Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!
Team Udayavani, Jan 16, 2025, 8:44 AM IST
ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭಾಗಿಯಾಗು ತ್ತಿದ್ದಾರೆ. ಗುರುವಾರ ಭಾರತ ಸರಕಾರವೇ ಆಹ್ವಾನಿಸಿರುವ 10 ದೇಶಗಳ 21 ಮಂದಿಯ ತಂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.
ಫಿಜಿ, ಫಿನ್ಲಂಡ್, ಗಯಾನಾ, ಮಲೇಶಿಯಾ, ಮಾರಿಷಸ್, ಸಿಂಗಾಪುರ, ದ.ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋ ಹಾಗೂ ಯುಎಇ ದೇಶಗಳಿಂದ 21 ಮಂದಿಯನ್ನು ಭಾರತದ ವಿದೇ ಶಾಂಗ ಸಚಿವಾಲಯ ಆಹ್ವಾನಿಸಿದೆ. ಗುರುವಾರ ಸಾಯಂಕಾಲ 5 ಗಂಟೆಯಿಂದ 6.30ರೊಳಗೆ ಇವರು ಪುಣ್ಯಸ್ನಾನ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.
ಚಳಿಯನ್ನೂ ಲೆಕ್ಕಿಸದ ಜನ: ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಮಳೆಯಾಗಿದ್ದು, ಉಷ್ಣಾಂಶ ಬಹುತೇಕ ತಗ್ಗಿದೆ. ಹೀಗಿದ್ದರೂ ಸಹ ಚಳಿಯನ್ನು ಲೆಕ್ಕಿಸದೇ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದ ಘಟನೆ ಸಾಮಾನ್ಯವಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಸಾಯಂಕಾಲ ಉಷ್ಣಾಂಶ 16 ಡಿಗ್ರಿ ಸೆ.ಗಿಂತ ಕನಿಷ್ಠಕ್ಕಿಳಿದಿತ್ತು.
ಸಂಚಾರಿ ಗುಣಮಟ್ಟ ಪರೀಕ್ಷಾ ವಾಹನ: ಕುಂಭ ಮೇಳ ದಲ್ಲಿ ಮಾರಾಟವಾಗುತ್ತಿರುವ ಆಹಾರಗಳ ಗುಣ ಮಟ್ಟವನ್ನು ಪರೀಕ್ಷೆ ಮಾಡಲು ಸಂಚಾರಿ ಗುಣಮಟ್ಟ ಪ್ರಯೋಗಾಲಯವನ್ನು ಉತ್ತರ ಪ್ರದೇಶ ಸರಕಾರ ನಿಯೋಜನೆ ಮಾಡಿದೆ. ಹಾಳಾಗಿರುವ ಅಥವಾ ಕಲಬೆರಕೆ ಆಹಾರ ಯಾತ್ರಿಗಳಿಗೆ ಪೂರೈಕೆ ಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.
ಇದನ್ನೂ ಓದಿ: Indian Navy: ಭಾರತೀಯ ನೌಕಾಪಡೆಗೆ ದೇಶಿ ನಿರ್ಮಿತ ತ್ರಿವಳಿ ಬಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.