ಗಾಂಧಿ ಹತ್ಯೆ ವಿಚಾರಣೆಯ ಮಾಫಿ ಸಾಕ್ಷಿ, ಕುತೂಹಲದ ಸಂಗತಿ


Team Udayavani, Jan 30, 2020, 6:49 AM IST

gandhi-hatye

“”ಗಾಂಧೀಜಿ ಹತ್ಯೆಯ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ದಿಗಂಬರ ಬಡಗೆ ಮಾಫಿ ಸಾಕ್ಷಿಯಾಗಿ ಬಿಡುಗಡೆಗೊಂಡಿದ್ದಾನೆ. ಆದರೆ ಬಡಗೆ
ಬಳಿ ಜೀತದಾಳಾಗಿ ದುಡಿಯುತ್ತಿದ್ದ ಶಂಕರ ಕೃಷ್ಟಯ್ಯ ಶಿಕ್ಷೆಗೆ ಒಳಗಾಗಿದ್ದಾನೆ” ಎಂಬ ವಿಚಿತ್ರ ಸಂಗತಿ ಚರ್ಚೆಯ ಮುನ್ನೆಲೆಗೆ ಬಂತು. ಈ ಬಗ್ಗೆ ಲಂಡನ್ನಿನ ಪತ್ರಿಕೆಯೊಂದು ಸಂಪಾದಕೀಯ ಲೇಖನವನ್ನು ಬರೆಯಿತು.

ಪೂಜ್ಯ ಗಾಂಧೀಜಿಯವರ ಹತ್ಯೆಯ ಮೊಕದ್ದಮೆಯ ವಿಚಾರಣೆ ಭಾರತದ ನ್ಯಾಯಾಂಗದ ಒಂದು ಅಪ್ರಿಯ ಅಧ್ಯಾಯ. ಇದು ಭಾರತೀಯರಿಗೆಲ್ಲ ಅತ್ಯಂತ ಭಾವನಾತ್ಮಕ ಮತ್ತು ಸೂಕ್ಷ್ಮ ಸಂವೇದನೆಯ ಸಂಗತಿ. ಪ್ರಕರಣದ ವಿಚಾರಣೆಗೆ ಜಗತ್ತಿನ ತುಂಬ ಗಹನತೆ ಮತ್ತು ಭವ್ಯತೆ ಪ್ರಾಪ್ತವಾಗಿತ್ತು. ಈ ಹತ್ಯೆಯ ವಿಚಾರಣೆ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹತ್ಯೆ ನಡೆದು ಇದೇ ಜನವರಿ 30ಕ್ಕೆ 72 ವರ್ಷಗಳು ಪೂರ್ಣಗೊಳ್ಳುತ್ತವೆ. ಮರುವಿಚಾರಣೆ ಆಗಬೇಕು ಎಂಬ ಕೂಗು ಈಗಲೂ ಇದ್ದೇ ಇದೆ.

ಜಗತ್ತಿಗೆ ಪೂಜ್ಯರೆನಿಸಿದ ಗಾಂಧೀಜಿ ಹತ್ಯೆಯ ವಿಚಾರಣೆಯಲ್ಲಿ ಒಬ್ಬ ವ್ಯಕ್ತಿ ಅಧಿಕೃತವಾಗಿ ಮಾಫಿ ಸಾಕ್ಷಿ (ಸರ್ಕಾರಿ ಕಕ್ಷಿದಾರ)ಯಾಗಿ ಪರಿವರ್ತನೆಯಾದದ್ದು ತುಂಬ ಕೂತೂಹಲಕರ ಸಂಗತಿಯಾಗಿದೆ. ಮಾಫಿ ಸಾಕ್ಷಿಯಾಗಿದ್ದ ವ್ಯಕ್ತಿಯ ಹೆಸರು ದಿಗಂಬರ ರಾಮಚಂದ್ರ ಬಡಗೆ. ಈತ ಮದ್ದುಗುಂಡು ಹಾಗೂ ಆಯುಧಗಳ ವ್ಯಾಪಾರಿಯಾಗಿದ್ದ. ಈತನ ಬಳಿ ಶಂಕರ ಕೃಷ್ಟಯ್ಯ ಆಳಾಗಿ ದುಡಿಯುತ್ತಿದ್ದ. ಈತನು ಕೂಡ ಈ ಪ್ರಕರಣದ ಆರೋಪಿಯಾಗಿದ್ದ.

