ಲಕ್ನೋ ಮೆಟ್ರೋ: ಸೇವೆಗಿಳಿದ ಮೊದಲ ದಿನವೇ ತಾಂತ್ರಿಕ ಸಮಸ್ಯೆ
Team Udayavani, Sep 6, 2017, 10:55 AM IST
ಲಕ್ನೋ : ಸಾರ್ವಜನಿಕ ಸೇವೆಗೆ ಇಂದು ಚಾಲನೆಗೊಂಡ ಲಕ್ನೋ ಮೆಟ್ರೋ ರೈಲು ಮೊದಲ ದಿನವೇ ಮಹತ್ತರ ತಾಂತ್ರಿಕ ಸಮಸ್ಯೆಗೆ ಗುರಿಯಾದ ಪ್ರಯುಕ್ತ ಸೇವೆಗಳಲ್ಲಿ ತೀವ್ರ ವಿಳಂಬ ಉಂಟಾಗಿದೆ.
ಆಲಂಬಾಗ್ ಸ್ಟೇಶನ್ ಸಮೀಪ ಮವಯ್ನಾ ಸ್ಪೆಶಲ್ ಸ್ಪಾನ್ ಸಮೀಪ ಎರಡನೇ ಮೆಟ್ರೋ ರೈಲು ತಾಂತ್ರಿಕ ಸಮಸ್ಯೆಯಿಂದಾಗಿ ನಿಲುಗಡೆಗೊಂಡಿದೆ.
ಮೆಟ್ರೋ ರೈಲು ನಿಂತೊಡನೆಯೇ ಎಸಿ ಮತ್ತು ಲೈಟುಗಳು ಕೂಡ ಬಂದ್ ಆಗಿ ಒಳಗೆ ಸಿಲುಕಿ ಹಾಕಿಕೊಂಡಿರುವ ಪ್ರಯಾಣಿಕತರು ತೀವ್ರ ಆತಂಕಕ್ಕೆ ಗುರಿಯಾದರು.
ಲಕ್ನೋ ಮೆಟ್ರೋ ರೈಲ್ ಕಾರ್ಪೊರೇಶನ್ (ಎಲ್‌ಎಂಆರ್‌ಸಿ) ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು ತಾಂತ್ರಿಕ ಸಮಸ್ಯೆಯನ್ನು ನಿವಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಪರ್ಯಾಯ ಹಳಿಯಲ್ಲಿ ಉಳಿದ ರೈಲುಗಳು ಸುಲಲಿತವಾಗಿ ತಮ್ಮ ಓಡಾಟವನ್ನು ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ರಾನ್ಸ್‌ಪೊàರ್ಟ್ ನಗರ್ ರೈಲ್ವೇ ಸ್ಟೇಶನ್‌ನಲ್ಲಿ ನಿನ್ನೆ ಮಂಗಳವಾರ ಲಕ್ನೋ ಮೆಟ್ರೋದ ಮೊದಲ ಸೇವೆಯನ್ನು ಉದ್ಘಾಟಿಸಿದ್ದರು.
ಕಳೆದ 2016ರ ಡಿಸೆಂಬರ್ 1ರಂದು ಲಕ್ನೋ ಮೆಟ್ರೋ ಮೊದಲ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿನಡೆಸಲಾಗಿತ್ತು. ಆಗಿನ ಸಮಾಜವಾದಿ ಪಕ್ಷದ ಸರಕಾರ ನೂತನ ಮೆಟ್ರೋ ಚಾಲಕರಿಬ್ಬರಿಗೆ ಅಂದು ಪ್ರತಿಷ್ಠಿತ ರಾಣಿ ಲಕ್ಷ್ಮೀ ಬಾಯಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.