ರಾಜ್ಯಪಾಲರ ಆಯ್ಕೆಗೆ ಕೆಲವು ಮಾನದಂಡಗಳನ್ನು ನಿಗದಿಪಡಿಸಬೇಕು : ಉದ್ಧವ್ ಠಾಕ್ರೆ
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ; ವ್ಯಂಗ್ಯವಾಡಿದ ಮಾಜಿ ಸಿಎಂ
Team Udayavani, Dec 3, 2022, 5:25 PM IST
ಮುಂಬಯಿ: ರಾಜ್ಯಪಾಲರ ಹುದ್ದೆಗೆ ವ್ಯಕ್ತಿಗಳ ಆಯ್ಕೆಗೆ ಕೆಲವು ಮಾನದಂಡಗಳನ್ನು ನಿಗದಿಪಡಿಸಬೇಕು ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಸಮಾಜ ಸುಧಾರಕರಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯಂತಹ ಪೂಜ್ಯ ವ್ಯಕ್ತಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಠಾಕ್ರೆ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಸಚಿವರೊಬ್ಬರ (ಏಕನಾಥ್ ಶಿಂಧೆ) ದ್ರೋಹವನ್ನು ಜೂನ್‌ನಲ್ಲಿ ಮಹಾ ವಿಕಾಸ್ ಅಘಾಡಿ ಸರಕಾರವನ್ನು ಉರುಳಿಸಿದ ಬಂಡಾಯವನ್ನು ಯೋಧನೊಬ್ಬ ರಾಜನ ಆಸ್ಥಾನದಿಂದ ತಪ್ಪಿಸಿಕೊಳ್ಳುವುದಕ್ಕೆ ಹೋಲಿಸಿದ್ದಾರೆ ಮತ್ತು ಅಂತಹ ಜನರು ಕಚೇರಿಯಲ್ಲಿ ಮುಂದುವರಿಯುತ್ತಾರೆ ಎಂದು ಹೇಳಿದರು.
“ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳ ಪ್ರತಿನಿಧಿಯಾಗಿದ್ದಾರೆ ಮತ್ತು ಅಂತಹ ಹುದ್ದೆಗೆ ಯಾರನ್ನು ನೇಮಿಸಬಹುದು ಎಂಬುದರ ಕುರಿತು ಕೆಲವು ಮಾನದಂಡಗಳಿರಬೇಕು. ಅಂತಹ ನಿಯಮಗಳನ್ನು ರೂಪಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯ ಮತ್ತು ಅದರ ಮಹಾನ್ ಸಾಧಕರುಗಳನ್ನು ಅವಮಾನಿಸುವವರ ವಿರುದ್ಧ ಕೈಜೋಡಿಸುವಂತೆ ಜನರು ಮತ್ತು ನಾಗರಿಕರಿಗೆ ತಮ್ಮ ಮನವಿಯನ್ನು ಪುನರುಚ್ಚರಿಸಿದ ಠಾಕ್ರೆ, “ಮುಂದಿನ ದಿನಗಳಲ್ಲಿ ನಾವು ಕಾರ್ಯಕ್ರಮವನ್ನು ಘೋಷಿಸುತ್ತೇವೆ. ನಾವು ನಮ್ಮನ್ನು ಮಹಾರಾಷ್ಟ್ರ ಬಂದ್‌ಗೆ ಸೀಮಿತಗೊಳಿಸಲು ಬಯಸುವುದಿಲ್ಲ ಎಂದರು.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಮಾತನಾಡಿದ ಠಾಕ್ರೆ, ಇಲ್ಲಿನ ಸಚಿವರು ಬೆಳಗಾವಿಗೆ ಬರುವುದಿಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೌನವಾಗಿದ್ದಾರೆ. ಬೆಳಗಾವಿ ಮತ್ತು ಕರ್ನಾಟಕದ ಇತರ ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಮತ್ತೆ ಪಡೆಯಲು ಕಾಮಾಖ್ಯ ದೇವಿಯಲ್ಲಿ ಪ್ರಾರ್ಥಿಸಲು ಶಿಂಧೆ ಮತ್ತು ಅವರ ಶಾಸಕರು ಗುವಾಹಟಿ (ಅಸ್ಸಾಂ) ಗೆ ಹೋಗಬೇಕಿತ್ತು” ಎಂದು ಠಾಕ್ರೆ ವ್ಯಂಗ್ಯವಾಡಿದರು.
ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೋ ರೈಲು ನಿರ್ಮಾಣದ ಬಗ್ಗೆ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡು, ಕಂಜುರ್ಮಾರ್ಗ್‌ನಲ್ಲಿ ಈ ಸೌಲಭ್ಯವನ್ನು ತರಬಹುದಿತ್ತು ,ಆದರೆ ರಾಜ್ಯ ಸರಕಾರದ ಧೋರಣೆಯು ಪರಿಸರ ಹಾನಿಯ ವೆಚ್ಚದಲ್ಲಿ ತನ್ನ ಅಹಂಕಾರವನ್ನು ರಕ್ಷಿಸುತ್ತದೆ ಎಂದರು.
ಠಾಕ್ರೆ ಅವರು”ನಮ್ಮ ಪಕ್ಷವು ವಿಭಜನೆಯಾಗಿಲ್ಲ, ಆದರೆ ದಿನದಿಂದ ದಿನಕ್ಕೆ ಬಲವಾಗಿ ಬೆಳೆಯುತ್ತಿದೆ” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.