ಆರೋಪಿಗಳ ಸುರಕ್ಷತೆ ಮತ್ತು ತ್ವರಿತ ವಿಚಾರಣೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯ ಒಂದು ಭಾಗವನ್ನು ಸೆರೆಮನೆ ಮಾಡಿ ಅಲ್ಲಿ ಆರೋಪಿಗಳನ್ನು ಇಡಲಾಗಿತ್ತು. ಕೆಂಪು ಕೋಟೆಯ ಇನ್ನೊಂದು ಭಾಗವನ್ನು ನ್ಯಾಯಾಲಯವಾಗಿ ಪರಿವರ್ತಿಸಿ ವಿಚಾರಣೆ ನಡೆಸಲಾ ಯಿತು. ಕಾನ್ಪುರದ ಸೆಷನ್‌ ನ್ಯಾಯಾಧೀಶರಾಗಿದ್ದ ಎಚ್‌. ಆತ್ಮಚರಣ ಅವರನ್ನು ಈ ಪ್ರಕರಣದ ವಿಶೇಷ ನ್ಯಾಯಾಧೀಶರನ್ನಾಗಿ ಸರಕಾರ ನೇಮಕ ಮಾಡಿತು. ವಿಚಾರಣೆ 24-06-1948ರಂದು ಪ್ರಾರಂಭವಾಗಿ 30-12-1948ರಂದು ವಾದ-ಪ್ರತಿವಾದಗಳು ನಡೆದವು. ದೇಶ- ವಿದೇಶಗಳಲ್ಲಿ ವಿಚಾರಣೆಯ ವರದಿಗಳು ಪ್ರಕಟವಾಗುತ್ತಿದ್ದವು.

ಪೂರ್ಣ ವಿಚಾರಣೆಯ ನಂತರ ದಿನಾಂಕ 10-2-1949ರಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ಮೊದಲ ಆರೋಪಿ ನಾಥುರಾಮ ಗೋಡ್ಸೆ ಮತ್ತು ಎರಡನೇ ಆರೋಪಿ ನಾನಾ ಆಪ್ಟೆ ಇವರಿಗೆ ಮರಣದಂಡನೆ, ಮದನಲಾಲ್‌, ಶಂಕರ ಕೃಷ್ಟಯ್ಯ, ಗೋಪಾಲ ಗೋಡ್ಸೆ (ನಾಥುರಾಮ ಗೋಡ್ಸೆ ಸಹೋದರ) ಮತ್ತು ಡಾ. ಪರಚುರೆ ಇವರಿಗೆ ಆಜನ್ಮ ಕಾರಾಗೃಹ ಶಿಕ್ಷೆ ವಿಧಿಸಲಾಯಿತು.

ವಿನಾಯಕ ದಾಮೋದರ ಸಾವರ್ಕರ್‌ರನ್ನು ನಿರ್ದೋಶಿ ಎಂದು ಬಿಡುಗಡೆ ಮಾಡಲಾಯಿತು. ಮತ್ತು ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದ ದಿಗಂಬರ ರಾಮಚಂದ್ರ ಬಡಗೆಯನ್ನು ನ್ಯಾಯಾಲಯ ವಿಧಿಸಿದ್ದ ಕರಾರು ಕ್ರಮಬದ್ಧವಾಗಿ ಪಾಲಿಸಿದ್ದರಿಂದ ಬಿಡುಗಡೆ ಮಾಡಲಾಯಿತು.

ನ್ಯಾಯಾಲಯ ಪ್ರಕಟಿಸಿದ ಈ ತೀರ್ಪು ಕೇಳಿ ಆರೋಪಿಗಳಾÂರೂ ವಿಚಲಿತರಾಗಲಿಲ್ಲ. ಅವರೆಲ್ಲಾ “”ಅಖಂಡ ಭಾರತವು ಅಮರವಾ ಗಲಿ” ಎಂಬ ಘೋಷಣೆಗಳನ್ನು ಒಂದೇ ಸ್ವರದಲ್ಲಿ ಕೂಗಿದರು. ಅವರ ಎದುರಿಗೆ ನಿಂತಿದ್ದ ಈ ಪ್ರಕರಣದ ಮಾಫಿ ಸಾಕ್ಷಿ ದಿಗಂಬರ ರಾಮಚಂದ್ರ ಬಡಗೆ ತನ್ನ ಬಿಡುಗಡೆಯಾಗಿದ್ದರೂ ಉಮ್ಮಳಿಸಿ ಬಂದ ದುಃಖ ತಡೆದುಕೊಳ್ಳಲು ಆಗದೇ ಗಳಗಳನೆ ಅಳತೊಡಗಿದ.

