ಅಪ್ರಾಪ್ತ ವಯಸ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ : ಮದರಸಾ ಶಿಕ್ಷಕ ಅರೆಸ್ಟ್
ತನ್ನ ಮೇಲೆ ಲೈಂಗಿಕ ವಿಕೃತಿ ಮೆರೆದವನ ಮಗಳನ್ನೇ ರೇಪ್ ಮಾಡಿ ಸೇಡು ತೀರಿಸಿಕೊಂಡಿದ್ದ
Team Udayavani, Jun 2, 2019, 4:44 PM IST
ತಿರುವನಂತಪುರಂ: ಹಲವು ಅಪ್ರಾಪ್ತ ವಯಸ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಆರೋಪಿ ಮದರಸ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ 63 ರ ಹರೆಯದ ಯೂಸುಫ್ ಎನ್ನುವವನಾಗಿದ್ದು, ತಲಯೋಲಪರಂಬುವಿನ ಕೊಡುಂಗಲ್ಲೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.
ಡಜನ್‌ಗೂ ಹೆಚ್ಚು ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ ನಡೆಸಿರುವ ಬಗ್ಗೆ ಪೊಲೀಸರ ಬಳಿ ಬಾಯಿ ಬಿಟ್ಟಿರುವುದಾಗಿ ವರದಿಯಾಗಿದೆ, ಮಾತ್ರವಲ್ಲದೆ ತನ್ನಮೇಲೂ ಬಾಲಕನಾಗಿದ್ದಾಗ ಲೈಂಗಿಕ ದೌರ್ಜನ್ಯ ನಡೆದಿತ್ತು, ನಾನು ಆ ಸೇಡನ್ನು ಆತನ ಮಗಳ ಮೇಲೆ ದೌರ್ಜನ್ಯ ಎಸಗಿ ತೀರಿಸಿಕೊಂಡಿದ್ದೇನೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ಈತನ ಹೇಯ ಕೃತ್ಯದ ಬಗ್ಗೆ ಮಸೀದಿಯ ಮಹಲ್ಲು ಸಮಿತಿ ದೂರು ನೀಡಿತ್ತು.ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.