Madhya Pradesh; ನಾನು ಪಕ್ಷದ ಸಣ್ಣ ಕಾರ್ಯಕರ್ತ: ನಿಯೋಜಿತ ಸಿಎಂ ಮೋಹನ್ ಯಾದವ್
ಮಾಜಿ ಕೇಂದ್ರ ಸಚಿವ ತೋಮರ್ ಇನ್ನು ಸ್ಪೀಕರ್, ಇಬ್ಬರು ಡಿಸಿಎಂಗಳ ಆಯ್ಕೆ
Team Udayavani, Dec 11, 2023, 5:15 PM IST
ಭೋಪಾಲ್ : “ನಾನು ಪಕ್ಷದ ಸಣ್ಣ ಕಾರ್ಯಕರ್ತ. ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ನನ್ನ ಜವಾಬ್ದಾರಿಯನ್ನು ಪೂರೈಸಲು ಪ್ರಯತ್ನಿಸುತ್ತೇನೆ” ಎಂದು ಮಧ್ಯಪ್ರದೇಶದ ನಿಯೋಜಿತ ಸಿಎಂ ಡಾ. ಮೋಹನ್ ಯಾದವ್ ಹೇಳಿದ್ದಾರೆ.
ಪಕ್ಷದ ಶಾಸಕಾಂಗ ಸಭೆಯಲ್ಲಿ ಸಿಎಂ ಎಂದು ಘೋಷಣೆಯಾದ ಬಳಿಕ ಮಾತನಾಡಿದ ಯಾದವ್, ”ನಿಮ್ಮೆಲ್ಲರಿಗೂ, ರಾಜ್ಯ ನಾಯಕತ್ವ ಮತ್ತು ಕೇಂದ್ರ ನಾಯಕತ್ವಕ್ಕೆ ನನ್ನ ಧನ್ಯವಾದಗಳು” ಎಂದು ಹೇಳಿದ್ದಾರೆ.ಡಾ.ಮೋಹನ್ ಯಾದವ್ ಅವರನ್ನು ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಬಿಜೆಪಿ ನಾಯಕರು ಅಭಿನಂದಿಸಿದರು.
ಇದನ್ನೂ ಓದಿ: MP CM ; ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಡಾ. ಮೋಹನ್ ಯಾದವ್ ಆಯ್ಕೆ
ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಮಾಜಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಅಸೆಂಬ್ಲಿ ಸ್ಪೀಕರ್ ಮಾಡಲಾಗಿದೆ.ಅವರ ಹೆಸರೂ ಸಿಎಂ ಹುದ್ದೆಗೆ ಬಲವಾಗಿ ಕೇಳಿಬಂದಿತ್ತು. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಸಚಿವಾಲಯವನ್ನು ಮುನ್ನಡೆಸಿದ್ದ ತೋಮರ್ ಚೌಹಾಣ್ ಅವರ ನಂತರ ಉನ್ನತ ಹುದ್ದೆಗೆ ಏರಬಹುದು ಎಂಬ ಬಗ್ಗೆ ಚರ್ಚೆಯಾಗಿತ್ತು.
#WATCH | Madhya Pradesh CM-designate Mohan Yadav says, “I am a small worker of the party. I thank all of you, the state leadership and the central leadership. With your love and support, I will try to fulfil my responsibilities.” pic.twitter.com/dRM7g0VoMw
— ANI (@ANI) December 11, 2023
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಬಿಜೆಪಿಯು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೆಸರಿಸಿದೆ. ಜಗದೀಶ್ ದಿಯೋರಾ ಮತ್ತು ರಾಜೇಶ್ ಶುಕ್ಲಾ ಅವರು ಮಧ್ಯಪ್ರದೇಶ ಉಪಮುಖ್ಯಮಂತ್ರಿಗಳಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.