Lok Sabha Elections ಹಂತ-5: ಇಂದು ಮತ; ರಾಹುಲ್, ರಾಜನಾಥ್,ಸ್ಮೃತಿ ಭವಿಷ್ಯ ನಿರ್ಧಾರ
Team Udayavani, May 20, 2024, 6:15 AM IST
ಹೊಸದಿಲ್ಲಿ: ಲೋಕಸಭಾ ಚುನಾವಣೆಯ 5ನೇ ಹಂತದಲ್ಲಿ ಸೋಮವಾರ ದೇಶದ 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹಾಗೆಯೇ ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ರಾಯ್ ಬರೇಲಿ), ಬಿಜೆಪಿ ನಾಯಕಿ ಸ್ಮೃತಿ ಇರಾನಿ, ಕಾಂಗ್ರೆಸ್‌ನ ಕಿಶೋರಿಲಾಲ್ ಶರ್ಮ (ಅಮೇಠಿ), ಕೇಂದ್ರ ಸಚಿವ ಪೀಯೂಷ್ ಗೋಯಲ್ (ಮುಂಬಯಿ ಉತ್ತರ), ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ (ಲಕ್ನೋ), ಚಿರಾಗ್ ಪಾಸ್ವಾನ್ (ಹಾಜಿಪುರ) ಕಣದಲ್ಲಿರುವ ಪ್ರಮುಖರು.
ಬಿಹಾರ, ಜಮ್ಮು-ಕಾಶ್ಮೀರ, ಲಡಾಖ್, ಝಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರಪ್ರದೇಶ, ಪ. ಬಂಗಾಲಗಳಲ್ಲಿ ಮತದಾನ ನಡೆಯಲಿದೆ. ಈ ಹಿಂದಿನ ಪ್ರತೀ ಹಂತದಲ್ಲೂ ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗಿರುವುದು ಕಂಡುಬಂದಿದೆ. ಚುನಾವಣ ಆಯೋಗ ಈ ಬಾರಿ ವಿಶೇಷವಾಗಿ ಮನವಿ ಮಾಡಿದ್ದು, ಮನೆಯಿಂದ ಹೊರಬಂದು ಮತ ಚಲಾಯಿಸುವಂತೆ ನಗರ ಮತದಾರರಲ್ಲಿ ಕೇಳಿಕೊಂಡಿದೆ.
2019ರಲ್ಲಿ ಬಿಜೆಪಿ 32, ಕಾಂಗ್ರೆಸ್‌ಗೆ ಕೇವಲ 1 ಸ್ಥಾನ
ಸೋಮವಾರ ಮತದಾನ ನಡೆಯಲಿರುವ 49 ಕ್ಷೇತ್ರಗಳಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ ಯೊಂದೇ 32 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಉಳಿದ 9 ಸ್ಥಾನಗಳಲ್ಲಿ ಹಿಂದಿನ ಅವಿಭಜಿತ ಶಿವಸೇನೆ 7, ಬಿಜೆಡಿ 2 ಸ್ಥಾನ ಗೆದ್ದಿತ್ತು.
ಅಂಕಿಸಂಖ್ಯೆಗಳು
1.5ನೇ ಹಂತದ ಚುನಾವಣೆಯಲ್ಲಿ 49 ಲೋಕ
ಸಭಾ ಕ್ಷೇತ್ರಗಳು. 39 ಸಾಮಾನ್ಯ, 3 ಪರಿಶಿಷ್ಟ ಪಂಗಡ, 7 ಪರಿಶಿಷ್ಟ ಜಾತಿ ಮೀಸಲು ಸ್ಥಾನಗಳು.
2.ಬಿಹಾರ 5, ಜಮ್ಮು-ಕಾಶ್ಮೀರ 1, ಝಾರ್ಖಂಡ್ 3, ಲಡಾಖ್ 1, ಮಹಾರಾಷ್ಟ್ರ 13, ಒಡಿಶಾ 5, ಉತ್ತರ ಪ್ರದೇಶ 14, ಪ. ಬಂಗಾಲ 7 ಕ್ಷೇತ್ರ.
3.ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿ. ಮಹಾ ರಾಷ್ಟ್ರ ಒಂದರಲ್ಲೇ 264 ಅಭ್ಯರ್ಥಿಗಳು.
4.ಒಟ್ಟು ಮತದಾರರು 8.95 ಕೋಟಿ. ಈ ಪೈಕಿ 4.69 ಕೋಟಿ ಪುರುಷರು, 4.26 ಕೋಟಿ ಮಹಿಳೆಯರು, 5,409 ತೃತೀಯ ಲಿಂಗಿಗಳು. 94,732 ಮತಗಟ್ಟೆಗಳು, 9.47 ಲಕ್ಷ ಚುನಾವಣ ಅಧಿಕಾರಿಗಳು.
5.85 ವರ್ಷ ದಾಟಿದ ಮತದಾರರು 7.81 ಲಕ್ಷ, ಶತಾಯುಷಿಗಳು 24,792.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.