Lok Sabha:ಇಂದಿನಿಂದ 2 ದಿನ ಸಂವಿಧಾನದ ಬಗ್ಗೆ ಚರ್ಚೆ
ಸಂವಿಧಾನದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಐತಿಹಾಸಿಕ ಚರ್ಚೆ ಆರಂಭ
Team Udayavani, Dec 13, 2024, 6:24 AM IST
ಹೊಸದಿಲ್ಲಿ: ದೇಶವು ಸಂವಿಧಾನ ಅಳವಡಿಸಿಕೊಂಡು 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಶುಕ್ರವಾರದಿಂದ ಸಂವಿಧಾನ ಕುರಿತ ಚರ್ಚೆ ನಡೆಯಲಿದೆ. ಡಿ.13 ಮತ್ತು 14ರಂದು ಲೋಕಸಭೆ, 16 ಮತ್ತು 17ರಂದು ರಾಜ್ಯಸಭೆ ಈ ಐತಿಹಾಸಿಕ ಚರ್ಚೆಗೆ ಸಾಕ್ಷಿಯಾಗಲಿವೆ.ಆದರೆ ಈ ವೇದಿಕೆಯನ್ನು ಆಡಳಿತ ಮತ್ತು ವಿಪಕ್ಷಗಳು ಪರಸ್ಪರರನ್ನು ದೂಷಿಸಲು ಬಳಸಿಕೊಳ್ಳಲಿವೆಯೇ ಎಂಬ ಅನುಮಾನವೂ ಮೂಡಿದೆ.
ಲೋಕಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಚರ್ಚೆ ಆರಂಭವಾಗಲಿದ್ದು, ರಕ್ಷಣ ಸಚಿವ ರಾಜನಾಥ ಸಿಂಗ್ ಮೊದಲಿಗೆ ಚರ್ಚೆ ಶುರು ಮಾಡಲಿದ್ದಾರೆ. ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಸೋಮವಾರ ಚರ್ಚೆ ಆರಂಭಿಸಲಿದ್ದಾರೆ. ಎರಡೂ ಸದನಗಳಲ್ಲಿ ಸಂವಿಧಾನದ ಕುರಿತಾದ ಚರ್ಚೆಗೆ ತಲಾ 12 ಗಂಟೆಗಳನ್ನು ಮೀಸಲಿರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಡಿ.14ರಂದು ಸಂವಿಧಾನದ ಚರ್ಚೆಗೆ ಉತ್ತರಿಸಲಿದ್ದಾರೆ. ನ.25ರಿಂದ ಆರಂಭವಾಗಿರುವ ಸಂಸತ್‌ನ ಚಳಿಗಾಲದ ಅಧಿವೇಶನ ಡಿ.20ರ ವರೆಗೆ ನಡೆಯಲಿದೆ.
ಬಿಜೆಪಿ, ಕಾಂಗ್ರೆಸ್‌ನಿಂದ ವಿಪ್
ಸಂವಿಧಾನ ಕುರಿತ ಚರ್ಚೆಯ ವೇಳೆ ಕಡ್ಡಾಯವಾಗಿ ಹಾಜರಿರುವಂತೆ ಲೋಕಸಭಾ ಸದಸ್ಯರಿಗೆ ಆಡಳಿತಾ ರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ 3 ಸಾಲಿನ ವಿಪ್ ಜಾರಿ ಮಾಡಿವೆ. ಎಲ್ಲ ಸದಸ್ಯರೂ ಎರಡೂ ದಿನಗಳ ಕಾಲ ಸದನದಲ್ಲಿ ಹಾಜರಿರಬೇಕು ಎಂದು ವಿಪ್‌ನಲ್ಲಿ ಸೂಚಿಸಲಾಗಿದೆ.
ಇಂದು ಪ್ರಿಯಾಂಕಾ ಮೊದಲ ಭಾಷಣ?
ಕಾಂಗ್ರೆಸ್ ವತಿಯಿಂದ ವಯನಾಡ್ ಸಂಸದೆ ಪ್ರಿಯಾಂಕಾ ವಾದ್ರಾ ಮೊದಲ ಬಾರಿಗೆ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಚುನಾವಣೆಯಲ್ಲಿ ಅವರು ಭಾರೀ ಬಹುಮತಗಳ ಅಂತರದಿಂದ ಗೆದ್ದಿದ್ದರು.
ಕಿರಣ್ ರಿಜಿಜು ವಿರುದ್ಧ ಹಕ್ಕುಚ್ಯುತಿಗೆ ಟಿಎಂಸಿ ಸಂಸದೆ ನೋಟಿಸ್
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ವಿರುದ್ಧ ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ ಹಕ್ಕುಚ್ಯುತಿ ನಿರ್ಣಯ ಮಂಡನೆಗಾಗಿ ನೋಟಿಸ್ ಸಲ್ಲಿಸಿದ್ದಾರೆ. ರಿಜಿಜು ಅವರು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಈ ನೋಟಿಸ್ ಸಲ್ಲಿಸಲಾಗಿದ್ದು, ಇದಕ್ಕೆ ವಿಪಕ್ಷಗಳ 60 ನಾಯಕರು ಸಹಿ ಹಾಕಿದ್ದಾರೆ ಎನ್ನಲಾಗಿದೆ. “ಸಭಾಪತಿ ಸ್ಥಾನಕ್ಕೆ ಗೌರವ ನೀಡದ ನೀವ್ಯಾರೂ ಇಲ್ಲಿ ಸಂಸದರಾಗಿ ಕೂರಲು ಅರ್ಹರಲ್ಲ’ ಎಂದು ವಿಪಕ್ಷಗಳ ಸದಸ್ಯರನ್ನು ಕುರಿತು ಬುಧವಾರದ ಕಲಾಪದ ವೇಳೆ ರಿಜಿಜು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು
10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…
Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
MUST WATCH
ಹೊಸ ಸೇರ್ಪಡೆ
ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
Tollywood: ರಿಲೀಸ್ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್ʼ HD ಪ್ರಿಂಟ್ ಲೀಕ್
Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.