ಬೇವಾಫಾ ಚಾಯಿವಾಲಾ: ಕೈಕೊಟ್ಟ ಪ್ರಿಯತಮೆಯ ಹೆಸರಿನಲ್ಲೇ ಚಹಾದಂಗಡಿ ತೆರೆದ ಪ್ರಿಯಕರ.!
ಲವ್ ಫೇಲ್ ಆದವರಿಗೆ ಇಲ್ಲಿ ವಿಶೇಷ ಆತಿಥ್ಯ..
Team Udayavani, Nov 22, 2022, 5:49 PM IST
ಮಧ್ಯ ಪ್ರದೇಶ: ಜೀವನದಲ್ಲಿ ಪ್ರತಿಯೊಬ್ಬರಿಗೂ ಪ್ರೀತಿ ಸಿಗಲ್ಲ. ಕೆಲವರಿಗೆ ಪ್ರೀತಿಸಿದವರು ಸಿಗಲ್ಲ. ಇಲ್ಲೊಬ್ಬ ವ್ಯಕ್ತಿ ಪ್ರಿಯತಮೆ ಕೈಕೊಟ್ಟಳೆಂದು ವಿಭಿನ್ನವಾಗಿ ಆಕೆಯನ್ನು ಅಣುಕಿಸಲು ಚಹಾದಂಗಡಿಯೊಂದನ್ನು ತೆರೆದು ಸುದ್ದಿ ಆಗಿದ್ದಾನೆ.
ಮಧ್ಯಪ್ರದೇಶದ ರಾಜಗಢ ಮೂಲದ ಅಂತರ್ ಗುಜ್ಜರ್ ಎಂಬ ಯುವಕ ತನ್ನ ಪ್ರಿಯತಮೆ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿ, ಮೋಸ ಮಾಡಿದಳೆಂದು ಆಕೆಗೆ ಮಾನಸಿಕವಾಗಿ ಕಾಡಲು ಚಹಾದ ಅಂಗಡಿಯೊಂದನ್ನು ಹಾಕಿದ್ದಾನೆ.
ತನ್ನ ಪ್ರೇಯಸಿ ಮೋಸ ಮಾಡಿದಳೆಂದು “ಎಂ ಬೇವಾಫಾ ಚಾಯಿವಾಲಾ” ಎಂಬ ಚಹಾದಂಗಡಿಯನ್ನು ತೆರೆದಿದ್ದಾನೆ. “ಎಂ” ಎಂದರೆ ಅಂತರ್ ಅವರ ಪ್ರೇಯಸಿ ಹೆಸರಿನ ಮೊದಲ ಅಕ್ಷರ.
ವಿಶೇಷವೆಂದರೆ ಅಂತರ್ ಚಹಾದಂಗಡಿಯಲ್ಲಿ ಚಹಾಕ್ಕೆ ನಾನಾ ವರ್ಗದ ಜನರಿಗೆ ಬೇರೆ ಬೇರೆ ದರವನ್ನು ನಿಗದಿ ಮಾಡಿದ್ದಾನೆ. ಜೋಡಿಗಳು ಬಂದರೆ ಒಂದು ಚಹಾ ಕಪ್ ಗೆ 10 ರೂ. ಪ್ರೇಯಿಸಿಯಿಂದ ದ್ರೋಹಕ್ಕೆ ಒಳಗಾದವರು ಬಂದರೆ ಅಂತವರಿಗೆ ಒಂದು ಕಪ್ ಚಹಾಕ್ಕೆ 5 ರೂ.ನಂತೆ ಚಹಾವನ್ನು ನೀಡುತ್ತಾರೆ ಅಂತರ್.
ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಯಾಗಿರುವ ಅಂತರ್ ಈ ಬಗ್ಗೆ ಮಾತಾನಾಡುತ್ತಾ “ 5 ವರ್ಷದ ಹಿಂದೆ ನಾನು ಸಂಬಂಧಿಕರ ಮದುವೆಯಲ್ಲಿ ಒಂದು ಹುಡುಗಿಯನ್ನು ಭೇಟಿಯಾಗಿದ್ದೆ. ಅಲ್ಲಿಂದ ನಾವು ಸ್ನೇಹಿತರಾಗಿ, ಪರಸ್ಪರ ಪ್ರೀತಿಸಲು ಆರಂಭಿಸಿದ್ದೀವಿ. 2 ವರ್ಷದ ಬಳಿಕ ಆ ಹುಡುಗಿ ನನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿ, ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಳು. ನನ್ನ ಬಳಿ ಮಾತನಾಡುವುದನ್ನು ನಿಲ್ಲಿಸಿದಳು. ನಾನು ಅವಳನ್ನೇ ನಂಬಿ ನಿರುದ್ಯೋಗಿಯಾದೆ. ಅವಳ ಗಂಡನ ಬಳಿ ಎಲ್ಲವೂ ಇದೆ” ಎಂದರು.
ಇದಾದ ಬಳಿಕ “ನಾನು ನನಗೆ ಜೀವನವೇ ಬೇಡ ಎಂದಾಗಿತ್ತು. ಆದರೆ ನನ್ನ ಸ್ನೇಹಿತ ನನಗೆ ಸಲಹೆ ನೀಡಿದ. ಎರಡು ವರ್ಷದ ಬಳಿಕ ನಾನು ಅವಳನ್ನು ಅಣಕಿಸುವ ಹಾಗೆ ಅವಳ ಮೊದಲ ಅಕ್ಷರದಿಂದಲೇ ಈ ಚಹಾದಂಗಡಿಯನ್ನು ಆರಂಭಸಿದೆ” ಎಂದಿದ್ದಾರೆ.
ಈ ಹಿಂದೆ ನನ್ನ ಮಾಜಿ ಗೆಳತಿ ಯಾವುದಾದರೂ ಅಂಗಡಿಯನ್ನು ತೆರೆಯುವ ಯೋಜನೆ ಇದ್ದರೆ ಅದಕ್ಕೆ ನನ್ನ ಹೆಸರನ್ನು ಇಡಿ ಎಂದು ಹೇಳಿದ್ದಳು ಎನ್ನುತ್ತಾರೆ ಅಂತರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.