![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 31, 2022, 6:26 PM IST
ಚೆನ್ನೈ: ತಮಿಳುನಾಡಿನ ಯುವತಿಯೊಬ್ಬರು ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನು ವರ್ಚುವಲ್ ಮೋಡ್ ಮೂಲಕ ಮದುವೆಯಾಗಲು ಸಿದ್ಧರಾಗಿದ್ದು, ಈ ಆನ್‌ಲೈನ್ ವಿವಾಹಕ್ಕೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಅನುಮತಿ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಮದುವೆಯಾಗುವ ಹಕ್ಕು, ಮೂಲಭೂತ ಮಾನವ ಹಕ್ಕು ಮತ್ತು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ, 1954 ರ ಸೆಕ್ಷನ್ 12 ಮತ್ತು 13 ಈ ಹಕ್ಕನ್ನು ಜಾರಿಗೊಳಿಸುವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ರಿಟ್ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಈ ತೀರ್ಪು ನೀಡಿದ್ದಾರೆ.
ಕನ್ಯಾಕುಮಾರಿ ನಿವಾಸಿ ಸುದರ್ಶಿನಿ ಹಾಗೂ ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಹುಲ್ ಅವರು ಪರಸ್ಪರ ಪ್ರೀತಿಸುತ್ತಿದ್ದು, ವಿಡಿಯೋ ಕಾನ್ಪರೆನ್ಸ್‌ನಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗುವುದಾಗಿ ಕೋರ್ಟ್ ಮೊರೆ ಹೋಗಿದ್ದರು.
” ಸೆಕ್ಷನ್ 12 (2) ಈ ಕಾಯ್ದೆಯು ವಧು- ವರರು ಆಯ್ಕೆ ಮಾಡುವ ಯಾವುದೇ ರೂಪದಲ್ಲಿ ವಿವಾಹವನ್ನು ನಡೆಸಬಹುದು ಎಂದು ಹೇಳುತ್ತದೆ. ಈ ಜೋಡಿಗಳು ಆನ್‌ಲೈನ್ ಮೋಡ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ತಂತ್ರಜ್ಞಾನದ ಹಾದಿಯಲ್ಲಿ ಕಾನೂನು ಹೆಜ್ಜೆ ಇಡಬೇಕಾಗಿರುವುದರಿಂದ, ಇಲ್ಲಿ ಕಕ್ಷಿದಾರರ ಆಯ್ಕೆಯು ಕಾನೂನಾತ್ಮಕವಾಗಿ ಹಾದುಹೋಗುತ್ತದೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಏಷ್ಯಾ ಕಪ್ ವೇಳೆ ಟೀಂ ಇಂಡಿಯಾಗೆ ಮರಳಲಿದ್ದಾರೆ ವಿರಾಟ್ ಕೊಹ್ಲಿ
ಮೇ 5, 2022 ರಂದು, ಅವರು ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಈ ಜೋಡಿಗಳು ಸಬ್ ರಿಜಿಸ್ಟ್ರಾರ್‌ಗೆ ಅರ್ಜಿದಾರರೊಂದಿಗೆ ಜಂಟಿ ಅರ್ಜಿಯನ್ನು ಸಲ್ಲಿಸಿದರು. ಈ ನೋಟಿಸ್ ಪ್ರಕಟವಾದ ನಂತರ ರಾಹುಲ್ ತಂದೆ ಮತ್ತು ಇನ್ನೊಬ್ಬ ವ್ಯಕ್ತಿಯಿಂದ ಆಕ್ಷೇಪಣೆಗಳು ಬಂದಿವೆ. ಈ ಆಕ್ಷೇಪಣೆಗಳು ನ್ಯಾಯಸಮ್ಮತವಲ್ಲ ಎಂದು ವಿವಾಹ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ರಾಹುಲ್ ಭಾರತಕ್ಕೆ ಆಗಮಿಸಲು ವೀಸಾದ ಆಗತ್ಯವಿದ್ದು, ವೀಸಾ ಲಭ್ಯತೆಗೆ ಕಾಯಬೇಕಾಗಿರುವುದರಿಂದ ಹೆಚ್ಚು ಕಾಯಲು ಸಾಧ್ಯವಾಗಲಿಲ್ಲ. ವಧು ಭಾರತದಲ್ಲಿದ್ದರೂ, ಮದುಮಗ ಅಮೆರಿಕದಲ್ಲಿದ್ದರೂ ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ ತಮ್ಮ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಅವಕಾಶ ನೀಡಬೇಕು ಎಂದು ಇಬ್ಬರೂ ಕೇಳಿಕೊಂಡಿದ್ದಾರೆ.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.