ದೇಶದ ಮತದಾರ ಜಾಣ; ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
Team Udayavani, Mar 29, 2019, 5:17 PM IST
ನವದೆಹಲಿ:2019ರ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳನ್ನು ಗಳಿಸುವ ಮೂಲಕ ಎನ್ ಡಿಎ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಶ್ವಾಸವ್ಯಕ್ತಪಡಿಸಿದ್ದಾರೆ.
ನನ್ನ ರಾಜಕೀಯದ ಅನುಭವದ ಪ್ರಕಾರ ಕಳೆದ ದಿನಗಳಿಗಿಂತ ನಮ್ಮ ಸ್ಥಾನಗಳಿಕೆಯಲ್ಲಿ ಹೆಚ್ಚಳವಾಗಲಿದೆ. ಯಾಕೆಂದರೆ ಜನರಿಗೆ ಮೋದಿ ಬಗ್ಗೆ ಕೆಲವು ಸಂದೇಹಗಳಿದ್ದವು. ಆದರೆ ಇದೀಗ ದೇಶದ ಜನರಿಗೆ ಮೋದಿ ದೇಶದ ಭದ್ರತೆ, ಬಡವರು ಹಾಗೂ ಇತರ ವಿಚಾರಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಮನಗಂಡಿದ್ದಾರೆ ಎಂದು ರಿಪಬ್ಲಿಕ್ ಭಾರತ್ ನ್ಯೂಸ್ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನನ್ನ ಕಾರ್ಯವೈಖರಿ ಮತ್ತು ದೃಷ್ಟಿಕೋನದ ಬಗ್ಗೆಯೂ ಜನರಿಗೆ ಅರ್ಥವಾಗಿದೆ. ಈ ನಿಟ್ಟಿನಲ್ಲಿ 2014ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದರು.
ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಾಪ್ರಹಾರ ನಡೆಸಿದ ಮೋದಿ, ಹಿಂದಿನ ಸರ್ಕಾರ ರಕ್ಷಣಾ ವ್ಯವಹಾರದಲ್ಲಿಯೂ ಭ್ರಷ್ಟಾಚಾರ ಎಸಗುತ್ತಿತ್ತು ಎಂದು ಆರೋಪಿಸಿದರು. ನಮ್ಮ ದೇಶದಲ್ಲಿ ಹಿಂದಿನ ಸರ್ಕಾರಕ್ಕೆ ರಕ್ಷಣಾ ಒಪ್ಪಂದಗಳೆಂದರೆ ಎಟಿಎಂ ಇದ್ದ ಹಾಗೆ ಇತ್ತು. ಹಿಂದಿನ ಎಲ್ಲಾ ಕಾಂಗ್ರೆಸ್ ಸರ್ಕಾರ ಈ ಎಟಿಎಂ ಅನ್ನು ಉಪಯೋಗಿಸಿಕೊಂಡಿದೆ ಎಂದು ದೂರಿದರು.
ಮಹಾಘಟಬಂಧನ್ ಹೆದರಿ ಹೋಗಿವೆ!
2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮಹಾಘಟಬಂಧನ್ ಹೆಚ್ಚು ಭಯಕ್ಕೊಳಗಾಗಿವೆ. ದೇಶದ ಜನರ ಮನೋಭಾವ ಕೂಡಾ ಬದಲಾಗಿದೆ. ದೇಶದಲ್ಲಿ ಪೂರ್ಣ ಪ್ರಮಾಣದ ಬಹುಮತ ಇರುವ ಸರ್ಕಾರವನ್ನೇ ಜನರು ಬಯಸುತ್ತಾರೆ. ಕಳೆದ 30 ವರ್ಷಗಳಲ್ಲಿ ಅಸ್ಥಿರತೆಯ ಸರ್ಕಾರಗಳನ್ನು ನೋಡಿದ್ದಾರೆ. ಜೊತೆಗೆ ಐದು ವರ್ಷಗಳ ಪೂರ್ಣ ಬಹುಮತ ಇರುವ ಸರ್ಕಾರವನ್ನು ನೋಡಿದ್ದಾರೆ. ಹೀಗಾಗಿ ದೇಶದ ಜನರಿಗೆ ಮತ್ತೆ ಅಸ್ಥಿರ ಸರ್ಕಾರ ರಚನೆ ಬೇಕಾಗಿಲ್ಲ ಎಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ವಿವರಿಸಿದ್ದಾರೆ.
ವಂಶಾಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ:
ದೇಶದ ರಾಜಕಾರಣದಲ್ಲಿ ಒಂದೇ ಕುಟುಂಬದ ನಾಲ್ಕು ತಲೆಮಾರುಗಳು ಬಡತನ ನಿರ್ಮೂಲನೆ ಬಗ್ಗೆಯೇ ಮಾತನಾಡಿವೆ. ಇಂದಿರಾ ಗಾಂಧಿ ಕೂಡಾ ಗರಿಬೀ ಹಠಾವೋ ಎಂದರು, ರಾಜೀವ್ ಗಾಂಧಿ, ಈಗ ರಾಹುಲ್ ಗಾಂಧಿ ಬಡತನ ನಿರ್ಮೂಲನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.