ಚಿರಾಪುಂಜಿ ಹಿಂದಿಕ್ಕಿದ ಮಹಾಬಲೇಶ್ವರ
Team Udayavani, Aug 30, 2018, 9:15 AM IST
ಪುಣೆ: ವಿಶ್ವದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಹೆಗ್ಗಳಿಕೆ ಹೊಂದಿರುವ ಮೇಘಾಲಯದ ಚಿರಾ ಪುಂಜಿಗೆ ಮಹಾರಾಷ್ಟ್ರದ ಮಹಾಬಲೇಶ್ವರ ಸಡ್ಡು ಹೊಡೆದಿದೆ. ಈ ವರ್ಷದ ಜೂ. 1ರಿಂದ ಆ. 28ರ ಅವಧಿಯಲ್ಲಿ ಚಿರಾಪುಂಜಿಗಿಂತ 888.80 ಮಿ.ಮೀ.ಹೆಚ್ಚು ಮಳೆ ಮಹಾಬಲೇಶ್ವರದಲ್ಲಿ ದಾಖಲಾಗಿದ್ದು, ಈ ಬಾರಿ ವಿಶ್ವದಲ್ಲೇ ಅತೀ ಹೆಚ್ಚು ಮಳೆ ಬಿದ್ದ ಪ್ರದೇಶವೆಂಬ ಹೆಗ್ಗಳಿಕೆ ಪಡೆಯುವತ್ತ ದಾಪುಗಾಲಿಟ್ಟಿದೆ.
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, ಸಾಮಾ ನ್ಯ ಮಳೆಗಾಲದಲ್ಲಿ ಚಿರಾಪುಂಜಿಯಲ್ಲಿ ಸರಾ ಸ ರಿ 8,000 ಮಿ.ಮೀ.ನಷ್ಟು ಮಳೆ ಯಾ ಗು ತ್ತದೆ. ಕಳೆದ ವರ್ಷದ ಜೂ.1ರಿಂದ ಆ. 28ರ ನಡುವೆ ಇಲ್ಲಿ 6,960 ಮಿ.ಮೀ. ಮಳೆಯಾಗಿತ್ತು. ಆದರೆ ಈ ಬಾರಿ ಈ ಪ್ರಮಾಣ ಕುಸಿದಿದ್ದು 4,730.2 ಮಿ.ಮೀ. ಮಳೆ ಯಾ ಗಿದೆ. ಮಹಾಬಲೇಶ್ವರದಲ್ಲಿ ಇದೇ ಅವಧಿಯಲ್ಲಿ 5,619 ಮಿ.ಮೀ.ನಷ್ಟು ಮಳೆ ಬಿದ್ದಿದೆ.
ಅಗಾಧ ಮಳೆಗೆ ಕಾರಣವೇನು?
ಐಎಂಡಿಯ ಹವಾ ಮಾನ ತಜ್ಞ ಎ.ಕೆ. ಶ್ರೀವಾ ಸ್ತವ ಅವರ ಪ್ರಕಾರ, ಒಡಿಶಾ-ಪಶ್ಚಿಮ ಬಂಗಾಲದಲ್ಲಿ ವಾಯುಭಾರ ಕುಸಿದಿದ್ದರಿಂದಾಗಿ ಉಂಟಾದ ಮಳೆಯ ಮಾರು ತ ಗಳು ಆ ಭಾಗ ದಲ್ಲಿ ಮಳೆ ಸುರಿ ಸದೆ ಭಾರ ತದ ಕೇಂದ್ರ ಭಾಗದ ಕಡೆಗೆ ಸಂಚ ರಿಸಿ ಕ್ರಮೇಣ ಪಶ್ಚಿಮ ಘಟ್ಟಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಾಬಲೇಶ್ವರದಲ್ಲಿ ಮಳೆ ಸುರಿ ಸಿದ್ದೇ ಈ ಭಾಗ ದಲ್ಲಿ ಅತೀ ಹೆಚ್ಚು ಮಳೆ ಬೀಳಲು ಕಾರಣ ಎಂದಿ ದ್ದಾರೆ.
4,730.2 ಮಿ.ಮೀ. ಚಿರಾಪುಂಜಿಯಲ್ಲಿ ದಾಖಲಾದ ಮಳೆ ಪ್ರಮಾಣ
5,619 ಮಿ.ಮೀ. ಮಹಾಬಲೇಶ್ವರದಲ್ಲಿ ದಾಖಲಾದ ಮಳೆ ಪ್ರಮಾಣ
(ಜೂ.1ರಿಂದ ಆ.28ರ ಅವಧಿಯಲ್ಲಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.