ಮತಾಂತರ ತಡೆ : ಮಧ್ಯಪ್ರದೇಶದಲ್ಲೂ ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಅಂಗೀಕಾರ..!
Team Udayavani, Mar 8, 2021, 6:48 PM IST
ಮಧ್ಯಪ್ರದೇಶ : ಮಧ್ಯಪ್ರದೇಶ ಸರ್ಕಾರ ಮತಾಂತರ ತಡೆಗಾಗಿ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2021 ನ್ನು ಸೋಮವಾರ(ಮಾ. 8) ವಿಧಾನಸಭೆಯಲ್ಲಿ ಅಂಗೀಕರಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಮಸೂದೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಓದಿ : ಚೀನಾ-ಟೆಸ್ಲಾಗೆ ‘ಓಲಾ’ ಟಕ್ಕರ್…ಬೆಂಗಳೂರಲ್ಲಿ ತಲೆ ಎತ್ತಲಿದೆ ‘ಇ-ಸ್ಕೂಟರ್’ ಉತ್ಪಾದನೆ ಘಟಕ
“ನಾವು ಮಧ್ಯಪ್ರದೇಶದಲ್ಲಿ ಬಲವಂತದ ಮತಾಂತರವನ್ನು ಅನುಮತಿಸುವುದಿಲ್ಲ. ಬಲವಂತವಾಗಿ ಮತಾಂತರವನ್ನು ಮಾಡುವವರು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹ 50,000 ದಂಡವನ್ನು ವಿಧಿಸಬೇಕಾಗುತ್ತದೆ. ಅಪ್ರಾಪ್ತ ಬಾಲಕಿಯರನ್ನು ಮತಾಂತರಗೊಳಿಸಿದ, ಮದುವೆಯಾದ ಹಾಗೂ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ “ಎಂದು ಶ್ರೀ ಚೌಹಾನ್ ಹೇಳಿದ್ದಾರೆ.
“ಹೊಸ ಮಸೂದೆಯಡಿಯಲ್ಲಿ, ಯಾರೊಬ್ಬರ ಮೇಲಾದರೂ ಧಾರ್ಮಿಕ ಮತಾಂತರವನ್ನು ಒತ್ತಾಯಿಸುವುದನ್ನು ಮಾಡಿದ್ದಲ್ಲಿ ಒಂದರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ₹ 25,000 ದಂಡವನ್ನು ವಿಧಿಸಬೇಕಾಗುತ್ತದೆ” ಎಂದು ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಓದಿ : ಪ್ರಧಾನಿ ಮೋದಿಯವರ #WomensDay ಶಾಪಿಂಗ್ ಪಟ್ಟಿಯಲ್ಲಿ ಏನೇನಿದೆ..? ಇಲ್ಲಿದೆ ಮಾಹಿತಿ
ಈ ಹೊಸ ಮಸೂದೆಯ ಅಡಿಯಲ್ಲಿ, ಅಪ್ರಾಪ್ತರನ್ನು ಬಲವಂತವಾಗಿ ಮತಾಂತರಿಸುವುದನ್ನು ಒಳಗೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಬಲವಂತವಾಗಿ ಮತಾಂತರಗೊಳಿಸಿದ್ದಲ್ಲಿ ಎರಡರಿಂದ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50,000 ದಂಡ ವಿಧಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನು, ಉತ್ತರ ಪ್ರದೇಶ ಸರ್ಕಾರದ ಶಾಸಕಾಂಗ ಸಭೆಯು ಕೂಡ ಇದೇ ಮಾದರಿಯ ಮಸೂದೆಯನ್ನು ಅಂಗೀಕರಿಸಿದೆ. ಕಾನೂನು ಬಾಹೀರ ಧಾರಮಿಕ ಮತಾಂತರದ ನಿಷೇಧ ಮಸೂದೆಯನ್ನು ಫೆಬ್ರವರಿ 24 2021 ರಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಇದಕ್ಕೂ ಮೊದಲು, ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆಯನ್ನು ತೆರವುಗೊಳಿಸಿ, ಲವ್ ಜಿಹಾದ್ ಸಂಬಂಧಿತ ಅಪರಾಧಗಳಿಗೆ ಗರಿಷ್ಠ 10 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು.
ಓದಿ : ಕರ್ನಾಟಕ ಬಜೆಟ್ 2021: ಉದ್ಯಾನ ನಗರಿ ಸಮಗ್ರ ಅಭಿವೃದ್ಧಿಗೆ ಬಂಪರ್ ಕೊಡುಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.