ಉಗ್ರ ಸೈಫ‌ುಲ್ಲಾನ ತಂದೆ ನಿಲುವಿಂದ ಭಾರತಕ್ಕೆ ಹೆಮ್ಮೆ


Team Udayavani, Mar 10, 2017, 3:45 AM IST

PTI3_9_2017_000050B.jpg

ನವದೆಹಲಿ: “ಉಗ್ರ ಸೈಫ‌ುಲ್ಲಾನ ತಂದೆಯನ್ನು ನೋಡಿ ಇಡೀ ದೇಶ ಹೆಮ್ಮೆಪಡುಧಿತ್ತದೆ. ಸಂಸತ್‌ ಕೂಡ ಅವರನ್ನು ಅಭಿನಂದಿಸುತ್ತದೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಲೋಕಸಭೆಗೆ ತಿಳಿಸಿದ್ದಾರೆ. 

“ನಾನು ಭಾರತೀಯ, ಉಗ್ರ ಮಗನ ದೇಹವನ್ನು ಮುಟ್ಟಲಾರೆ’ ಎಂದು ಸೈಫ‌ುಲ್ಲಾನ ಮೃತದೇಹವನ್ನು ತಂದೆ ಸರ್ತಾಜ್‌ ತಿರಸ್ಕರಿಸಿದ್ದರು. ಉ.ಪ್ರ. ಮತ್ತು ಮ.ಪ್ರ.ದಲ್ಲಿನ ಉಗ್ರರ ವಿರುದ್ಧದ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ರಾಜನಾಥ್‌ ಸಿಂಗ್‌, “ಸೈಫ‌ುಲ್ಲಾ ಶರಣಾಗತಿಗೆ ನಿರಾಕರಿಸಿದ ಕಾರಣಕ್ಕಾಗಿ ಎನ್‌ಕೌಂಟರ್‌ ಮಾಡಲಾಯಿತು. ಎರಡೂ ರಾಜ್ಯಗಳಲ್ಲಿ ಒಟ್ಟು 6 ಶಂಕಿತರನ್ನು ಬಂಧಿಸಲಾಗಿದೆ. ಕೇಂದ್ರ ಏಜೆನ್ಸಿ ಮತ್ತು ರಾಜ್ಯ ಪೊಲೀಸರ ನಡುವಿನ ಹೊಂದಾಣಿಕೆ ಇದ್ದರೆ ಉಗ್ರರನ್ನು ಹೇಗೆಲ್ಲ ಮಟ್ಟ ಹಾಕಬಹುದು ಎಂಬುದನ್ನು ಈ ಘಟನೆ ತೋರಿಸಿದೆ. ಉಭಯ ರಾಜ್ಯಗಳ ಪೊಲೀಸರು ಉಗ್ರರ ಜಾಡು ಹಿಡಿಯಲು ಅಪಾರ ಸಹಕರಿಸಿದರು. ರಾಷ್ಟ್ರೀಯ ಭದ್ರತೆ ಗಟ್ಟಿ ಆಗುವುದು ಇಂಥ ಸಂಬಂಧಗಳಿಂದಲೇ’ ಎಂದು ಪೊಲೀಸರ ಕಾರ್ಯವನ್ನು ಪ್ರಶಂಸಿಸಿದರು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದಾಗಿ ತಿಳಿಸಿದರು.

