10 ವರ್ಷ ಕತ್ತಲ ಕೊಠಡಿಯಲ್ಲಿದ್ದರು
Team Udayavani, Dec 29, 2020, 1:21 AM IST
ಸಾಂದರ್ಭಿಕ ಚಿತ್ರ
ಅಹಮದಾಬಾದ್: ಗುಜರಾತ್‌ನ ರಾಜಕೋಟ್‌ನಲ್ಲಿ ಅತ್ಯಂತ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. 10 ವರ್ಷದಿಂದ ಕತ್ತಲಗರ್ಭದಲ್ಲಿ, ಕೋಣೆಯೊಂದರಲ್ಲಿ ತಮಗೆ ತಾವೇ ಸೇರಿಕೊಂಡಿದ್ದ ಮೂವರು ಸಹೋದರ ಮತ್ತು ಸಹೋದರಿಯರು ಅತ್ಯಂತ ಅಸ್ವಸ್ಥ ಸ್ಥಿತಿಯಲ್ಲಿ ಹೊರಬಂದಿದ್ದಾರೆ. ಅವರನ್ನು ಸಾಥಿ ಸೇವಾ ಗ್ರೂಪ್ ಎಂಬ ಸರಕಾರೇತರ ಸಂಸ್ಥೆ (ಎನ್‌ಜಿಒ), ರವಿವಾರ ಕೊಠಡಿ ಬಾಗಿಲು ಒಡೆದು ಹೊರ ಕರೆದುಕೊಂಡು ಬಂದಿದೆ. ಆದರೆ ಇಷ್ಟು ವರ್ಷ ಅವರನ್ನು ಕೊಠಡಿಯಲ್ಲಿರಲು ಬಿಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಮೂವರ ತಂದೆ ಹೇಳುವ ಪ್ರಕಾರ 1986ರಿಂದ ಅವರ ಪತ್ನಿಗೆ ಅನಾರೋಗ್ಯ ಶುರುವಾಯಿತು. ಅದನ್ನು ಅಮರೀಶ್ (42), ಮೇಘನಾ (39), ಭವೇಶ್ (30) ಮನಸ್ಸಿಗೆ ಹಾಕೊಂಡಿದ್ದರು. ಅದಾದ 5-6 ವರ್ಷಗಳ ಬಳಿಕ ತಾಯಿ ತೀರಿಕೊಂಡರು. ಮುಂದೆ ಕಾಲಾನಂತರದಲ್ಲಿ ಮೂವರೂ ಕೊಠಡಿ ಸೇರಿಕೊಂಡರು. ಅನಂತರ ಹೊರಗೆ ಬರಲು ಒಪ್ಪಲೇ ಇಲ್ಲ.
ಈ ಮೂವರ ತಂದೆ ಸರಕಾರಿ ಉದ್ಯೋಗಿ. ಮಕ್ಕಳು ಸುಶಿಕ್ಷಿತರು. ಅಮರೀಶ್ ಬಿಎ, ಎಲ್‌ಎಲ್‌ಬಿ, ಮೇಘನಾ ಮನಃಶಾಸ್ತ್ರದಲ್ಲಿ ಸ್ನಾತಕೋ ತ್ತರ ಪದವಿ ಪಡೆದಿದ್ದಾರೆ. ಭವೇಶ್ ಅತ್ಯುತ್ತಮ ಕ್ರಿಕೆಟಿಗ ನಾಗಿದ್ದರು ಮಾತ್ರವಲ್ಲ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದರು. ಈ ಮೂವರ ಮೇಲೆ ವಾಮಾಚಾರ ಪ್ರಯೋಗವಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.