Ludhiana;ಶಿವಸೇನಾ ನಾಯಕನ ಮೇಲೆ ಹಾಡಹಗಲೇ ನಡುರಸ್ತೆಯಲ್ಲಿ ನಿಹಾಂಗ್ ಸಿಖ್ಖರಿಂದ ದಾಳಿ| Video
Team Udayavani, Jul 6, 2024, 8:55 AM IST
ಲೂಧಿಯಾನಾ: ಶಿವಸೇನಾ ಪಂಜಾಬ್ ನಾಯಕ ಸಂದೀಪ್ ಥಾಪರ್ ಗೋರಾ ಅವರ ಮೇಲೆ ಲೂಧಿಯಾನದಲ್ಲಿ ನಿಹಾಂಗ್ ಸಿಖ್ ವೇಷಧಾರಿ ಇಬ್ಬರು ವ್ಯಕ್ತಿಗಳು ಕತ್ತಿಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಸಂದೀಪ್ ಥಾಪರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹುತಾತ್ಮ ಯೋಧ ಸುಖದೇವ್ ಥಾಪರ್ ಅವರ ವಂಶಸ್ಥರೂ ಆಗಿರುವ ಸಂದೀಪ್ ಥಾಪರ್ ಅವರು ಭಾಷಣ ಮಾಡಿದ ನಂತರ ಅವರ ದಾಳಿ ನಡೆಸಿದ್ದಾರೆ.
ಶುಕ್ರವಾರ ಬೆಳಿಗ್ಗೆ, ಸಂದೀಪ್ ತನ್ನ ಗನ್ ಮ್ಯಾನ್ ನೊಂದಿಗೆ ಸಿವಿಲ್ ಆಸ್ಪತ್ರೆಯನ್ನು ನಡೆಸುತ್ತಿರುವ ಸಂವೇದನಾ ಟ್ರಸ್ಟ್ ನ ಅಧ್ಯಕ್ಷ ರವೀಂದರ್ ಅರೋರಾ ಅವರ ಪುಣ್ಯತಿಥಿ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು.
ಪೂಜೆ ಸಲ್ಲಿಸಿ ಹೊರಬಂದ ಕೂಡಲೇ ನಿಹಾಂಗ್ ಸಿಖ್ ವೇಷ ಧರಿಸಿದ್ದ ಇಬ್ಬರು ಯುವಕರು ಆತನ ಗನ್ ಮ್ಯಾನ್ ಎದುರೇ ಹರಿತವಾದ ಆಯುಧಗಳು ಹಾಗೂ ಕತ್ತಿಗಳಿಂದ ಹಲ್ಲೆ ನಡೆಸಿದ್ದಾರೆ.
ದುಷ್ಕರ್ಮಿಗಳು ಜನನಿಬಿಡ ರಸ್ತೆಯಲ್ಲಿ ಅವರ ಸ್ಕೂಟರ್ ನಿಲ್ಲಿಸಿ ಕತ್ತಿಗಳಿಂದ ಹೊಡೆತಗಳ ಮಳೆಗರೆಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಥಾಪರ್ ಅವರ ಬಂದೂಕುಧಾರಿ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ.
Punjab Shiv Sena leader Sandeep Thapar, who is also descendant of Indian Freedom fighter and martyr Sukhdev, has been assaulted with swords by a group of Nihang Sikhs outside Ludhiana Civil Hospital in Punjab.
I’m Sure You Can Spot Punjab Police In This Video.
Law And Order… pic.twitter.com/1qBZiBNJhp— Desidudewithsign (@Nikhilsingh21_) July 5, 2024
ದಾಳಿಕೋರರಲ್ಲಿ ಒಬ್ಬನು ತನ್ನ ಮೇಲೆ ದಾಳಿಯನ್ನು ಮುಂದುವರೆಸುತ್ತಿದ್ದರೂ ಸಹ ಶಿವಸೇನೆ ನಾಯಕನು ತನ್ನ ಸಮತೋಲನವನ್ನು ಕಳೆದುಕೊಂಡು ರಸ್ತೆಯಲ್ಲಿ ಬೀಳುವುದನ್ನು ವೀಡಿಯೊ ತೋರಿಸುತ್ತದೆ. ನಂತರ ಇಬ್ಬರು ದಾಳಿಕೋರರು ಸ್ಕೂಟರ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.