ಗರ್ಭಿಣಿಯಾದ ಸಮಯದಲ್ಲಿ ಮಹಿಳೆ ಹೇಗೆ ಬಟ್ಟೆ ಧರಿಸಬೇಕು: ಹೊಸ ಕೋರ್ಸ್ ಆರಂಭಿಸಿದ ಲಕ್ನೋ ವಿವಿ
"ಗರ್ಭ ಸಂಸ್ಕಾರ" ಕುರಿತು ಪ್ರಮಾಣಪತ್ರ ಮತ್ತು ಡಿಪ್ಲೊಮಾ ತರಗತಿ
Team Udayavani, Feb 23, 2020, 9:07 AM IST
ಉತ್ತರಪ್ರದೇಶ: ಲಕ್ನೋ ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷದಿಂದ “ಗರ್ಭ ಸಂಸ್ಕಾರ” ಕುರಿತು ಪ್ರಮಾಣಪತ್ರ ಮತ್ತು ಡಿಪ್ಲೊಮಾ ತರಗತಿಯನ್ನು ಪ್ರಾರಂಭಿಸಿದ್ದು ಈ ಕೋರ್ಸ್ ಆರಂಭಿಸಿದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಈ ಕೋರ್ಸ್ ಅಡಿಯಲ್ಲಿ ವಿದ್ಯಾರ್ಥಿಗಳು, ಗರ್ಭಿಣಿ ಮಹಿಳೆ ಯಾವ ರೀತಿಯ ಬಟ್ಟೆ ಧರಿಸಬೇಕು ಮತ್ತು ಆಹಾರ ತಿನ್ನಬೇಕು, ಆಕೆ ಹೇಗೆ ವರ್ತಿಸಬೇಕು ಮತ್ತು ತನ್ನನ್ನು ತಾನು ಹೇಗೆ ಸದೃಢವಾಗಿರಿಸಿಕೊಳ್ಳಬೇಕು ಹಾಗೂ ಗರ್ಭಿಣಿಯಾದ ಸಮಯದಲ್ಲಿ ಯಾವ ರೀತಿಯ ಸಂಗೀತವನ್ನು ಕೇಳಬಹುದು ಸೇರಿದಂತೆ ವಿದ್ಯಾರ್ಥಿಗಳಿಗೆ ಮಾತೃತ್ವದ ಬಗ್ಗೆ ಕಲಿಸಲಾಗುತ್ತದೆ.
ಕೋರ್ಸ್ ಉದ್ಯೋಗವನ್ನು ಸೃಷ್ಟಿಸುವ ಮಾಧ್ಯಮವೆಂದೇ ಅಂದಾಜಿಸಲಾಗಿದೆ. ವಿಶ್ವವಿದ್ಯಾಲಯ ತನ್ನ ವರದಿಯಲ್ಲಿ ತಿಳಿಸಿರುವಂತೆಯೇ ಪುರುಷರು ಕೂಡ ಈ ಕೋರ್ಸ್ ಆನ್ನು ಆಯ್ದುಕೊಳ್ಳಬಹುದು.
ರಾಜ್ಯ ವಿಶ್ವವಿದ್ಯಾಲಯದ ಕುಲಪತಿಯೂ ಆದ ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ವಿದ್ಯಾರ್ಥಿಗಳಿಗೆ ಮಾತೃತ್ವದ ಕುರಿತು ತರಭೇತಿ ನೀಡುವಂತೆ ಪ್ರಸ್ತಾಪಿಸಿದ್ದರು ಎಂದು ಲಕ್ನೋ ವಿಶ್ವವಿದ್ಯಾಲಯದ ವಕ್ತಾರ ದುರ್ಗೇಶ್ ಶ್ರೀವಾತ್ಸವ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಆನಂದಿಬೆನ್ ಪಟೇಲ್ ಕಳೆದ ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ, ತಾಯಿಯ ಗರ್ಭದಲ್ಲಿರುವಾಗಲೇ ಅಭಿಮನ್ಯು ಯುದ್ಧ ಕೌಶಲ್ಯಗಳಲ್ಲಿ ಪರಿಣಿತನಾದ. ಮಾತ್ರವಲ್ಲದೆ ಜರ್ಮನಿಯಲ್ಲೂ ಗರ್ಭ ಸಂಸ್ಕಾರದ ಕುರಿತು ಕೋರ್ಸ್ ಇರುವ ಬಗ್ಗೆ ಉಲ್ಲೇಖಿಸಿದ್ದರು.
ಈ ಕೋರ್ಸ್ ಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು 16 ಮೌಲ್ಯಗಳ ಬಗ್ಗೆ ಕಲಿಯುತ್ತಾರೆ. ಮುಖ್ಯವಾಗಿ ಕುಟುಂಬ ಯೋಜನೆ ಮತ್ತು ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಸುರಕ್ಷತೆಯ ಮೌಲ್ಯವನ್ನು ಒತ್ತಿ ಹೇಳುತ್ತದೆ. ಈ ಹೊಸ ಕೋರ್ಸ್ ಅಡಿಯಲ್ಲಿ ವಿವಿಧ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದು ಶ್ರೀವಾಸ್ತವ ತಿಳಿಸಿದ್ದಾರೆ
ಹೊಸ ಕೋರ್ಸ್ ಅನ್ನು ವಿದ್ಯಾರ್ಥಿಗಳು ಕೂಡ ಸ್ವಾಗತಿಸಿದ್ದು, ವಿದ್ಯಾರ್ಥಿಗಳಿಗೆ ಮಾತೃತ್ವದ ಬಗ್ಗೆ ತರಬೇತಿ ನೀಡಿದರೆ, ಅದು ಆರೋಗ್ಯಕರ ಮಗುವನ್ನು ಹೊಂದಲು ದಂಪತಿಗಳಿಗೆ ಸಹಾಯ ಮಾಡುತ್ತದೆ … ಇದರರ್ಥ ನಮ್ಮ ದೇಶಕ್ಕೆ ಆರೋಗ್ಯಕರ ಭವಿಷ್ಯವಿದೆ “ಎಂದು ವಿದ್ಯಾರ್ಥಿಯಾದ ಸಂಜೀವ್ ಅಭಿಪ್ರಾಯಪಟ್ಟಿದ್ದಾರೆ.
ನಮ್ಮದೇಶವು ಶ್ರೀಮಂತ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹೊಂದಿದೆ. ಮಹಿಳೆಯ ಭಾವನೆಗಳು ಮತ್ತು ಆಲೋಚನೆಗಳು ತನ್ನ ಮಗುವಿನ ಮೇಲೆ ಪ್ರತಿಫಲಿಸುತ್ತವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರ ಚಟುವಟಿಕೆಗಳು, ಆಹಾರ ಮತ್ತು ಮಾನಸಿಕ ಶಾಂತಿಯನ್ನು ನೋಡಿಕೊಳ್ಳುವ ಅವಶ್ಯಕತೆಯಿದೆ. ಈ ಕೋರ್ಸ್ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮವನ್ನು ಬೆಂಬಲಿಸುತ್ತದೆ “ಎಂದು ಹಿರಿಯ ಸ್ತ್ರೀ ರೋಗ ತಜ್ಞೆ ಡಾ. ಮಧು ಗುಪ್ತಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.