ಕೃಷ್ಣ, ಹನುಮಂತ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು: ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿಕೆ
Team Udayavani, Jan 30, 2023, 7:15 AM IST
ನವದೆಹಲಿ: ಭಗವಾನ್ ಕೃಷ್ಣ ಹಾಗೂ ಹನುಮಂತ, ವಿಶ್ವದ ಶ್ರೇಷ್ಠ ರಾಜತಾಂತ್ರಿಕರು. ಜಗತ್ತಿನ ಅತ್ಯುತ್ತಮ 10 ಅಂತಾರಾಷ್ಟ್ರೀಯ ರಾಜತಾಂತ್ರಿಕ ಪರಿಕಲ್ಪನೆಯನ್ನ ಪರಿಗಣಿಸುವುದಾದರೆ ಅದರ ಮೂಲವೂ ಮಹಾಭಾರತವೇ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಜೈಶಂಕರ್ ಅವರ ದಿ-ಇಂಡಿಯನ್ ವೇ ಪುಸ್ತಕದ ಮರಾಠಿ ಅವತರಣಿಕೆ ಭಾರತ್ ಮಾರ್ಗ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ಅಂತಾರಾಷ್ಟ್ರೀಯ ಸಂಬಂಧ, ಯೋಜನೆ, ವಿಚಾರ ಮಂಡನೆ, ನಿಲುವು ಹೀಗೆ ಸಾಕಷ್ಟು ವಿಚಾರಗಳನ್ನು ಕೃಷ್ಣ-ಹನುಮಂತ ನಿಭಾಯಿಸಿದ ರೀತಿ ಹಾಗೂ ಪರಿಸ್ಥಿತಿ ಅನುಕರಣೀಯ ಎಂದರು.
ಸೀತಾದೇವಿಯ ಅಪಹರಣದ ಸಮಯದಲ್ಲಿ ಲಂಕೆಗೆ ತೆರಳಿದ್ದ ಆಂಜನೇಯ, ದುಷ್ಟ ಸಂಹಾರ ಹಾಗೂ ಸೀತಾದೇವಿಯ ರಕ್ಷಣೆ ಹೊಣೆ ಹೊತ್ತಿದ್ದ. ಆತನನ್ನು ವಿವಿಧ ಉದ್ದೇಶವನ್ನು ಹೊಂದಿದ್ದ ಅತ್ಯುತ್ತಮ ರಾಜತಾಂತ್ರಿಕನೆಂದು ಪರಿಗಣಸಿಬಹುದು.
ಅದೇ ರೀತಿ ಮಹಾಭಾರತವನ್ನು ನೋಡಿದರೆ ಕುರುಕ್ಷೇತ್ರ ನಿದರ್ಶನ. ವಿವಿಧ ರಾಜ್ಯಗಳ ರಾಜರು ನಾವು ಅವರ ಪರ, ವಿರೋಧ, ತಟಸ್ಥ ಎನ್ನುವ ನಿಲುವುಗಳನ್ನು ತಾಳಿದ್ದರು. ಆದರೆ, ಕೃಷ್ಣ ಧರ್ಮದ ಪರವಿದ್ದರು. ಅರ್ಜುನ ತನ್ನ ಸ್ವಂತ ರಕ್ತಸಂಬಂದಧ ವಿರುದ್ಧ ಹೋರಾಡಬೇಕೇ ಎಂದುಕೊಂಡರೂ, ಧರ್ಮವೇ ಮುಖ್ಯವೆಂದು ಯುದ್ಧ ಮಾಡಿದ. ಅಂತಹ ನಿರ್ಣಯಗಳು ಅಗತ್ಯ ಎಂದೂ ಜೈಶಂಕರ್ ಹೇಳಿದರು.
ಪಾಕ್ ಶಿಶುಪಾಲನಿದ್ದಂತೆ!
ಶ್ರೀ ಕೃಷ್ಣ ಶಿಶುಪಾಲನನ್ನು 100 ಬಾರಿ ಕ್ಷಮಿಸಿದಂತೆ, ಭಾರತವು ಪಾಕಿಸ್ತಾನದ ಉದ್ಧಟತನವನ್ನು ಸಹಿಸಿ ಪದೇ ಪದೆ ಕ್ಷಮಿಸುತ್ತಿದೆ. ಸಮಯ ಬಂದಾಗ ಹಾಗೂ ಶಿಷ್ಟರ ರಕ್ಷಣೆ ಆಗಲೇಬೇಕು ಎಂದಾಗ ದುಷ್ಟರ ಸಂಹಾರ ಮಾಡುವುದೇ ಧರ್ಮವೆಂದು ಮಹಾಭಾರತ ಹೇಳಿದೆ ಎಂದು ಜೈಶಂಕರ್ ಟಾಂಗ್ ನೀಡಿದ್ದಾರೆ.
ನಾನು ಸಚಿವನಾಗುತ್ತೇನೆಂದು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ. ಮೋದಿಯವರು ಪ್ರಧಾನಿ ಆಗಿರದಿದ್ದರೆ, ನನಗೆ ರಾಜಕೀಯಕ್ಕೆ ಎಂಟ್ರಿಯಾಗುವ ಧೈರ್ಯವಾದರೂ ಬರುತ್ತಿತ್ತೇ ಎಂದು ಹಲವು ಬಾರಿ ನನ್ನನ್ನು ನಾನೇ ಪ್ರಶ್ನಿಸಿದ್ದೇನೆ.
– ಎಸ್.ಜೈಶಂಕರ್, ವಿದೇಶಾಂಗ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.