ಉತ್ತರ ತ್ರಿಪುರದಲ್ಲಿ ಲಘು ಭೂಕಂಪನ; ನಾಶ-ನಷ್ಟ, ಜೀವ ಹಾನಿ ಇಲ್ಲ
Team Udayavani, Feb 25, 2017, 5:36 PM IST
ಅಗರ್ತಲಾ : ತ್ರಿಪುರದಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 4.0 ಅಂಕಗಳಲ್ಲಿ ದಾಖಲಾಗಿದೆ.
ಉತ್ತರ ತ್ರಿಪುರ ಜಿಲ್ಲೆಯಲ್ಲಿ ಇಂದುಮಧ್ಯಾಹ್ನ 12.32ರ ಸುಮಾರಿಗೆ ಲಘು ಭೂಕಂಪನ ಸಂಭವಿಸಿದ್ದು ಸುಮಾರು ಆರರಿಂದ ಏಳು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ ಎಂದು ಅಗರ್ತಲಾದಲ್ಲಿನ ಹವಾಮಾನ ಇಲಾಖೆಯ ನಿರ್ದೇಶಕ ದಿಲೀಪ್ ಸಾಹಾ ತಿಳಿಸಿದ್ದಾರೆ.
ಭೂಕಂಪನವು ಲಘುವಾಗಿದ್ದುದರಿಂದ ಉ¤ರ ತ್ರಿಪುರ ಜಿಲ್ಲೆಯಲ್ಲಿ ಯಾವುದೇ ನಾಶ ನಷ್ಟ, ಜೀವ ಹಾನಿ ಉಂಟಾಗಿಲ್ಲ ಎಂದು ತ್ರಿಪುರದ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಪ್ರಭಾರಾಧಿಕಾರಿ ಯಾಗಿರುವ ಸರಳ್ ದಾಸ್ ತಿಳಿಸಿದ್ದಾರೆ.
ದೇಶದ ಈಶಾನ್ಯ ಭಾಗವು ಭೂಕಂಪಗ್ರಸ್ತ ವಲಯವಾಗಿರುವುದರಿಂದ ಇಲ್ಲಿ ಆಗೀಗ ಎಂಬಂತೆ ಭೂಕಂಪನ ಅಥವಾ ಭೂಕಂಪಗಳು ಸಂಭವಿಸುವುದು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