Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಮಹಾಕುಂಭದಲ್ಲಿ ಆ್ಯಪಲ್ ಸಹಸ್ಥಾಪಕನ ಪತ್ನಿ ವ್ರತ!.... ಮಾಲಿನ್ಯ ತಡೆಗೆ ಜಪಾನ್‌ತಂತ್ರಜ್ಞಾನದಲ್ಲಿ ಅರಣ್ಯ
Team Udayavani, Jan 10, 2025, 6:45 AM IST
ಪ್ರಯಾಗ್‌ರಾಜ್: ಐತಿಹಾಸಿಕ ಮಹಾಕುಂಭ ಮೇಳ ವನ್ನು ಇದಿರುಗೊಳ್ಳುವುದಕ್ಕೆ ಪ್ರಯಾಗ್‌ರಾಜ್‌ನಲ್ಲಿ ಕೊನೇ ಹಂತದ ಸಿದ್ಧತೆ ನಡೆಸಲಾಗುತ್ತಿದೆ. 144 ವರ್ಷ ಕ್ಕೊಮ್ಮೆ ಘಟಿಸುವ ಈ ಮಹಾ ಕ್ಷಣವನ್ನು ಖುದ್ದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಹಾಕುಂಭ ಪರ್ವ, ಸನಾತನ ಗರ್ವ ಎಂದು ವ್ಯಾಖ್ಯಾನಿಸಿದ್ದಾರೆ.
ಗುರುವಾರ ಪ್ರಯಾಗ್‌ರಾಜ್‌ನ ಸಂಗಮ ಪ್ರದೇಶ ದಲ್ಲಿ ಸತತ ಐದು ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಅವರು ಕುಂಭಮೇಳದ ಅಖಾಡದಲ್ಲಿ ಖುದ್ದು ಯೋಗಿಗಳಂತೆ ಓಡಾಡಿ ಸಂತರಿಂದ ಮಾಹಿತಿ ಪಡೆದಿ¨ªಾರೆ. ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹಾಗೂ ಸಂಪುಟ ಸಹೋದ್ಯೋಗಿಗಳ ಜತೆಗೆ ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿರುವ ಆದಿತ್ಯನಾಥ, ವಿಶ್ವದ ಅತೀ ದೊಡ್ಡ ಧಾರ್ಮಿಕ ಸಂಗಮದ ಸಿದ್ಧತೆಗಳಿಗೆ ಸಾಕ್ಷಿಯಾಗಿ¨ªಾರೆ.
ಇಲ್ಲಿನ ಎಲ್ಲ ಸಿದ್ಧತೆಗಳ ಬಗ್ಗೆ ಗುರುವಾರ ಮಹತ್ವದ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಯೋಗಿ ಆದಿತ್ಯನಾಥ್ ” ಮಹಾಕುಂಭ ಮೇಳ ಆಸ್ಥಾ (ಧಾರ್ಮಿಕ) ಹಾಗೂ ಆಧುನಿಕತೆಯ ಸಮ್ಮಿಳನ. ಇದು ಧಾರ್ಮಿಕ ಶಕ್ತಿ ಪ್ರದರ್ಶನದ ಜತೆಗೆ ಆರ್ಥಿಕತೆಯ ಅಭ್ಯುದಯಕ್ಕೂ ನೆರವಾಗಲಿದೆ. ಈ ಬಾರಿ ನಡೆಯು ಮಹಾ ಕುಂಭ ಮೇಳದಿಂದ 2 ಲಕ್ಷ ಕೋಟಿ ರೂ. ವ್ಯವಹಾರ ನಡೆಯುವ ಅಂದಾಜಿದೆ. ಇದು ಪ್ರಯಾಗರಾಜ್ ಜತೆಗೆ ದೇಶದ ಅರ್ಥ ವ್ಯವಸ್ಥೆಗೂ ಬಲ ನೀಡಲಿದೆ’ ಎಂದರು.