ಗಾಂಧೀಜಿ ಹತ್ಯೆಯ ಮೊಕದ್ದಮೆ ಷಡ್ಯಂತ್ರದ ನಿಖರ ವಿವರ ಪಡೆಯುವುದು ತುಂಬ ಜಟಿಲವಾಗಿತ್ತು. ಇದಕ್ಕೆ ನ್ಯಾಯಾಲಯದ ಅಭಿಯೋಜಕರು ಬಡಗೆಯನ್ನು ಜಾಣ್ಮೆಯಿಂದ ಬಳಸಿಕೊಂಡರು. ಅವನಿಗೆ ಬಿಡುಗಡೆ ಆಸೆ ತೋರಿಸಿ, ಷಡ್ಯಂತ್ರದ ಎಲ್ಲ ಸತ್ಯವನ್ನು ವಿವರವಾಗಿ ಹೇಳುವಂತೆ ಮನ ಒಲಿಸಿದರು. ನಂತರ ಗೆಜೆಟ್‌ ಪ್ರಕಟಿಸಿ ಬಡಗೆ ಮಾಫಿಸಾಕ್ಷಿ ಎಂದು ದೃಢಪಡಿಸಲಾಯಿತು. ಬಡಗೆ ನ್ಯಾಯಾಲಯದಲ್ಲಿ ತನ್ನ ದೀರ್ಘ‌ ಹೇಳಿಕೆಯನ್ನು ನೀಡಿದನು. ಅವನ ಹೇಳಿಕೆಯ ಬಗ್ಗೆ ನ್ಯಾಯಾಧೀಶರು “”ಬಡಗೆ ತನ್ನ ಸಾಕ್ಷ್ಯವನ್ನು ನೇರವಾಗಿ, ಸರಾಗವಾಗಿ ಹೇಳಿದ್ದಾನೆ, ಪಾಟೀ ಸವಾಲುಗಳಿಂದ ನುಣುಚಿಕೊಳ್ಳಲು ಸತ್ಯವನ್ನು ಮುಚ್ಚಿಕೊಳ್ಳಲಿಲ್ಲ” ಎಂದು ತೀರ್ಪಿನಲ್ಲಿ ಶ್ಲಾ ಸಿದ್ದಾರೆ.

ದಿಗಂಬರ ಬಡಗೆಗೆ ಬಿಡುಗಡೆ ಹೊಂದಿದ್ದಕ್ಕೆ ಸಹಜವಾಗಿ ಸಂತೋಷವಾಗಬೇಕಾಗಿತ್ತು. ಆದರೆ ಜೊತೆಗಾರರಿಗೆ ನೇರಾ-ನೇರ ತನ್ನಿಂದ ದ್ರೋಹವಾಗಿದೆ ಎಂದು ಕಣ್ಣೀರು ಸುರಿಸತೊಡಗಿದ. ಅವನು ಮಾನಸಿಕ ಸ್ಥಿಮಿತ ಕಳೆದುಕೊಂಡು ನರಳತೊಡಗಿದ.

“”ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿದ್ದ ದಿಗಂಬರ ಬಡಗೆ ಮಾಫಿ ಸಾಕ್ಷಿಯಾಗಿ ಬಿಡುಗಡೆಗೊಂಡಿದ್ದಾನೆ. ಆದರೆ ಬಡಗೆ
ಬಳಿ ಜೀತದಾಳಾಗಿದ್ದು ದುಡಿಯುತ್ತಿದ್ದ ಶಂಕರ ಕೃಷ್ಟಯ್ಯ ಶಿಕ್ಷೆಗೆ ಒಳಗಾಗಿದ್ದಾನೆ” ಎಂಬ ವಿಚಿತ್ರ ಸಂಗತಿ ಚರ್ಚೆಯ ಮುನ್ನೆಲೆಗೆ ಬಂತು. ಎಲ್ಲ ಕಡೆ ಈ ವಿಷಯದ ಚರ್ಚೆ ನಡೆಯತೊಡಗಿತು. ಲಂಡನ್ನಿನ ಪತ್ರಿಕೆಯೊಂದು “”ದಿಗಂಬರ ಬಡಗೆ ಎಂಬ ಆರೋಪಿ ಮಾಫೀ ಸಾಕ್ಷಿಯಾಗಿ ಬಿಡುಗಡೆ ಯಾಗಿದ್ದಾನೆ. ವಿಚಿತ್ರ ಎಂದರೆ ಅವನ ನೌಕರನಿಗೆ ಶಿಕ್ಷೆಯಾಗಿದೆ” ಎಂದು ಸಂಪಾದಕೀಯ ಲೇಖನವನ್ನು ಬರೆಯಿತು. ಕಳ್ಳತನ ಮಾಡಿದವನನ್ನು ಬಿಟ್ಟು ಇಣುಕಿ ನೋಡಿದವನಿಗೆ ಶಿಕ್ಷೆಯಾಗಿದೆ ಎಂದು ಎಲ್ಲ ಕಡೆ ಅಭಿಪ್ರಾಯ ಪ್ರಕಟವಾಗತೊಡಗಿತು. ನ್ಯಾಯಾಲಯಕ್ಕೂ ಇದು ಮುಜುಗರವನ್ನುಂಟು ಮಾಡಿತು.