ಇನ್ನೂ ಇಬ್ಬರ ಬಂಧನ: ಲಕ್ನೋದಲ್ಲಿನ ಗುಂಡಿನ ಚಕಮಕಿ ಮತ್ತು ಉಜ್ಜೆ„ನಿ ರೈಲಿನ ಸ್ಫೋಟದ ಹಿಂದಿನ ಮಾಸ್ಟರ್‌ವೆುçಂಡ್‌ನ‌ನ್ನು ಉಗ್ರ ನಿಗ್ರಹ ದಳ (ಎಟಿಎಸ್‌) ಗುರುವಾರ ಕಾನ್ಪುರದಲ್ಲಿ ಬಂಧಿಸಿದೆ. ಆತ ಭಾರತೀಯ ಸೇನೆಯ ಮಾಜಿ ಸೇನಾನಿ ಎಂಬ ಆಘಾತದ ಸಂಗತಿ ವಿಚಾರಣೆಯಲ್ಲಿ ತಿಳಿದುಬಂದಿದೆ. ಉ.ಪ್ರ. ಎಡಿಜಿ ದಲ್ಜಿತ್‌ ಚೌಧರಿ ಈ ಬಗ್ಗೆ ಸ್ಪಷ್ಟಪಡಿಸಿದ್ದು, “ಕಾನ್ಪುರದಲ್ಲಿ ಶಂಕಿತ ಮೊಹ್ಮದ್‌ ಗೌಸ್‌ ಖಾನ್‌ನನ್ನು ಬಂಧಿಸಲಾಗಿದೆ. ಆತ ಮಾಜಿ ಐಎಎಫ್. ಉಗ್ರಪಡೆಗೆ ತಾಂತ್ರಿಕ ನೆರವನ್ನು ಒದಗಿಸುತ್ತಿದ್ದ. ಈತನ ವಿಚಾರಣೆ ವೇಳೆ ಅಜರ್‌ ಎಂಬ ಶಂಕಿತನ ಹೆಸರು ಬಹಿರಂಗವಾಗಿದ್ದು, ಆತನನ್ನೂ ಬಂಧಿಸಲಾಗಿದೆ’ ಎಂದಿದ್ದಾರೆ. ಉಗ್ರನ ಎನ್‌ಕೌಂಟರ್‌ ಬಳಿಕ ಒಟ್ಟು ಐವರು ಶಂಕಿತರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. 

ಡಿಗ್ಗಿಗೆ ಒವೈಸಿ ತಿರುಗೇಟು
ಬಿಜೆಪಿ ಸರ್ಕಾರ ಮುಸ್ಲಿಮರನ್ನು ಕಡೆಗಣಿಸಿದ ಕಾರಣಕ್ಕೆ ಯುವಕರು ಉಗ್ರರಾಗುತ್ತಿದ್ದಾರೆ ಎಂದು ಟ್ವೀಟಿಸಿದ್ದ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ತಿರುಗೇಟು ನೀಡಿದ್ದಾರೆ. “ದಿಗ್ವಿಜಯ್‌ ಬಹುಶಃ ಉಗ್ರತಜ್ಞ ಇದ್ದಿರಬಹುದು. ಆದರೆ, ನಾನಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ 15 ವರ್ಷ ಅಧಿಕಾರದಲ್ಲಿದ್ದಾಗ 28 ಮಂದಿ ಅಮಾಯಕ ಮುಸ್ಲಿಮರನ್ನು ಜೈಲಲ್ಲಿಟ್ಟು ಹಿಂಸಿಸಿತ್ತು. ಕಾಂಗ್ರೆಸ್‌ ಆಡಳಿತದಲ್ಲಿ ದೇಶದಲ್ಲಿ ಇಂಥ ಹಲವು ಉದಾಹರಣೆ ಸಿಗುತ್ತವೆ. ಸೆಕ್ಯುಲರಿಸಂ ಅಂಗಡಿಯನ್ನು ಕಾಂಗ್ರೆಸ್‌ ಮುಚ್ಚಬೇಕು. ಬಿಜೆಪಿ ರಾಷ್ಟ್ರೀಯತೆಯ ಅಂಗಡಿ ನಡೆಸುವುದನ್ನು ನಿಲ್ಲಿಸಬೇಕು’ ಎಂದು ಕುಟುಕಿದ್ದಾರೆ.

ಒಬ್ಬ ಸಾಮಾನ್ಯನ ನಿರ್ಧಾರವನ್ನು ಸಂಸತ್‌ ಗೌರವಿಸಿದ್ದಕ್ಕೆ ಖುಷಿ ಆಗಿದೆ. ದೇಶಕ್ಕೆ ಒಳ್ಳೆಯ ಸಂದೇಶ ರವಾನೆಯಾಗಿದೆ.
– ಸರ್ತಾಜ್‌, ಉಗ್ರನ ತಂದೆ

ಟಾಪ್ ನ್ಯೂಸ್

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.