ಒಟ್ಟು 10 ಸಾವಿರ ಎಕ್ರೆ ಪ್ರದೇಶದಲ್ಲಿ ಕುಂಭ ಮೇಳಕ್ಕೆ ಸಂಬಂಧಪಟ್ಟ ಚಟುವಟಿಕೆ ನಡೆಯಲಿದ್ದು ಪ್ರಯಾಗ್ ರಾಜ್ ಮೇಳ ಪ್ರಾಧಿಕಾರದ ಹೆಸರಿನಲ್ಲಿ ಮಾಸ್ಟರ್ ಪ್ಲ್ಯಾನ್ ರಚಿಸಲಾಗಿದೆ ಎಂದರು. ಮೌನಿ ಅಮಾವ್ಯಾಸೆಯ ದಿನ ಕುಂಭ ಮೇಳಕ್ಕೆ 8 ರಿಂದ 10 ಕೋಟಿ ಜನರು, ವಸಂತ ಪಂಚಮಿಯ ದಿನ 5 ರಿಂದ 6 ಕೋಟಿ ಜನರು, ಮಹಾ ಶಿವರಾತ್ರಿಯ ದಿನ 5 ಕೋಟಿ ಜನರು ಆಗಮಿಸಲಿದ್ದು, ಒಟ್ಟಾರೆ 45 ಕೋಟಿ ಜನರು ಭೇಟಿ ನೀಡಲಿದ್ದಾರೆ. ಇದು ಭಾರತದ ಆಧ್ಯಾ ತ್ಮಿಕ ಹಾಗೂ ಧಾರ್ಮಿಕ ಶಕ್ತಿಯನ್ನು ವಿಶ್ವದ ಮುಂದೆ ಅನಾವರಣಗೊಳಿಸುವ ಮಹಾನ್ ಕ್ಷಣವಾಗಿದೆ.
ಸುಮಾರು 1 ಲಕ್ಷ ಜನರು ಕುಂಭ ಮೇಳದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಡಬಲ್ ಎಂಜಿನ್ ಸರಕಾರ ಅತ್ಯಂತ ವ್ಯವಸ್ಥಿತವಾಗಿ ನಡೆಸಿ ಪ್ರಪಂಚದ ಎದುರು ಸನಾತನ ಧರ್ಮದ ಅಸ್ಮಿತೆಯ ಪ್ರದರ್ಶನ ಮಾಡಲಿದೆ ಎಂದರು.
ಎಐ ತಂತ್ರಜ್ಞಾನ
ಈ ಬಾರಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನವನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುವುದು. ಇದನ್ನು ಡಿಜಿಟಲ್ ಕುಂಭ ಎಂದು ಘೋಷಣೆ ಮಾಡಿರುವುದರಿಂದ ದೇಶ- ವಿದೇಶದ ಶ್ರದ್ಧಾಳುಗಳು ಮನೆಯಲ್ಲೇ ಕುಳಿತು ಎಲ್ಲವನ್ನೂ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ ಆ್ಯಂಟಿ ಡ್ರೋನ್ ಸಿಸ್ಟಮ್, ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ.
ಮಹಾಕುಂಭ ಮೇಳ ಪ್ರಯಾಗರಾಜ್‌ಗೆ ಅದ್ಭುತ, ಅಲೌಕಿಕ, ಅಕಲ್ಪನೀಯ ಮೆರುಗನ್ನು ನೀಡಿದೆ. ಇನ್ನು ಮುಂದೆ ಪ್ರಯಾಗ್‌ರಾಜ್ ವರ್ಷಪೂರ್ತಿ ಇದೇ ಸಂಭ್ರಮದಿಂದ ಭಕ್ತರು, ಶ್ರದ್ಧಾಳುಗಳನ್ನು ಕೈ ಬೀಸಿ ಕರೆಯುವಂತೆ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು. 3,000ಕ್ಕೂ ಅಧಿಕ ವಿಶೇಷ ರೈಲುಗಳು ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಆಗಮಿಸುತ್ತಿದ್ದು, ಸ್ವಚ್ಚ, ಸುರಕ್ಷಿತ ಕುಂಭ ನಮ್ಮ ಆದ್ಯತೆ ಎಂದು ತಿಳಿಸಿದರು.
ಮಹಾಕುಂಭದಲ್ಲಿ ಆ್ಯಪಲ್ ಸಹಸ್ಥಾಪಕನ ಪತ್ನಿ ವ್ರತ!
