ಮಹದಾಯಿ: ಕರ್ನಾಟಕಕ್ಕೆ ನ್ಯಾಯಯುತ ಪಾಲು
Team Udayavani, Jan 4, 2018, 7:00 AM IST
ಪಣಜಿ: ಕರ್ನಾಟಕಕ್ಕೆ ಮಹದಾಯಿ ನೀರಿನಲ್ಲಿ ನ್ಯಾಯಯುತ ಪಾಲು ಸಿಗಲಿದೆ. ನೀರನ್ನು ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಜತೆಗೆ ಹಂಚಿಕೊಳ್ಳುವುದು ಅನಿವಾರ್ಯ ಎಂದಿದ್ದಾರೆ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್.
ಬುಧವಾರ ಮಾತನಾಡಿದ ಅವರು, ನೆರೆಯ ರಾಜ್ಯಕ್ಕೆ ಅದರ ಪಾಲು ಸಿಗುತ್ತಿಲ್ಲ ಎಂದು ಯಾರಾದರೂ ಭಾವಿಸಿದರೆ ಅದು ಅವರ
ಮೂರ್ಖತನವಷ್ಟೇ ಎಂದಿದ್ದಾರೆ. ಕರ್ನಾಟಕದಲ್ಲಿ ಮಹದಾಯಿ ನದಿ 35 ಕಿಮೀ ಹರಿಯುತ್ತದೆ. ಕರ್ನಾಟಕ ಮಹದಾಯಿ ನದಿ ಪಾತ್ರದ ಪ್ರದೇಶಗಳಿಗೆ ನದಿಯಿಂದ ಕುಡಿಯಲು ನೀರನ್ನು ಬಳಿಸಿಕೊಳ್ಳಬಹುದು. ಆದರೆ ನದಿ ಪಾತ್ರದ ಹೊರತಾದ ಪ್ರದೇಶಗಳಿಗಾಗಿ ನದಿ ನೀರು ಬಳಸಿಕೊಳ್ಳಲು ಅವಕಾಶವಿಲ್ಲ ಎಂದರು. ಕರ್ನಾಟಕ ನದಿ ಪಾತ್ರವಲ್ಲದ ಪ್ರದೇಶಗಳಿಗೆ ನೀರು ನೀಡಲು ಈ ವಿವಾದ ಹುಟ್ಟುಹಾಕಿದೆ. ನೀರು ಹಂಚಿಕೆ ವಿಚಾರ ಈಗ ನ್ಯಾಯಮಂಡಳಿ ಮುಂದಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.