![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 26, 2018, 10:00 AM IST
ಚೆನ್ನೈ: ತಮಿಳುನಾಡಿನ 18 ಶಾಸಕರ ಅನರ್ಹತೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದ್ದು, ಎಐಎಡಿಎಂಕೆ ಸರಕಾರ ನಿರಾಳವಾದಂತಾಗಿದೆ. ಈ ಹಿಂದೆ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತಾದರೂ ಜೂ.14ರಂದು ಆಗಿನ ಜಡ್ಜ್ ಇಂದಿರಾ ನೀಡಿದ ತೀರ್ಪನ್ನು ನ್ಯಾಯಪೀಠ ಈಗ ಎತ್ತಿ ಹಿಡಿದಿದೆ. ಜೂ.14ರಂದು ಮದ್ರಾಸ್ ಹೈಕೋರ್ಟ್ ದ್ವಂದ್ವ ತೀರ್ಪು ನೀಡಿತ್ತು. ಶಾಸಕರ ಅನರ್ಹತೆಗೊಳಿಸಿದ ಸ್ಪೀಕರ್ ಧನಪಾಲ್ ನಿರ್ಧಾರವನ್ನು ನ್ಯಾ| ಬ್ಯಾನರ್ಜಿ ಅನುಮೋದಿಸಿದ್ದರೆ, ನ್ಯಾ| ಎಂ.ಸುಂದರ್ ವ್ಯತಿರಿಕ್ತ ತೀರ್ಪು ನೀಡಿದ್ದರು. ಇದರಿಂದಾಗಿ ನ್ಯಾ| ಎಂ. ಸತ್ಯ ನಾರಾಯಣನ್‌ರನ್ನು ನೇಮಿಸಲಾಗಿತ್ತು. ಈಗ ತೀರ್ಪು ನೀಡಿರುವ ಅವರು, ನ್ಯಾ| ಬ್ಯಾನರ್ಜಿ ನೀಡಿದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.
ಕಳೆದ ವರ್ಷ ಸೆ.18ರಂದು 18 ಎಐಎಡಿಎಂಕೆ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಲಾಗಿತ್ತು. ಈ ಶಾಸಕರು ಎಐಎಡಿಎಂಕೆಯ ಇನ್ನೊಂದು ಬಣದ ಮುಖಂಡ ಟಿಟಿವಿ ದಿನಕರನ್‌ಗೆ ಬೆಂಬಲ ಸೂಚಿಸಿ, ಸಿಎಂ ಪಳನಿಸ್ವಾಮಿ ವಿರುದ್ಧ ಅವಿಶ್ವಾಸಮತ ಕೋರುವಂತೆ ರಾಜ್ಯಪಾಲರನ್ನು ಭೇಟಿಯಾಗಿ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಅನರ್ಹಗೊಳಿಸಲಾಗಿತ್ತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.