ಈ ಕುಂಭಮೇಳನದಲ್ಲಿ ಆ್ಯಪಲ್ ಕಂಪೆನಿ ಸಹಸ್ಥಾಪಕ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್ ಅವರ ಪತ್ನಿ, ಜಗತ್ತಿನ ಅತೀ ಶ್ರೀಮತ ಮಹಿಳೆಯರಲ್ಲಿ ಒಬ್ಬರಾದ ಲಾರೀನ್ ಪೋವೆಲ್ ಜಾಬ್ಸ್ ಕೂಡ ಭಾಗಿಯಾಗಲಿದ್ದಾರೆ. ವಿಧವೆ ಲಾರೀನ್ ಪ್ರಯಾಗ್‌ರಾಜ್‌ಗೆ ಆಗಮಿಸಿ ನಿರಂಜನಿ ಅಖಾಡದ ಸ್ವಾಮಿ ಕೈಲಾಸಾನಂದ ಅವರ ಶಿಬಿರದಲ್ಲಿ ತಂಗಿ, ಕಲ್ಪವಾಸ್ ವ್ರತ ಕೈಗೊಳ್ಳಲಿದ್ದಾರೆ. ಜ.29ರ ವರೆಗೆ ಅವರು ಇಲ್ಲೇ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಕಲ್ಪವಾಸ್?: ಶರೀರ ಮತ್ತು ಮನಸ್ಸನ್ನು ಶುದ್ಧೀಕರಿಸಿ ಅಧ್ಯಾತ್ಮ ಜ್ಞಾನ ಗಳಿಸಲು ಕೈಗೊಳ್ಳುವ ವ್ರತ. ಪುಷ್ಯ ಪೂರ್ಣಿಮೆಯಿಂದ ಆರಂಭವಾಗಿ ಮಾಘ ಪೂರ್ಣಿಮೆಯವರೆಗೆ ಅಂದರೆ 1 ತಿಂಗಳ ಕಾಲ ಈ ವ್ರತ ಮಾಡಲಾಗುತ್ತದೆ. ಇದನ್ನು ಕೈಗೊಳ್ಳುವವರನ್ನು “ಕಲ್ಪವಾಸೀಸ್’ ಎಂದು ಕರೆಯುತ್ತಾರೆ.
ಮಾಲಿನ್ಯ ತಡೆಗೆ ಜಪಾನ್‌ತಂತ್ರಜ್ಞಾನದಲ್ಲಿ ಅರಣ್ಯ
ವಾಯುಮಾಲಿನ್ಯ ತಗ್ಗಿಸಿ ಶುದ್ಧ ಆಮ್ಲಜನಕವನ್ನು ಪ್ರಯಾಗರಾಜ್‌ಗೆ ನೀಡುವುದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ನಿರ್ದೇಶನದ ಮೇರೆಗೆ ಜಪಾನಿನ ಮಿಯಾವಾಕಿ ತಂತ್ರಜ್ಞಾನ ಆಧರಿಸಿ ಕೇವಲ ಎರಡೇ ವರ್ಷದಲ್ಲಿ ಪುಟ್ಟ ಪುಟ್ಟ ತಳಿಯ ಗಿಡಗಳಿಂದ ಕೂಡಿದ 55ಗಿ 800 ಚ.ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ದೊಡ್ಡ ವನ ಬೆಳೆಸಲಾಗಿದೆ. 2019ರ ಕುಂಭ ಮೇಳದ ಸಂದರ್ಭದಲ್ಲಿ ವಾಯುಮಾಲಿನ್ಯ ಸಮಸ್ಯೆ ತೀವ್ರಗೊಂಡ ವರದಿ ಹಿನ್ನೆಲೆಯಲ್ಲಿ ಈ ವನ ಮಹೋತ್ಸವಕ್ಕೆ ಕಂಕಣ ಕಟ್ಟಲಾಗಿತ್ತಂತೆ. ಅಲಹಾಬಾದ್ ವಿವಿಯ ಡಾ| ಎನ್.ಬಿ.ಸಿಂಗ್ ನಿರ್ದೇಶನದಲ್ಲಿ ಈ ವನ ನಿರ್ಮಾಣ 2020-21 ರಲ್ಲಿ ಪ್ರಾರಂಭವಾಗಿತ್ತು. 63 ಜಾತಿಯ 1.19 ಲಕ್ಷ ಗಿಡಗಳನ್ನು ನೆಡಲಾಗಿದ್ದು ಅವು ಈಗ 10-12 ಅಡಿ ಎತ್ತರಕ್ಕೆ ಬೆಳೆದಿದೆ. ಮಾವು, ಬೇವು, ಹುಣಸೆ, ತೇಗ, ತುಳಸಿ, ನೆಲ್ಲಿ, ಕದಂಬ ಇತ್ಯಾದಿ ತಳಿ ಇಲ್ಲಿ ರಾರಾಜಿಸುತ್ತಿವೆ.
ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.