ಮಧ್ಯಪ್ರದೇಶದಲ್ಲಿ ವಾರಕ್ಕೊಮ್ಮೆ ಮಕ್ಕಳಿಗೆ ಪಾಟೀಚೀಲದಿಂದ ಮುಕ್ತಿ!
Team Udayavani, Sep 4, 2022, 7:33 AM IST
ಭೋಪಾಲ್: ಮಕ್ಕಳಿಗೆ ಶಾಲಾಶಿಕ್ಷಣ ಒಂದು ರೀತಿಯ ಹೊರೆಯಂತೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಶಾಲೆಗೆ ಒಯ್ಯುವ ಪಾಟೀಚೀಲದ ತೂಕವೂ ಹೆಚ್ಚಾಗಿ ಮಕ್ಕಳು ಒದ್ದಾಡುತ್ತಿರುವುದು ಗೊತ್ತಿದೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ಮಧ್ಯಪ್ರದೇಶ ಸರ್ಕಾರ, ವಾರಕ್ಕೊಮ್ಮೆ ಮಕ್ಕಳು ಶಾಲೆಗಳಿಗೆ ಪಾಟೀಚೀಲ ಒಯ್ಯುವುದೇ ಬೇಡವೆಂದು ತಿಳಿಸಿದೆ.
ಆ ದಿನದಂದು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ನಿರತರಾಗಬಹುದು. ಹಾಗೆಯೇ ಪ್ರತೀ ದಿನ ಮಕ್ಕಳು ತರುವ ಪಾಟಿಚೀಲದ ತೂಕ ಎಷ್ಟಿರಬೇಕು ಎನ್ನುವುದನ್ನು ತರಗತಿವಾರು ವಿಂಗಡಿಸಿ ನೋಟಿಸ್ ಬೋರ್ಡ್ನಲ್ಲಿ ಹಾಕಲು ಸೂಚಿಸಲಾಗಿದೆ. ಇದನ್ನು ಪರಿಶೀಲಿಸಲು ಅಧಿಕಾರಿಗಳು ದಿಢೀರನೆ ವಿವಿಧ ಶಾಲೆಗಳಿಗೆ ಭೇಟಿ ನೀಡಬೇಕು ಎಂದೂ ಹೇಳಲಾಗಿದೆ. ಮಧ್ಯಪ್ರದೇಶದ 2020ರ ಶಾಲಾನೀತಿಯಂತೆ ಹಲವು ನಿಯಮಗಳನ್ನು ರೂಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.