ಅಕ್ಬರ್ ನನ್ನು ಭಾರತದ ದೊರೆ ಎಂದು ಒಪ್ಪಿಕೊಳ್ಳದೇ ಹೋರಾಡಿದ್ದ ಅಪ್ರತಿಮ ರಾಜ ರಾಣಾಪ್ರತಾಪ್
ಮಹಾರಾಣಾ ಪ್ರತಾಪ್ ವಿರುದ್ಧ ಅಕ್ಬರ್ ಒಂದರ ಹಿಂದೊಂದು ದಂಡಯಾತ್ರೆಯನ್ನು ಕೈಗೊಳ್ಳುತ್ತಾನಾದರೂ ಅದರಲ್ಲಿ ಯಶಸ್ವಿಯಾಗಿಲ್ಲ.
Team Udayavani, May 9, 2020, 12:24 PM IST
ಮಣಿಪಾಲ: ಮಹಾರಾಣಾ ಪ್ರತಾಪ್ ಪರಾಕ್ರಮಿ ದೊರೆ ಎಂದೇ ಇತಿಹಾಸದ ಪುಟದಲ್ಲಿ ದಾಖಲಾಗಿದ್ದು, ಇಂದು ಮಹಾರಾಣಾ ಪ್ರತಾಪ್ ಜನ್ಮದಿನ(1540 ಮೇ 9ರಂದು ಜನನ). ಮಹಾರಾಣಾ ನಿಜವಾದ ಹೆಸರು ಪ್ರತಾಪ್ ಸಿಂಗ್. ರಾಜಸ್ಥಾನದ ಮೇವಾರ್ ನ 13ನೇ ರಾಜ. ಸೂರ್ಯವಂಶಿ ರಜಪೂತರ ಸಿಸೊದಿಯ ವಂಶಕ್ಕೆ ಸೇರಿದ್ದ ಪ್ರತಾಪ್ ಭಯರಹಿತ ರಾಜ ಎಂದೇ ಖ್ಯಾತಿಯಾಗಿರುವುದಾಗಿ ಇತಿಹಾಸ ಪುಟದಲ್ಲಿ ಉಲ್ಲೇಖವಾಗಿದೆ.
2ನೇ ಮಹಾರಾಣಾ ಉದಯ್ ಸಿಂಗ್ ಮತ್ತು ಮಹಾರಾಣಿ ಜೈವಂತ್ ಬಾಯಿ ಪುತ್ರನಾಗಿ ಮಹಾರಾಣಾ ಪ್ರತಾಪ್ ಜನಿಸಿದ್ದ. ಈತನಿಗೆ ಶಕ್ತಿ ಸಿಂಗ್, ವಿಕ್ರಮ್ ಸಿಂಗ್ ಹಾಗೂ ಜಗ್ಮಾಲ್ ಸಿಂಗ್ ಸೇರಿ ಮೂವರು ಸಹೋದರರು. ಅಲ್ಲದೇ ಇಬ್ಬರು ಮಲ ಸಹೋದರಿಯರು ಇದ್ದರು.
1568ರಲ್ಲಿ ಎರಡನೇ ಉದಯ್ ಸಿಂಗ್ ರಾಜ್ಯಭಾರ ಕಾಲದಲ್ಲಿ ಚಿತ್ತೂರನ್ನು ಮೊಘಲ್ ದೊರೆ ಅಕ್ಬರ್ ವಶಪಡಿಸಿಕೊಂಡಿದ್ದ. ಈ ವೇಳೆ ಸಿಂಗ್ ಸೇನೆಯ ಸೈನಿಕರು ಹಿಂಸಾತ್ಮಕವಾಗಿ ಸಾವನ್ನಪ್ಪಿದ್ದರು. ಕೋಟೆಯ ಮಹಿಳೆಯರು ಅಪಮಾನದಿಂದ ಪಾರಾಗಲು ಬೆಂಕಿಗೆ ಆಹುತಿಯಾಗಿದ್ದರು. ಈ ದುರಂತ ಸಂಭವಿಸುವ ಮೊದಲ ಉದಯ್ ಸಿಂಗ್ ಮತ್ತು ಅವನ ಕುಟುಂಬವನ್ನು ಬುದ್ದಿವಂತಿಕೆಯಿಂದ ಸಮೀಪದ ಬೆಟ್ಟಗಳ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ನಂತರ ಉದಯ್ ಸಿಂಗ್ ಅರಾವಳಿ ಪರ್ವತ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಇನ್ನೊಂದು ಸ್ಥಳಕ್ಕೆ ನೆಲೆ ಬದಲಾಯಿಸಿದ್ದ. ಈ ಹೊಸ ಪ್ರದೇಶವೇ ಮುಂದೆ ಉದಯಪುರ ಎನ್ನುವ ನಗರವಾಗಿ ಬೆಳೆದಿತ್ತು.
