Madhya Pradesh ಧ್ವನಿ ಬದಲಿಸುವ ಆ್ಯಪ್ ಬಳಸಿ 7 ಮಂದಿ ಮೇಲೆ ಅತ್ಯಾಚಾರ
ಉಪನ್ಯಾಸಕಿ ಎಂದು ಕರೆ ಮಾಡುತ್ತಿದ್ದ ಆರೋಪಿ; ಸ್ಕಾಲರ್‌ಶಿಪ್ ಕೊಡಿಸುವುದಾಗಿ ನಂಬಿಸಿ ದೌರ್ಜನ್ಯ
Team Udayavani, May 26, 2024, 7:05 AM IST
ಸಿಧಿ: ಧ್ವನಿ ಬದಲಿಸುವ ಆ್ಯಪ್ ಮೂಲಕ ವ್ಯಕ್ತಿಯೊಬ್ಬ ಮಹಿಳಾ ಕಾಲೇಜು ಉಪ ನ್ಯಾಸಕಿಯಂತೆ ಮಾತನಾಡಿ, ಸ್ಕಾಲರ್‌ಶಿಪ್ ನೀಡುವುದಾಗಿ ನಂಬಿಸಿ 7 ಬುಡಕಟ್ಟು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ಬೆಳಕಿಗೆ ಬಂದಿದೆ. ಬ್ರಜೇಶ್ ಪ್ರಜಾಪತಿ ಎಂಬ ವ್ಯಕ್ತಿ ಜನವರಿಯಿಂದ ಈವರೆಗೆ ಈ ಕುಕೃತ್ಯವೆಸಗಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಸಿಧಿ ಎಸ್ಪಿ ರವೀಂದ್ರ ವರ್ಮಾ, ಆರೋಪಿ ಬ್ರಜೇಶ್‌ನ್ನು ಬಂಧಿಸಲಾಗಿದೆ. ಧ್ವನಿ ಬದಲಿಸುವ ಆ್ಯಪ್ ಮೂಲಕ ಆತ, ಮಹಿಳಾ ಕಾಲೇಜು ಉಪನ್ಯಾಸಕಿಯಂತೆ ಹೆಣ್ಣುಮಕ್ಕಳೊಂದಿಗೆ ಮಾತನಾಡುತ್ತಿದ್ದ. ಅವರಿಗೆ ಸ್ಕಾಲರ್‌ಶಿಪ್ ಇಲ್ಲವೇ ಸರಕಾರಿ ಯೋಜನೆಯಿಂದ ಹಣ ಕೊಡಿಸುವುದಾಗಿ ಹೇಳುತ್ತಿದ್ದ. ಇದನ್ನು ನಂಬಿ ಆ ಹೆಣ್ಣುಮಕ್ಕಳು ಮೋಸ ಹೋಗಿದ್ದಾರೆ. ಬ್ರಜೇಶ್ ಕಾರ್ಮಿಕನಾಗಿದ್ದು, ಯೂಟ್ಯೂಬ್ ಮೂಲಕ ಆ್ಯಪ್ ಬಳಸುವುದನ್ನು ಕಲಿತಿದ್ದ. ಹೆಣ್ಣು ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆಸಿ, ಅತ್ಯಾಚಾರವೆಸಗಿ, ಅವರಲ್ಲಿದ್ದ ಫೋನ್ ಕೂಡ ದೋಚುತ್ತಿದ್ದ. ಅನಂತರ ಆ ಮೊಬೈಲ್‌ನಿಂದ ಇತರ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ. ಸಂತ್ರಸ್ತರೆಲ್ಲರೂ ಬುಡಕಟ್ಟು ಜನಾಂಗದವರು, ಆರ್ಥಿಕವಾಗಿ ಹಿಂದುಳಿದವರು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.