ಶಂಕರ ಕೃಷ್ಟಯ್ಯ ಮೂಲತಃ ಆಂಧ್ರ ಪ್ರದೇಶದವನು. ಮುಂಬೈಗೆ ಬಂದು ನೆಲೆಸಿದ್ದ. ಹೊಟ್ಟೆಪಾಡಿಗೆ ಜೀತದಾಳಾಗಿ ದಿಗಂಬರ ಬಡಗೆ ಬಳಿ ದುಡಿಯುತ್ತಿದ್ದ. ಬಡಗೆ ಪ್ರತಿ ದಿನ ಶಂಕರಗೆ ವಿಪರೀತ ಕಿರುಕುಳ ನೀಡುತ್ತಿದ್ದ. ತಪ್ಪಿಸಿಕೊಂಡು ಹೋದರೆ ಹಲ್ಲೆ ಮಾಡಿ ಹಿಡಿದುಕೊಂಡು ಬಂದು ಗೃಹ ಬಂಧನದಲ್ಲಿ ಇಡುತ್ತಿದ್ದ. ಈ ಎಲ್ಲ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸಿ ವಕೀಲರೊಬ್ಬರು (ಶಿಕ್ಷೆ ಪ್ರಕಟವಾದ 15 ದಿನಗಳೊಳಗಾಗಿ) ಶಂಕರ ಕೃಷ್ಟಯ್ಯನನ್ನೂ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಅಸಹಾಯಕನಾಗಿದ್ದ ಅವನ ಈ ಜೀವನ ವೃತ್ತಾಂತ ನ್ಯಾಯಾಲಯದ ಗಮನಕ್ಕೆ ಬಂತು. ಇದರಿಂದಾಗಿ ನ್ಯಾಯಾಲಯವು ಮೊದಲಿನ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸಿ 7 ವರ್ಷ ಶಿಕ್ಷೆಗೆ ಇಳಿಸಲಾಯಿತು. ಇದಕ್ಕೆ ವಕೀಲರು ಸಮಾಧಾನಗೊಳ್ಳಲಿಲ್ಲ. ಅವರು ತಮ್ಮ ಹೋರಾಟವನ್ನು ಮುಂದುವರಿಸಿದರು. ಶಂಕರ ಕೃಷ್ಟಯ್ಯಗೆ ಬಡಗೆ ನೀಡಿದ ಹಿಂಸೆ ಮತ್ತು ಅವನ ಮೇಲೆ ಎಸಗಿದ ದೌರ್ಜನ್ಯ ಎಲ್ಲದರ ಮಾಹಿತಿಯನ್ನು ಸಂಪೂರ್ಣವಾಗಿ ಕಲೆಹಾಕಿ ನ್ಯಾಯಾಲಯಕ್ಕೆ ಪುನರ್‌ಮನವಿ ಸಲ್ಲಿಸಿದಾಗ ನ್ಯಾಯಾಧೀಶರು ದಾಖಲೆಗಳನ್ನು ಪೂರ್ಣವಾಗಿ ಪರಿಶೀಲಿಸಿ ಶಂಕರ ಕೃಷ್ಟಯ್ಯನನ್ನೂ ಬಿಡುಗಡೆಗೊಳಿಸಿದರು.

ದಿಗಂಬರ ಬಡಗೆಗೆ ಮುಂದೆ ನೆಮ್ಮದಿಯಿಂದ ಬದುಕುವುದು ಸಾಧ್ಯವಾಗಲಿಲ್ಲ. ತಾನು ಸಂಗಾತಿಗಳಿಗೆ ದ್ರೋಹ ಮಾಡಿದೆ ಎಂದು ಪರಿತಪಿಸುತ್ತಿದ್ದ. ಅವನಿಗೆ ಮುಂಬೈ ಪೋಲಿಸ್‌ ಕಮಿಷನರ್‌ ಕಛೇರಿಯ ಆವರಣದಲ್ಲಿ ಒಂದು ಕೊಠಡಿ ಕೊಟ್ಟು ರಕ್ಷಣೆ ಒದಗಿಸಲಾಗಿತ್ತು. ಅವನು ಮುಂದೆ 2006ರಲ್ಲಿ ಅನಾರೋಗ್ಯ ಹಾಗೂ ವೃದ್ಧಾಪ್ಯದಿಂದ ನಿಧನ ಹೊಂದಿದ. ಶಂಕರ ಕೃಷ್ಟಯ್ಯ ಆಂಧ್ರಕ್ಕೆ ಹೋಗಿ ನೆಲೆಸಿದ.

