18 ತಿಂಗಳಲ್ಲಿ ಲಡಾಖ್‌ಗೆ ಸ್ವದೇಶಿ ಹೊವಿಟ್ಜರ್!
ಡಿಆರ್‌ಡಿಒದಿಂದ 200ಕ್ಕೂ ಅಧಿಕ ಎಟಿಎಜಿಎಸ್ ಹೊವಿಟ್ಜರ್ ನಿರ್ಮಾಣ
Team Udayavani, Dec 8, 2020, 5:59 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಚೀನದೊಂದಿಗಿನ ಎಲ್‌ಎಸಿ ಬೂದಿ ಮುಚ್ಚಿದ ಕೆಂಡವಾಗಿರುವ ಹೊತ್ತಿನಲ್ಲಿಯೇ “ಭಾರತೀಯ ಹೊವಿಟ್ಜರ್’ ಬಂದೂಕುಗಳ ಉತ್ಪಾದನೆಗೆ ಡಿಆರ್‌ಡಿಒ “ಟ್ರಿಗರ್’ ಒತ್ತಿದೆ. 18 ತಿಂಗಳಲ್ಲಿ 200 ಕ್ಕೂ ಅಧಿಕ ಎಟಿಎಜಿಎಸ್ ಹೊವಿಟlರ್‌ಗಳನ್ನು ತಯಾರಿಸಿ, ಲಡಾಖ್ ಗಡಿ ತಲುಪಿಸುವ ಗುರಿ ಹೊಂದಿದೆ.
ಎಟಿಎಜಿಎಸ್ ಯೋಜನೆಯಡಿ ಹೊವಿಟ್ಜರ್ ಬಂದೂಕುಗಳನ್ನು ಸಂಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಿಸಿ, ಚೀನ ಗಡಿಯಲ್ಲಿ ಅತಿ ಶೀಘ್ರದಲ್ಲಿ ನಿಯೋಜಿಸಲು ಸೇನೆ ನಿರ್ಧರಿಸಿದೆ. ಇಸ್ರೇಲ್‌ನಿಂದ ಖರೀ ದಿಸುತ್ತಿದ್ದ ಹೊವಿಟlರ್‌ಗಳನ್ನು “ಋಣಾತ್ಮಕ ಆಮದು ಪಟ್ಟಿ’ಗೆ ಸೇರಿಸಿರುವ ಕಾರಣ, ಅತ್ಯಗತ್ಯವಿರುವ 400 ಸ್ವದೇಶಿ ಎಟಿಎಜಿಎಸ್ ಹೊವಿಟ್ಜರ್ ಉತ್ಪಾದನೆಗೆ ಅನುಮತಿ ನೀಡಲಾಗಿತ್ತು.
ಪರೀಕ್ಷೆ ಸಾಗಿದೆ: “ಈಗಾ ಗಲೇ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಎಟಿಎಜಿ ಎಸ್ ಹೊವಿಟ್ಜರ್ ಫಿರಂಗಿ ಬಂದೂಕುಗಳ ಪರೀಕ್ಷೆ ಯಶಸ್ವಿ ಯಾಗಿ ಸಾಗಿದೆ. 200ಕ್ಕೂ ಅಧಿಕ ಗನ್‌ಗಳ ಉತ್ಪಾದನೆಗೆ ಸೂಚನೆ ಸಿಕ್ಕಿದ್ದು, 18-24 ತಿಂಗಳಿನಲ್ಲಿ ಪೂರೈಸುವ ಗುರಿ ಹೊಂದಿದ್ದೇವೆ’ ಎಂದು ಡಿಆರ್‌ಡಿಒ ಮೂಲಗಳು “ಎಎನ್‌ಐ’ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಎಷ್ಟು ಸಮರ್ಥ?: ಡಿಆರ್‌ಡಿಒ ನಿರ್ಮಿ ಸಿದ್ದ ಎಟಿಜಿಎಸ್ ಹೊವಿಟ್ಜರ್ ಪ್ರಪ್ರ ಥಮ ಬಾರಿಗೆ 2017ರ ಗಣರಾಜ್ಯ ಪರೇಡ್‌ನಲ್ಲಿ ಪ್ರದರ್ಶನಗೊಂಡಿತ್ತು. ಬಳಿಕ ಹಲವು ಪರೀಕ್ಷೆಗೊಳಪಟ್ಟು ಸುಧಾರಿತ ಗೊಳ್ಳುತ್ತಿರುವ ಈ ಬಂದೂಕು, 48 ಕಿ.ಮೀ. ದೂರ ಗುರಿಯನ್ನು ಸುಲಭವಾಗಿ ಹುಟ್ಟಡಗಿಸಬಲ್ಲುದು.
ಪ್ರತೀ ಪರೀಕ್ಷೆಗಳಿಂದಲೂ ಹೊವಿಟ್ಜರ್ ಸ್ಟ್ರಾಂಗ್!
ಎಟಿಎಜಿಎಸ್ ಹೊವಿಟ್ಜರ್ ಕೆಲವು ತಿಂಗಳ ಹಿಂದೆ ಜೈಸಲ್ಮೇರ್‌ನ ಮರುಭೂಮಿಯಲ್ಲಿ ಪರೀಕ್ಷೆ ವೇಳೆ ಸಣ್ಣ ಅಪಘಾತ ಸೃಷ್ಟಿಸಿತ್ತು. “ಪರೀಕ್ಷೆ ವೇಳೆ ಘಟಿಸುವ ಇಂಥ ವೈಫಲ್ಯ ಧೃತಿಗೆಡಿಸುವುದಿಲ್ಲ. ಬದಲಾಗಿ, ಭವಿಷ್ಯದ ಸಮಸ್ಯೆಗಳಿಗೆ ಮುಂಚಿತವಾಗಿ ಪರಿಹಾರ ನೀಡಿ, ಬಂದೂಕಿಗೆ ಮತ್ತಷ್ಟು ಸುಧಾರಣಾ ಶಕ್ತಿ ನೀಡುತ್ತದೆ’ ಎಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ಭರವಸೆ ನೀಡಿದ್ದಾರೆ.
ವಿಶ್ವದ ಶಸ್ತ್ರಾಸ್ತ್ರ ಕಂಪೆನಿಗಳ ವಹಿವಾಟು
ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇಂಟರ್‌ನ್ಯಾಷನಲ್ (ಎಸ್‌ಐಪಿಆರ್‌ಐ) ಜಗತ್ತಿನ 25 ದೊಡ್ಡ ಶಸ್ತ್ರಾಸ್ತ್ರ ಮಾರಾಟ ಮಾಡುವ ಕಂಪೆನಿಗಳ ವಿವರ ಬಿಡುಗಡೆ ಮಾಡಿದೆ. 2018ರ ಮಾಹಿತಿ ಪ್ರಕಾರ 361 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿವೆ
ಸಂಸ್ಥೆ ವಹಿವಾಟು
ಲಾಕ್‌ಹಿಡ್ ಮಾರ್ಟಿನ್ 53.23
ಬೋಯಿಂಗ್ 33.15
ರೇಥಾನ್ 25.32
ಜನರಲ್ ಡೈನಾಮಿಕ್ಸ್ 24.50
ಎವಿಐಸಿ 22.47
ಬಿಎಇ ಸಿಸ್ಟಮ್ 22.24
ಸಿಲೆಕ್ (SELC) 15.08
(ಬಿಲಿಯನ್ ಡಾಲರ್‌ಗಳಲ್ಲಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.