ಮಧ್ಯ ಪ್ರದೇಶ: ಬಿಜೆಪಿ ಹಿನ್ನಡೆಗೆ ಸಿಎಂ ಚೌಹಾಣ್ ಕಾರಣ: ಬಿಜೆಪಿ ನಾಯಕ
Team Udayavani, Dec 10, 2018, 10:50 AM IST
ಭೋಪಾಲ್ : ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಚಾರಾಭಿಯಾನದ ವೇಳೆ ಬಳಸಿದ ಕೆಲವು ಕೀಳುಮಟ್ಟದ ಪದಗಳು ಮತ್ತು ಭಾಷೆಯಿಂದಾಗಿ ಪಕ್ಷಕ್ಕೆ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಅಸ್ಥಿರತೆ ತಲೆದೋರಿದೆ. ನಾಳೆ ಪ್ರಕಟಗೊಳ್ಳುವ ಫಲಿತಾಂವದಲ್ಲಿ ಪಕ್ಷದ ಹಿನ್ನಡೆ ಕಂಡರೆ ಅದಕ್ಕೆ ಚೌಹಾಣ್ ಅವರೇ ಹೊಣೆಗಾರರಾಗುತ್ತಾರೆ ಎಂದು ಬಿಜೆಪಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ರಘುನಂದನ್ ಶರ್ಮಾ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಅವರು ಸಿಎಂ ಚೌಹಾಣ್ ಅವರು ಮಾಯ್ ಕಾ ಲಾಲ್ ಮುಂತಾದ ಕೀಳು ಪದ ಮತ್ತು ಭಾಷೆಯನ್ನು ಬಳಸಿದ ಕಾರಣ ಮತದಾರರು ಪಕ್ಷದ ಮಟ್ಟ ಏನೆಂಬುದನ್ನು ತೀರ್ಮಾನಿಸಿದರು. ಸಮೀಕ್ಷೆಗಿಂತ ಇನ್ನೂ 10 – 15 ಹೆಚ್ಚು ಸೀಟುಗಳನ್ನು ಪಡೆಯುವ ಅವಕಾಶ ಪಕ್ಷಕ್ಕೆ ತಪ್ಪಿ ಹೋಯಿತು ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಬಿಜೆಪಿ ಕೆಲವೊಂದು ತಪ್ಪುಗಳನ್ನು ಮಾಡಿರಬಹುದು. ಹಾಗಿದ್ದರೂ ಮತಗಟ್ಟೆ ಸಮೀಕ್ಷೆಗಳು ತಪ್ಪಾಗಿ ಸಾಬೀತಾಗಲೂ ಸಾಧ್ಯವಿದೆ. ಏಕೆಂದರೆ ಅವು ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಇಲ್ಲ ಎಂದು ರಘುನಂದನ್ ಶರ್ಮಾ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.