ಲೋಕಸಭಾ ಚುನಾವಣೆ ಫ‌ಲಿತಾಂಶ; ಮೋದಿ ಜಸ್ಟ್‌ಪಾಸ್‌!

ಆದರೂ ಐಎನ್‌ಡಿಐಎ ಒಕ್ಕೂಟದಿಂದ ಔಟ್‌ ಆಫ್ಸಿಲಬಸ್‌ ಪ್ಲಾನ್‌?

Team Udayavani, Jun 5, 2024, 7:00 AM IST

ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟ; ಮೋದಿ ಜಸ್ಟ್‌ಪಾಸ್‌!

ಹೊಸದಿಲ್ಲಿ: 18ನೇ ಲೋಕಸಭಾ ಚುನಾ­ವಣೆಯನ್ನು ಗೆಲ್ಲಲು ಇನ್ನಿಲ್ಲದಂತೆ ಕಸರತ್ತು ನಡೆಸಿದ ಐಎನ್‌ಡಿಐಎ ಮೈತ್ರಿಕೂಟ, ಬಹುಮತದ ಹತ್ತಿರ ಬಂದಿದೆ. ಆದರೆ ಸರಕಾರ ರಚನೆ ಮಾಡುವುದಕ್ಕೆ ಅಗತ್ಯವಿರುವ 272 ಸ್ಥಾನಗಳು ಮಾತ್ರ ಲಭಿಸಿಲ್ಲ. ಹಾಗಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ ಮುಂತಾದವರು ಸುಮ್ಮನೆ ಕುಳಿತಿಲ್ಲ. ಬಹುಮತವಿಲ್ಲ­ದಿದ್ದರೂ ಸರಕಾರ ರಚನೆ ಮಾಡಲು “ಔಟ್‌ ಆಫ್ ಸಿಲಬಸ್‌’ ಮಾರ್ಗದಲ್ಲಿ ಪ್ಲಾನ್‌ ಮಾಡುವ ಸಾಧ್ಯತೆಯಿದೆ.

ನೀವು ಸರಕಾರ ರಚನೆ ಮಾಡುತ್ತೀರಾ? ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಯಾವುದೇ ಉತ್ತರ ನೀಡಿಲ್ಲ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಹುಲ್‌, ನಾವಿನ್ನೂ ಈ ವಿಷಯವನ್ನು ಮಿತ್ರಪಕ್ಷಗಳ ಜತೆಗೆ ಚರ್ಚೆ ನಡೆಸಿಲ್ಲ. ಹಾಗಾಗಿ ಇವತ್ತು ನನ್ನಲ್ಲಿ ಇದಕ್ಕೆ ಉತ್ತರವಿಲ್ಲ. ಆದರೆ ನಾಳೆ (ಬುಧವಾರ) ನನ್ನಲ್ಲಿ ಉತ್ತರವಿರುತ್ತದೆ ಎಂದು ಹೇಳಿದ್ದಾರೆ.

ಖರ್ಗೆ ಮಾತನಾಡಿ, ನಾವು ಈ ಬಗ್ಗೆ ಇನ್ನೂ ಮಿತ್ರಪಕ್ಷಗಳ ಜತೆಗೆ ಮಾತಾಡಿಲ್ಲ. ನಮ್ಮೊಂದಿಗೆ ಸೇರಲಿರುವ ಹೊಸ ಮಿತ್ರಪಕ್ಷಗಳ ಜತೆಗೂ ಚರ್ಚಿಸಿಲ್ಲ. ನಾವು ಅವರೊಂದಿಗೆ ಮಾತನಾಡಿ ಹೇಗೆ ಬಹುಮತ ಪಡೆಯ­ಬಹುದೆಂದು ಚರ್ಚಿಸುತ್ತೇವೆ ಎಂದು ನಿಗೂಢವಾಗಿ ಉತ್ತರಿಸಿದ್ದಾರೆ. ಖರ್ಗೆ ಈ ಉತ್ತರ ನೀಡುವ ಮೂಲಕ ಎನ್‌ಡಿಎ ಮಿತ್ರ ಪಕ್ಷಗಳನ್ನು ಐಎನ್‌ಡಿಐಎ ಕೂಟಕ್ಕೆ ಸೆಳೆಯುವ ಪರೋಕ್ಷ ಸುಳಿವು ನೀಡಿದ್ದಾರೆಂದು ವಿಶ್ಲೇಷಿಸಲಾಗಿದೆ. ಒಂದು ವೇಳೆ ಅದು ಗಂಭೀರವಾಗಿ ಈ ಯತ್ನ ನಡೆಸಿದಲ್ಲಿ ಸರಕಾರ ರಚನೆಗೆ ಎನ್‌ಡಿಎ-ಐಎನ್‌ಡಿಐಎ ನಡುವೆ ಹಗ್ಗ ಜಗ್ಗಾಟ ನಡೆಯುವ ಸಾಧ್ಯತೆಯಿದೆ.

