ಎಲ್ಪಿಜಿ ಬೆಲೆ 2 ರೂ. ಏರಿಕೆ
Team Udayavani, Nov 10, 2018, 6:00 AM IST
ನವದೆಹಲಿ/ಲಂಡನ್: ಗೃಹಬಳಕೆ ಎಲ್ಪಿಜಿ ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಸಿಲಿಂಡರ್ ಮೇಲೆ 2 ರೂ. ಏರಿಸಿದೆ.
ಎಲ್ಪಿಜಿ ಡೀಲರುಗಳಿಗೆ ಕಮಿಷನ್ ಹೆಚ್ಚಳ ಮಾಡಿದ್ದರಿಂದಾಗಿ ಈ ಏರಿಕೆಯಾಗಿದೆ. 14.2 ಕಿಲೋ ಸಿಲಿಂಡರ್ ಮೇಲೆ ಡೀಲರುಗಳಿಗೆ 48.89 ರೂ. ಹಾಗೂ 5 ಕಿಲೋ ಸಿಲಿಂಡರ್ ಮೇಲೆ 24.20 ರೂ.ಗೆ ನಿಗದಿಪಡಿಸಲಾಗಿದೆ. ಇದನ್ನು ರೂ. 50.58 ಹಾಗೂ ರೂ. 25.29 ಕ್ಕೆ ಏರಿಕೆ ಮಾಡಲಾಗಿದೆ. ಕಮಿಷನ್ ಪರಿಷ್ಕರಣೆ ಸಂಬಂಧ ಅಧ್ಯಯನ ನಡೆಯುತ್ತಿದ್ದು, ಮಧ್ಯಂತರದ ಕ್ರಮವಾಗಿ ಈ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೇಳಿದೆ.
ಈ ತಿಂಗಳಲ್ಲೇ ಇದು ಎರಡನೇ ಏರಿಕೆಯಾಗಿದ್ದು, ನವೆಂಬರ್ 1ರಂದು 2.94 ರೂ. ಏರಿಕೆ ಮಾಡಲಾಗಿತ್ತು. ಆಗ ಮೂಲ ಬೆಲೆಯ ಮೇಲೆ ಜಿಎಸ್ಟಿ ಅನ್ವಯಿಸಿದ್ದರಿಂದಾಗಿ ಬೆಲೆ ಏರಿಕೆಯಾಗಿತ್ತು. ಕಳೆದ ಜೂನ್ನಿಂದ ಈವರೆಗೆ ಪ್ರತಿ ಸಿಲಿಂಡರ್ ಮೇಲೆ ಒಟ್ಟು 16.21 ರೂ. ಏರಿಕೆಯಾಗಿದೆ.ಡೀಲರ್ ಕಮಿಷನ್ನಲ್ಲಿ ಎರಡು ಭಾಗವಿದ್ದು, ಸಾಂಸ್ಥಿಕ ಶುಲ್ಕ 30.08 ರೂ. ಹಾಗೂ ಡೆಲಿವರಿ ಶುಲ್ಕ 20.50 ರೂ. ಎಂದು ನಿಗದಿಸಲಾಗಿದೆ. ವಿತರಕರ ಸ್ಥಳದಿಂದ ತಾವೇ ಸಿಲಿಂಡರ್ ತೆಗೆದುಕೊಂಡು ಹೋದರೆ ಡೆಲಿವರಿ ಶುಲ್ಕ ಪಾವತಿಸಬೇಕಿಲ್ಲ.
ಕಚ್ಚಾತೈಲ ಬೆಲೆ ಇಳಿಕೆ: ಭಾನುವಾರ (ನ.11) ಅಬುಧಾಬಿಯಲ್ಲಿ ತೈಲ ಉತ್ಪಾದನೆ ರಾಷ್ಟ್ರಗಳ ಮುಖಂಡರ ಸಭೆಗೂ ಮುನ್ನ ಕಚ್ಚಾ ತೈಲ ಬೆಲೆ ಇಳಿಕೆ ಕಂಡಿದೆ. ಈ ವರ್ಷದ ಏಪ್ರಿಲ್ ನಂತರ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 70 ಡಾಲರ್ಗಿಂತ ಕೆಳಕ್ಕೆ ಕುಸಿದಿದೆ. ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ. ಕಳೆದ ಜನವರಿಯಲ್ಲಿ ಬ್ಯಾರೆಲ್ಗೆ 69.69 ಡಾಲರ್ಗೆ ಇಳಿದಿದ್ದ ಬೆಲೆ, ನಂತರ 100 ಡಾಲರ್ ವರೆಗೆ ಏರಿಕೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.