ಮಾರ್ಚ್ ಮೊದಲ ವಾರ ಲೋಕಸಭಾ ಚುನಾವಣೆ ದಿನಾಂಕ ಪ್ರಕಟ
Team Udayavani, Jan 18, 2019, 11:53 AM IST
ಹೊಸದಿಲ್ಲಿ : ಚುನಾವಣಾ ಆಯೋಗ ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈಗಿನ ಲೋಕಸಭೆಯ ಅವಧಿಯು ಜೂನ್ 3ಕ್ಕೆ ಕೊನೆಗೊಳ್ಳಲಿದೆ.
ಚುನಾವಣಾ ಆಯೋಗವು ಪ್ರಕೃತ 2019ರ ಲೋಕಸಭಾ ಚುನಾವಣೆಯ ಹಂತಗಳ ಸಂಖ್ಯೆ ಮತ್ತು ಅದು ಒಟ್ಟಾರೆಯಾಗಿ ಒಳಗೊಳ್ಳುವ ತಿಂಗಳುಗಳನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ವ್ಯಸ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಹಂತಗಳ ಸಂಖ್ಯೆಯ ನಿರ್ಧಾರವು ಭದ್ರತಾ ಪಡೆಗಳ ಲಭ್ಯತೆ ಮತ್ತು ಇತರ ಆವಶ್ಯಕತೆಗಳ ಪೂರೈಕೆಯನ್ನು ಅವಲಂಬಿಸಿದೆ.
ಲೋಕಸಭಾ ಚುನಾವಣೆಯೊಂದಿಗೇ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಅದು ಪೂರ್ವ ನಿದರ್ಶನಗಳನ್ನು ಪರಿಗಣಿಸಲಿದೆ.
ಜಮ್ಮು ಕಾಶ್ಮೀರ ವಿಧಾನ ಸಭೆಯು ಕಳೆದ 2018ರ ನವೆಂಬರ್‌ನಲ್ಲಿ ವಿಸರ್ಜನೆಗೊಂಡಿರುವುದರಿಂದ ಆರು ತಿಂಗಳ ಒಳಗೆ, ಎಂದರೆ ಮೇ ತಿಂಗಳ ಒಳಗಾಗಿ ಚುನಾವಣೆಯನ್ನು ನಡೆಸುವ ಬಾಧ್ಯತೆ ಕೂಡ ಆಯೋಗದ ಮೇಲಿದೆ.
ಸಾಮಾನ್ಯ ಸನ್ನಿವೇಶದಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆಯ ಅವಧಿಯು ಆರು ವರ್ಷಗಳದ್ದಾಗಿರುವುದರಿಂದ ಅದರ ಗಡುವು 2021ರ ಮಾರ್ಚ್ 16ಕ್ಕೆ ಮುಗಿಯಲಿದೆ. ದೇಶದ ಇತರ ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಯ ಕಾರ್ಯಾವಧಿ ಐದು ವರ್ಷಗಳದ್ದಾಗಿರುತ್ತದೆ.
ಸಿಕ್ಕಿಂ ಅಸೆಂಬ್ಲಿ ಅವಧಿ 2019ರ ಮೇ 17ಕ್ಕೆ ಮುಗಿಯುತ್ತದೆ; ಆಂಧ್ರ ಪ್ರದೇಶ, ಒಡಿಶಾ ಮತ್ತು ಅರುಣಾಚಲ ಪ್ರದೇಶದ ಅಸೆಂಬ್ಲಿ ಅವಧಿ ಅನುಕ್ರಮವಾಗಿ ಜೂನ್ 18, ಜೂನ್ 11 ಮತ್ತು ಜೂನ್ 1ಕ್ಕೆ ಮುಗಿಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.