ಸಂಸದರ ವೇತನ ಕಡಿತ ಮಸೂದೆಗೆ ಸಂಸತ್ ಅಸ್ತು!
Team Udayavani, Sep 15, 2020, 8:12 PM IST
ಹೊಸದಿಲ್ಲಿ: ಪ್ರತೀ ಬಾರಿಯೂ ಯಾವುದೇ ಚರ್ಚೆ ಇಲ್ಲದೇ, ಗದ್ದಲ-ಗಲಾಟೆಗಳಿಲ್ಲದೇ ಸರ್ವಾನುಮತದಿಂದ ಸಂಸತ್ತಿನಲ್ಲಿ ಪಾಸ್ ಆಗುತ್ತಿದ್ದ ಮಸೂದೆ ಎಂದರೆ ಅದು ಸಂಸದರ ವೇತನ ಮತ್ತು ಭತ್ಯೆ ಏರಿಕೆಯ ಮಸೂದೆ!
ಆದರೆ ಕೋವಿಡ್ 19 ಸಂಕಷ್ಟಕ್ಕೆ ಈ ಬಾರಿ ಸಂಸದರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇದರ ಪರಿಣಾಮವಾಗಿ ತಮ್ಮ ಒಂದು ವರ್ಷದ ಅವಧಿಯ ವೇತನದಿಂದ 30% ಕಡಿತ ಮಾಡಲು ಸಂಸತ್ ಸದಸ್ಯರು ಇಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.
ಈ ಕುರಿತಾಗಿ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಸಂಸತ್ ಸದಸ್ಯರ ವೇತನ, ಭತ್ಯೆಗಳು ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ, 2020ಕ್ಕೆ ಅಂಗೀಕಾರ ದೊರೆತಿದೆ.
ಸೋಮವಾರದಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈ ವರ್ಷದ ಪ್ರಾರಂಭದಲ್ಲಿ ಕೇಂದ್ರ ಸರಕಾರವು ‘ಸಚಿವರ ವೇತನ ಮತ್ತು ಭತ್ಯೆಗಳು (ತಿದ್ದುಪಡಿ) ಸುಗ್ರೀವಾಜ್ಞೆ, 2020ರ ಮೂಲಕ ಪ್ರತೀ ಕೇಂದ್ರ ಸಚಿವರ ಒಂದು ವರ್ಷದ ವೇತನದಲ್ಲಿ 30% ಕಡಿತ ಮಾಡುವ ನಿರ್ಧಾರವನ್ನು ಮಾಡಿತ್ತು ಮತ್ತು ಈ ಕಡಿತ ಕಳೆದ ಎಪ್ರಿಲ್ 01ರಿಂದ ಜಾರಿಗೆ ಬರುವಂತೆ ಅನ್ವಯಗೊಳಿಸಲಾಗಿತ್ತು.
ಎಪ್ರಿಲ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಸಂಸತ್ ಸದಸ್ಯರು ಮತ್ತು ಸಚಿವರ ವೇತನ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಗೆ ಒಪ್ಪಿಗೆ ನಿಡಲಾಗಿತ್ತು. ಇದರ ಪ್ರಕಾರ ಸಂಸತ್ ಸದಸ್ಯರು ಹಾಗೂ ಕೇಂದ್ರ ಸಚಿವರ ಭತ್ಯೆ ಹಾಗೂ ಪಿಂಚಣಿ ಮೊತ್ತದಲ್ಲಿ 30% ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು.
ಮತ್ತು ಇದೇ ಸಂಪುಟ ಸಭೆಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನೂ ಸಹ ಮುಂದಿನ ಎರಡು ವರ್ಷಗಳ ಕಾಲ ರದ್ದು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಮತ್ತು ಈ ಮೊತ್ತವನ್ನು ಸರಕಾರದ ಸಮಗ್ರ ನಿಧಿಗೆ ವರ್ಗಾಯಿಸುವ ನಿರ್ಧಾರವನ್ನೂ ಸಹ ಈ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು.
ಸಂಸದರ ವೇತನ ಕಡಿತ ಮಸೂದೆಗೆ ಕೆಳಮನೆಯ ಅನುಮೋದನೆ ದೊರೆತ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾಬ್ಡೇಕರ್ ಅವರು, ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಎಲ್ಲಾ ರಾಜ್ಯಗಳ ರಾಜ್ಯಪಾಲರೂ ಸಹ ತಮ್ಮ ತಮ್ಮ ವೇತನದ 30% ಕಡಿತಗೊಳಿಸುವಂತೆ ಕೇಳಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.