ನಾಥುರಾಮ್‌ ಗೋಡ್ಸೆಯ ಸಹೋದರ ಗೋಪಾಲ್‌ ಗೋಡ್ಸೆ ಶಿಕ್ಷೆಯ ಅವಧಿ ಪೂರೈಸಿ ಬಿಡುಗಡೆಯಾಗಿ ಪುಣೆಯಲ್ಲಿ ನೆಲೆಸಿದ್ದ. ಗಾಂಧೀಜಿ ಅವರ ಪುತ್ರ ರಾಮದಾಸ್‌ ಗಾಂಧಿ ತೀವ್ರ ಅನಾರೋಗ್ಯದಿಂದ ಮುಂಬೈ ಕ್ಯಾನ್ಸರ್‌ ಆಸ್ಪತ್ರೆಗೆ ದಾಖಲಾದ ಸಂಗತಿಯನ್ನು ಪತ್ರಿಕೆಯಲ್ಲಿ ಗೋಪಾಲ್‌ ಗೋಡ್ಸೆ ಒಂದು ದಿನ ಓದಿದ. ಗಾಂಧಿ ಹತ್ಯೆಯ ಆರೋಪಿಗಳಿಗೆ ನೇಣು ಶಿಕ್ಷೆ ಬೇಡ ಎಂದು ರಾಮದಾಸ ಗಾಂಧಿ ಹೋರಾಟ ಮಾಡಿದ್ದು ಹಾಗೂ ಆಗ ಗೃಹ ಸಚಿವರಾಗಿದ್ದ ವಲ್ಲಭಭಾಯಿ ಪಟೇಲರಿಗೆ ಮನವಿ ಸಲ್ಲಿಸಿದ್ದನ್ನು ನೆನಪು ಮಾಡಿಕೊಂಡ.

ರಾಮದಾಸ್‌ಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮುಂಬೈ ಆಸ್ಪತ್ರೆಗೆ ಹೊರಟು ಬಂದ. ರಾಮದಾಸರ ಮಗಳು ಸುಮಿತ್ರ ಕುಲಕರ್ಣಿ ತಂದೆ ಮಲಗಿದ ರೂಂನ ಹೊರಗೆ ಕುಳಿತಿದ್ದರು. ಅಚಾನಕ್ಕಾಗಿ ಬಂದ ಅತಿಥಿ ತಾನು ಗೋಪಾಲ ಗೋಡ್ಸೆ ಎಂದು ಪರಿಚಯ ಹೇಳಿಕೊಳ್ಳುತ್ತಾನೆ. ಹೆಸರು ಕೇಳುತ್ತಲೇ ಸುಮಿತ್ರ ಅವರು ವಿಚಲಿತಗೊಂಡವರಂತೆ ನಿಂತುಬಿಡುತ್ತಾರೆ. ಅವರ ಉತ್ತರಕ್ಕೂ ಕಾಯಿದೆ ಗೋಪಾಲ ಗೋಡ್ಸೆ ರೂಂ ಒಳಗೆ ನುಗ್ಗಿ ರಾಮದಾಸರ ಚರಣಗಳನ್ನು ಗಟ್ಟಿಯಾಗಿ ಹಿಡಿದು ಹಣೆ ಹಚ್ಚಿ ನಮಸ್ಕರಿಸುತ್ತಾನೆ.

ಸುಮಿತ್ರ ಕುಲಕರ್ಣಿ ಅವರು ಈ ಘಟನೆಯನ್ನು “”ಗಾಂಧಿ ಮೇರೆ ಪಿತಾಮಹ” ಕೃತಿಯಲ್ಲಿ ಮನಕಲಕುವಂತೆ ದಾಖಲಿಸಿದ್ದಾರೆ.

– ಮಲ್ಲಿಕಾರ್ಜುನ್‌ ಹೆಗ್ಗಳಗಿ, ಮುಧೋಳ

ಟಾಪ್ ನ್ಯೂಸ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.