ಏನೇನು ದಾರಿಗಳಿವೆ?
ಎನ್‌ಡಿಎ ಮಿತ್ರಪಕ್ಷಗಳನ್ನು ಸೆಳೆಯಲು ಐಎನ್‌ಡಿಐಎ ಕೂಟ ಬಲವಾದ ಪ್ರಯತ್ನ ನಡೆಸಬಹುದು
ಇತರ ರೂಪದಲ್ಲಿ ಗೆದ್ದಿರುವ ಸಂಸದರನ್ನು ಸಂಪರ್ಕಿಸಿ ಒಳಕ್ಕೆಳೆದುಕೊಳ್ಳಬಹುದು. ಆದರೆ ಇದು ಕಷ್ಟದ ದಾರಿ
ಬಿಜೆಪಿ-ಮೋದಿಯ ಮೇಲೆ ವಿಪಕ್ಷಗಳಿಗೆ ಇರುವ ಸಿಟ್ಟನ್ನೇ ಅವಕಾಶವನ್ನಾಗಿ ಮಾಡಿಕೊಂಡು ನಿತೀಶ್‌, ಚಂದ್ರಬಾಬು ಅವರನ್ನು ಸೆಳೆಯಲು ಯತ್ನಿಸಬಹುದು

ನಿತೀಶ್‌, ಚಂದ್ರಬಾಬು “ಕೃಪಾಂಕ’ ಸಿಗುತ್ತಾ ಐಎನ್‌ಡಿಐಎ ಮೈತ್ರಿಗೆ?
ಮೂಲಗಳ ಪ್ರಕಾರ ನಿತೀಶ್‌ ಕುಮಾರ್‌ ನಾಯಕತ್ವದ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೃಪಾಂಕ­ಕ್ಕಾಗಿ ಐಎನ್‌ಡಿಐಎ ಮೈತ್ರಿಕೂಟ ಬಲವಾದ ಯತ್ನ ನಡೆಸಿದೆ. ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಎರಡೂ ಪಕ್ಷಗಳು ಎನ್‌ಡಿಎ ಬಹುಮತದಲ್ಲಿ ಮಹ­ತ್ವದ ಪಾತ್ರ ವಹಿಸಿವೆ. ಹೀಗಾಗಿ ಈ ಇಬ್ಬರು ನಾಯಕರನ್ನು ಸೆಳೆಯಲು ನಿತೀಶ್‌ಕುಮಾರ್‌ಗೆ ಉಪ್ರಪ್ರಧಾನಿ ಸ್ಥಾನ ವನ್ನು, ಚಂದ್ರಬಾಬು ಅಧಿಕಾರದಲ್ಲಿರುವ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭರವಸೆ ನೀಡಿದ್ದಾರೆನ್ನಲಾಗಿದೆ.

ಪ್ರಿಪರೇಟರಿ ಹಂತದಲ್ಲೇ ಮೈತ್ರಿ ಮಾಡಿ ಗೆದ್ದ ಬಿಜೆಪಿ
ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಮುಖ್ಯ ಕಾರಣವಾಗಿರುವುದು 12 ಸ್ಥಾನ ಹೊಂದಿರುವ ನಿತೀಶ್‌ ಕುಮಾರ್‌ ಜೆಡಿಯು ಮತ್ತು 16 ಸ್ಥಾನ ಹೊಂದಿರುವ ಚಂದ್ರಬಾಬು ನಾಯ್ಡು ಟಿಡಿಪಿ. ವಾಸ್ತವವಾಗಿ ಈ ಎರಡೂ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಿಂದ ಹೊರ ಹೋಗಿದ್ದವು. ಜನವರಿ ಮಧ್ಯಾವಧಿ ಹೊತ್ತಿಗೆ ಐಎನ್‌ಡಿಐಎ ಕೂಟದ ಮೇಲೆ ಸಿಟ್ಟಾದ ನಿತೀಶ್‌ ದಿಢೀರ್‌ ಎನ್‌ಡಿಎ ಸೇರಿದರು. ಮಾರ್ಚ್‌ ಹೊತ್ತಿಗೆ ಚಂದ್ರಬಾಬು ಕೂಡ ಸೇರಿಕೊಂಡರು. ಚಾಣಕ್ಯ ಅಮಿತ್‌ ಶಾ ತಂತ್ರವೋ, ಆಗಲೇ ಬಿಜೆಪಿಗೆ ಸೋಲಿನ ಸುಳಿವು ಸಿಕ್ಕಿತ್ತೋ ಎನ್ನುವುದು ಖಾತ್ರಿಯಿಲ್ಲ. ಆದರೆ ಈ ಮೈತ್ರಿಯೇ ಬಿಜೆಪಿಯನ್ನು ಅಧಿಕಾರದಲ್ಲಿ ಉಳಿಸಿದೆ.

ಇದು ಐತಿಹಾಸಿಕ ವಿಜಯ
ಜನ ಎನ್‌ಡಿಎ ಮೇಲೆ ಸತತ 3ನೇ ಬಾರಿಗೆ ನಂಬಿಕೆ ಯಿ­ಟ್ಟಿದ್ದಾರೆ. ಇದು ಭಾರತೀಯ ಇತಿಹಾಸ­ದಲ್ಲಿ ಐತಿಹಾಸಿಕ ಸಾಧನೆ. ಆಂಧ್ರದಲ್ಲಿ ಚಂದ್ರಬಾಬು, ಬಿಹಾರದಲ್ಲಿ ನಿತೀಶ್‌ ಕುಮಾರ್‌ ನಾಯಕತ್ವದಲ್ಲಿ ಎನ್‌ಡಿಎ ಅತ್ಯುತ್ತಮ ಸಾಧನೆ ಮಾಡಿದೆ. ಅವರಿಗೆ ಧನ್ಯವಾದ. ಕಳೆದ 10 ವರ್ಷದಲ್ಲಿ ಮಾಡಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸು­ತ್ತೇವೆ. ಜನರ ಆಶೋತ್ತರಗಳನ್ನು ಪೂರೈಸುವ ದಿಕ್ಕಿನಲ್ಲಿ ನಡೆಯು­ತ್ತೇವೆ.
-ನರೇಂದ್ರ ಮೋದಿ, ಪ್ರಧಾನಿ

ಟಾಪ್ ನ್ಯೂಸ್

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.