Lokasabha Session: ವಿದೇಶಿ ಶಕ್ತಿ ಜತೆ ರಾಹುಲ್ ನಂಟು ಬಿಜೆಪಿ ಆರೋಪ: ಕಾಂಗ್ರೆಸ್ ವ್ಯಗ್ರ
ಸಂಸದ ದುಬೆ ಆರೋಪದ ಬಳಿಕ ಲೋಕಸಭೆಯಲ್ಲಿ ಭಾರೀ ಕೋಲಾಹಲ
Team Udayavani, Dec 6, 2024, 3:44 AM IST
ಹೊಸದಿಲ್ಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಅಮೆರಿಕ ಮೂಲದ ಶತಕೋಟ್ಯಧೀಶರೊಬ್ಬರ ಜತೆ ಬಿಜೆಪಿ ನಂಟು ಕಲ್ಪಿಸಿದ ಹಿನ್ನೆಲೆಯಲ್ಲಿ ಗುರುವಾರ ಲೋಕಸಭೆ 2 ಬಾರಿ ಮುಂದೂಡಿಕೆಯಾಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಬಿಜೆಪಿಯ ನಿಶಿಕಾಂತ್ ದುಬೆ, ಶತಕೋಟ್ಯಧೀಶ ಜಾರ್ಜ್ ಸೋರೋಸ್ ನಂಟು ಹೊಂದಿರುವ ಒಸಿಸಿಆರ್‌ಪಿ (ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ರಿಪೋರ್ಟಿಂಗ್ ಪ್ರಾಜೆಕ್ಟ್) ಪ್ರಕಟಿಸಿದ ವರದಿ ಆಧಾರದ ಮೇಲೆ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಕಲಾಪವನ್ನು ಹಾಳು ಮಾಡುತ್ತಿವೆ ಎಂದು ಆರೋಪಿಸಿದರು. ದುಬೆ ಅವರ ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ರಾಹುಲ್ ದೇಶದ್ರೋಹಿ- ಬಿಜೆಪಿ:
ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ತನಿಖಾ ಮಾಧ್ಯಮ ಸಂಸ್ಥೆಗಳು ಸೇರಿದಂತೆ ವಿದೇಶಿ ಶಕ್ತಿಗಳ ಜತೆ ರಾಹುಲ್ ಗಾಂಧಿ ನಂಟು ಹೊಂದಿದ್ದಾರೆ. ಅವರೊಬ್ಬ ದೇಶದ್ರೋಹಿ ಎಂದು ಬಿಜೆಪಿ ನಾಯಕ ಸಂಭಿತ್ ಪಾತ್ರಾ ಆರೋಪಿಸಿದ್ದಾರೆ. ಜಾರ್ಜ್ ಸೋರೋಸ್-ಒಸಿಸಿಆರ್‌ಪಿ- ರಾಹುಲ್ ಗಾಂಧಿ- ಇದೊಂದು ಅಪಾಯಕಾರಿ ತ್ರಿಕೋನ ನಂಟು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.