ಅರೆಬರೆ ನಿರ್ಮಾಣವಾದ ಮನೆ, ಜೊತೆಗೆ 14,000 ರೂ. ಬಿಲ್!
Team Udayavani, Dec 26, 2021, 10:30 PM IST
ಭೋಪಾಲ್: ಮುಂದಿನ ಸಾಲುಗಳನ್ನು ಓದಿದ ಮೇಲೆ ಹೀಗೆಲ್ಲ ಉಂಟಾ ಎಂದು ನೀವು ಆಶ್ಚರ್ಯಪಡುವುದಿಲ್ಲ. ಕಾರಣ ಭಾರತದಲ್ಲಿ ಇಂತಹ ಸಾವಿರಾರು ಘಟನೆಗಳನ್ನು ನೀವು ಕೇಳಿಯೇ ಇರುತ್ತೀರಿ. ಅಂತಹದ್ದೇ ಒಂದು ವಿಪರ್ಯಾಸಪೂರಿತ ಘಟನೆ ಮಧ್ಯಪ್ರದೇಶ ಜಿಲ್ಲೆಯ ವಿದಿಶಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಬುಧ್ರಾಮ್ ಆದಿವಾಸಿ ಎಂಬಾತನಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರೆಬರೆ ನಿರ್ಮಾಣವಾಗಿದ್ದ ಮನೆಯೊಂದನ್ನು ಆಗಸ್ಟ್ನಲ್ಲಿ ನೀಡಲಾಗಿದೆ. ಆಗ ಸ್ವತಃ ರಾಜ್ಯಪಾಲ ಮಾಂಗುಭಾಯಿ ಪಟೇಲ್ ಬುಧ್ರಾಮ್ ಮನೆಗೆ ತೆರಳಿ, ಊಟ ಮಾಡಿ ಕೀ ಹಸ್ತಾಂತರಿಸಿದ್ದರು. ಅದಾದ ನಂತರ 14,000 ರೂ. ಬಿಲ್ಲನ್ನು ಬುಧ್ರಾಮ್ ಗೆ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ನೀಡಿ “ಈ ಬಿಲ್ ಕಟ್ಟಿ’ ಎಂದು ಸೂಚಿಸಿದ್ದಾರೆ!
ರಾಜ್ಯಪಾಲರು ಬಂದಿದ್ದಾಗ ಆ ಮನೆಯ ಮುಂದೆ ಅಧಿಕಾರಿಗಳೇ ಒಂದು ಗೇಟನ್ನು ನಿರ್ಮಿಸಿದ್ದರು. ಆ ಗೇಟು ನಿರ್ಮಾಣಕ್ಕೆ ತಗುಲಿದ ವೆಚ್ಚ ಎಂದು ಈಗ ಇಷ್ಟು ಹಣ ಕಟ್ಟುವಂತೆ ಅಧಿಕಾರಿಗಳು ಒತ್ತಡ ಹೇರ ತೊಡಗಿದ್ದಾರೆ. ಆ ವಿಚಾರ ಬುಧ್ರಾಮ್ಗೆ ದುಃಖ ತರಿಸಿದೆ. ತನ್ನಲ್ಲಿ ಹಣವಿಲ್ಲ ಕಟ್ಟುವುದು ಹೇಗೆ ಎಂದು ಕೇಳುತ್ತಿದ್ದಾರೆ. ಇದೀಗ ಆರು ತಿಂಗಳು ಕಳೆದಿದೆ. ಆ ಮನೆ ಕೂಡ ಪೂರ್ಣ ನಿರ್ಮಾಣವಾಗಿಲ್ಲ. ಅಲ್ಲದೇ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುತ್ತೇವೆಂದು ಹೇಳಲಾಗಿತ್ತು. ಅದೂ ಆಗಿಲ್ಲ. ಈ ವಿಚಾರ ಈಗ ಮಧ್ಯಪ್ರದೇಶ ಸರ್ಕಾರದ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.