೂ, ಸುಪ್ರೀಂ ಕೋರ್ಟ್ ಆದೇಶವೇ ಕಾರಣ ಎಂಬುದು ಸ್ಪಷ್ಟ. ಕೆಲವೊಂದು ರಾಜ್ಯಗಳು ಹೆದ್ದಾರಿಗಳನ್ನು ಸ್ಥಳೀಯ ರಸ್ತೆಗಳನ್ನಾಗಿ ಘೋಷಿಸುವ ತೀರ್ಮಾನಕ್ಕೆ ಬರುತ್ತಿದ್ದಂತೆ, ರಾಷ್ಟ್ರದಾದ್ಯಂತ ಮತ್ತಷ್ಟು ರಾಜ್ಯಗಳು ಈ ನಡೆಯನ್ನು ಅನುಸರಿಸಿವೆ. ಮಹಾರಾಷ್ಟ್ರ ಸರ್ಕಾರ ಪ್ರಮುಖ ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳನ್ನು ಮಹಾನಗರದ ರಸ್ತೆಗಳನ್ನಾಗಿ ಘೋಷಿಸುವ ಪ್ರಸ್ತಾಪಕ್ಕೆ ಸಮತಿ ಸೂಚಿಸಿತ್ತು. ಅತ್ತ ಹಿಮಾಚಲ ಪ್ರದೇಶ ಸರ್ಕಾರ 16 ರಾಜ್ಯ ಹೆದ್ದಾರಿಗಳನ್ನು ಪ್ರಮುಖ ಜಿಲ್ಲಾ ಹೆದ್ದಾರಿಗಳನ್ನಾಗಿ ನೋಟಿಫೈ ಮಾಡಿದೆ.
ಪಶ್ಚಿಮ ಬಂಗಾಳ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಕೂಡ ಇದೇ ನಡೆ ಅನುಸರಿಸಿದೆ. ಗೋವಾದಲ್ಲಿ ವಿಪಕ್ಷಗಳು ಪ್ರವಾಸೋದ್ಯಮ ವಲಯವನ್ನು ರಕ್ಷಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.