Lucknow: ಪತ್ನಿ, ಮಕ್ಕಳನ್ನು ಕೊಂದು ಶವದೊಂದಿಗೆ ಮೂರು ದಿನ ಕಳೆದ ವ್ಯಕ್ತಿ
Team Udayavani, Apr 1, 2024, 9:58 AM IST
ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಜ್ಯೋತಿ(30) ಪಾಯಲ್ (6) ಮತ್ತು ಆನಂದ್ (3) ಕೊಲೆಗೀಡಾದವರು. ರಾಮ್ ಲಗಾನ್(32) ಆರೋಪಿ ಪತಿ.
ರಾಮ್ ಲಗಾನ್ ಹಾಗೂ ಜ್ಯೋತಿ ವಿವಾಹವಾಗಿ ಏಳು ವರ್ಷಗಳಾಗಿತ್ತು. ಮದುವೆಯ ಬಳಿಕ ಇಬ್ಬರ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ರಾಮ್ ಲಗಾನ್ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆ ಫೋನ್ ನಲ್ಲಿ ಮಾತನಾಡುವಾಗ ಆಕೆಯ ಮೇಲೆ ಕಣ್ಣಿಡುತ್ತಿದ್ದ. ಇದರಿಂದ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಮಾರ್ಚ್ 28ರ ರಾತ್ರಿಯೂ ಇದೇ ವಿಚಾರವಾಗಿ ಜಗಳವಾಗಿತ್ತು. ಅದೇ ದಿನ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದೆ. ಪರಿಣಾಮ ದುಪ್ಪಟ್ಟಾದಿಂದ ಪತ್ನಿಯ ಕುತ್ತಿಗೆ ಬಿಗಿದು, ಆ ಬಳಿಕ ಮಕ್ಕಳನ್ನು ಕೊಲೆಗೈದಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಟಿಎಸ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ತಂದೆಯ ಸಮ್ಮುಖದಲ್ಲೇ ಸಹೋದರಿಯ ಹತ್ಯೆಗೈದ ಸಹೋದರ.. ಇನ್ನೋರ್ವ ಸಹೋದರನಿಂದ ವಿಡಿಯೋ ಚಿತ್ರೀಕರಣ
ಲಕ್ನೋದ ಬಿಜ್ನೋರ್ ಪ್ರದೇಶದ ಸರವನ್ ನಗರ ಪ್ರದೇಶದಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಈ ಕೃತ್ಯವನ್ನು ರಾಮ್ ಲಗಾನ್ ವೆಸಗಿದ್ದಾನೆ.
ಮೂರು ದಿನ ಶವದೊಂದಿಗೆ ದಿನ ಕಳೆದ: ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿದ ಬಳಿಕ ಕೃತ್ಯ ಹೊರಗಡೆ ಗೊತ್ತಾಗಬಾರದೆನ್ನುವ ಕಾರಣದಿಂದ ಆರೋಪಿ ಮೂರು ದಿನಗಳ ಕಾಲ ಶವದೊಂದಿಗೆ ಮಲಗುತ್ತಿದ್ದ. ಮರುದಿನ ಬೆಳಗ್ಗೆ ಹೊರಗಡೆ ಹೋಗಿ ರಾತ್ರಿ ವಾಪಾಸಾಗುತ್ತಿದ್ದ. ಮೂರು ದಿನದ ಬಳಿಕ ಮನೆ ಮಾಲೀಕ ಏನೋ ಕೊಳತೆ ವಾಸನೆ ಬರುತ್ತಿದೆ ಎಂದು ಮನೆಯತ್ತ ಬಂದಾಗ ಬಾಗಿಲು ತೆರೆದಿತ್ತು, ಆಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ತನ್ನ ಮನೆಯವರು ಹೋಳಿ ಆಚರಿಸಲು ಸಂಬಂಧಿಕರ ಮನೆಗೆ ಹೋಗಿದ್ದಾರೆ ಎಂದು ಆರೋಪಿ ರಾಮ್ ಲಗಾನ್ ಅಕ್ಕಪಕ್ಕದವರ ಬಳಿ ಹೇಳಿದ್ದ. ಮಾಹಿತಿ ಪಡೆದ ಖಾಕಿ ಆರೋಪಿಯನ್ನು ಬಂಧಿಸಿದ್ದು, ಆತ ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.