![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Nov 29, 2018, 4:14 PM IST
ಅಲ್ವಾರ್(ರಾಜಸ್ಥಾನ): ಹಿಂದು ದೇವರಾದ ಹನುಮಂತ ದಲಿತನಾಗಿದ್ದ , ಇಡೀ ಭಾರತವನ್ನು ಒಗ್ಗೂಡಿಸಿದ್ದ,ನಮ್ಮ ಯೋಚನೆಗಳು ಹನುಮಂತನಂತೆ ಆಗಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಯೋಗಿ ನಾವೆಲ್ಲರೂ ಹನುಮಂತನಂತೆ ನಿರ್ಧಾರಗಳನ್ನು ಮಾಡಬೇಕು. ಸ್ವಯಂ ಆದಿವಾಸಿ,ದಲಿತ , ಶೋಷಿತನಾದರೂ ಇಡೀ ಭಾರತವನ್ನು ಒಗ್ಗೂಡಿಸಿದ್ದ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಭಾರತವನ್ನು ಒಂದು ಮಾಡಿದ್ದ ಎಂದರು.
ಇದೇ ವೇಳೆ ನಾವು ರಾಮನ ಕೆಲಸ ಪೂರ್ಣಗೊಳಿಸುವ ವರೆಗೆ ವಿರಮಿಸಬಾರದು ಎಂದರು.
ಈ ಹಿಂದೆ ಯೋಗಿ ಅವರು ಮಧ್ಯಪ್ರದೇಶದಲ್ಲಿ ಈ ಚುನಾವಣೆ ಬಜರಂಗ ಬಲಿ ಮತ್ತು ಕಾಂಗ್ರೆಸ್‌ನ ಅಲಿ ನಡುವಿನ ಹೋರಾಟ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
You seem to have an Ad Blocker on.
To continue reading, please turn it off or whitelist Udayavani.