ನವಿಲನ್ನು ಕೊಂದವನ ಕೊಂದರು
Team Udayavani, Jul 21, 2019, 5:36 AM IST
ಭೋಪಾಲ್:ನವಿಲನ್ನು ಕೊಂದಿದ್ದಾನೆ ಎಂಬ ಕಾರಣಕ್ಕಾಗಿ ಹೀರಾಲಾಲ್ಬನ್‌ಚಂದಾ ಎಂಬವನನ್ನು ಮಧ್ಯಪ್ರದೇಶದ ನಿಮುಚ್ ಜಿಲ್ಲೆಯಲ್ಲಿ ಜನರೇ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹತ್ತು ಜನರ ವಿರುದ್ಧ ದೂರು ದಾಖಲಿಸಲಾಗಿದೆ.
ಶುಕ್ರವಾರ ಈ ಪ್ರಕರಣ ನಡೆದಿದ್ದು, ನಾಲ್ವರು ನವಿಲನ್ನು ಕೊಂದು ಹೊತ್ತುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಜನರು ಅವರನ್ನು ಅಟ್ಟಿಸಿಕೊಂಡು ಹೋಗಿದ್ದರು. ಈ ಪೈಕಿ ಹೀರಾಲಾಲ್ ಸಿಕ್ಕಿಬಿದ್ದಿದ್ದ. ಆತನ ಬಳಿ ನಾಲ್ಕು ಸತ್ತ ನವಿಲುಗಳು ಸಿಕ್ಕಿದ್ದವು. ಆತನನ್ನು ಥಳಿಸಿ ಕೃಷಿ ಜಮೀನಿನಲ್ಲೇ ಜನರು ಬಿಟ್ಟು ಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