ಮೂಕ ಪ್ರಾಣಿಯ ಈ ಪ್ರೀತಿಗೆ ಭಾಷೆಯಿಲ್ಲ!
Team Udayavani, Oct 15, 2021, 8:26 PM IST
ಇತ್ತೀಚೆಗೆ ತಮಿಳುನಾಡಿನ ಅರಣ್ಯ ಇಲಾಖೆಯ ಸಿಬ್ಬಂದಿ, ತನ್ನ ತಾಯಿಯಿಂದ ಬೇರ್ಪಟ್ಟು, ಕಾಡುಮೇಡಲ್ಲಿ ಅಲೆಯುತ್ತಾ ಗಾಯಗೊಂಡಿದ್ದ ಮರಿಯಾನೆಯೊಂದನ್ನು ರಕ್ಷಿಸಿ, ಅದನ್ನು ಅದರ ತಾಯಿಯ ಬಳಿ ಸೇರಿಸಿದ್ದರು. ಆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವೊಂದರಲ್ಲಿ ಮರಿಯಾನೆ, ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯ ಕಾಲುಗಳನ್ನು ತನ್ನ ಸೊಂಡಿಲಿನಿಂದ ಅಪ್ಪಿಕೊಂಡಿದೆ. ಹೃದಯಸ್ಪರ್ಶಿಯಾದ ಈ ಫೋಟೋವನ್ನು ತಮಿಳುನಾಡಿನ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್, ಟ್ವೀಟ್ ಮಾಡಿ, “ಪ್ರೀತಿಗೆ ಭಾಷೆಯಿಲ್ಲ.
ಮರಿಯಾನೆ ನಮ್ಮ ಅರಣ್ಯಾಧಿಕಾರಿಯನ್ನು ಆಲಿಂಗಿಸಿಕೊಂಡ ರೀತಿಯಿದು. ನಮ್ಮ ತಂಡ, ಇದನ್ನು ರಕ್ಷಿಸಿ, ಅದರ ತಾಯಿಯ ಬಳಿ ಸೇರಿಸಿದೆ” ಎಂಬ ಅಡಿಬರಹ ಹಾಕಿದ್ದರು. ಒಡನೆಯೇ ವೈರಲ್ ಆದ ಈ ಟ್ವೀಟ್, ಸಾವಿರಕ್ಕೂ ಹೆಚ್ಚು ರೀಟ್ವೀಟ್ ಹಾಗೂ 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
Love has no language. A baby elephant hugging a forest officer. The team rescued this calf & reunited with mother. pic.twitter.com/BM66tGrhFA
— Parveen Kaswan, IFS (@ParveenKaswan) October 14, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.