ಎರಡನೇ ಉದಯ್ ಸಿಂಗ್ ತನ್ನ ನಂತರ ನೆಚ್ಚಿನ ಪುತ್ರ ಜಗ್ಮಾಲ್ ಅಧಿಕಾರ ವಹಿಸಿಕೊಳ್ಳಬೇಕೆಂದು ಬಯಸಿದ್ದ. ಆದರೆ ಅವನ ಹಿರಿಯ ಮಗ ಪ್ರತಾಪ್ ನನ್ನು ರಾಜನನ್ನಾಗಿ ಮಾಡಬೇಕೆಂದು ಅವನ ಮಂತ್ರಿ ಮಂಡಳದ ಹಿರಿಯ ವರಿಷ್ಠರು ಸಲಹೆ ನೀಡಿದ್ದರು. ಅದರಂತೆ ಪ್ರತಾಪ್ ನನ್ನು ರಾಜ ಎಂದು ಘೋಷಿಸಲಾಯಿತು.
ಅಕ್ಬರ್ ವಿರುದ್ಧ ನಿರಂತರ ಹೋರಾಟ:
ಮಹಾರಾಣಾ ಪ್ರತಾಪ್ ಅಕ್ಬರ್ ನನ್ನು ಭಾರತದ ದೊರೆ ಎಂದು ಒಪ್ಪಿಕೊಳ್ಳಲೇ ಇಲ್ಲ. ತನ್ನ ಜೀವನ ಪೂರ್ತಿ ಅಕ್ಬರ್ ವಿರುದ್ಧ ಹೋರಾಡುತ್ತಲೇ ಕಳೆದಿದ್ದ. ಮೊದಲು ಅಕ್ಬರ್ ಮಹಾರಾಣಾ ಪ್ರತಾಪ್ ನನ್ನು ಗೆಲ್ಲಲು ರಾಜತಾಂತ್ರಿಕ ಮಾರ್ಗದ ಮೂಲಕ ಪ್ರಯತ್ನಿಸಿದ್ದ. ಆದರೆ ಅದು ಫಲ ನೀಡಲಿಲ್ಲ. ಪ್ರತಾಪ್ ಗೆ ಅಕ್ಬರ್ ವಿರುದ್ಧ ಹೋರಾಡಲು ಯಾವುದೇ ಉದ್ದೇಶವಿರಲಿಲ್ಲ. ಆದರೆ ಅಕ್ಬರ್ ಎದುರು ತಲೆಬಾಗಿ ಅವನನ್ನು ತನ್ನ ರಾಜನೆಂದು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಪ್ರತಿಪಾದಿಸಿದ. ಮಹಾರಾಣಾ ಅಕ್ಬರ್ ನ ಸ್ನೇಹಿತನಾಗಲು ಕೆಲವೊಂದು ಸಾಧ್ಯತೆಗಳಿದ್ದವು. ಆದರೆ ಚಿತ್ತೂರನ್ನು ಮುತ್ತಿಗೆ ಹಾಕಿದಾಗ, ಅಕ್ಬರ್ 27,000 ಜನರನ್ನು ಕೊಂದಿದ್ದ ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಈ ಘಟನೆಯು ಮಹಾರಾಣಾನ ಮನಸ್ಸಿನಲ್ಲಿ ಅಳಿಸಲಾಗದ ನೋವಾಗಿ ಉಳಿದಿತ್ತು.
ಇಂತಹ ಅನ್ಯಾಯ ಮತ್ತು ಕ್ರೂರತೆಗೆ ತಲೆಬಾಗುವುದಿಲ್ಲ ಎಂದು ಮಹಾರಾಣಾ ನಿರ್ಧರಿಸಿದ್ದ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ಮಹಾರಾಣಾ ಪ್ರತಾಪ್ ವಿರುದ್ಧ ಅಕ್ಬರ್ ಒಂದರ ಹಿಂದೊಂದು ದಂಡಯಾತ್ರೆಯನ್ನು ಕೈಗೊಳ್ಳುತ್ತಾನಾದರೂ ಅದರಲ್ಲಿ ಯಶಸ್ವಿಯಾಗುವುದಿಲ್ಲ. ಮಹಾರಾಣಾ ಪ್ರತಾಪ್ ನನ್ನುಉ ಸೋಲಿಸುವ ಯತ್ನದಲ್ಲಿ ಅವನು ಅಪಾರ ಹಣವನ್ನು ಮತ್ತು ಸೈನಿಕರನ್ನು ಬಲಿಕೊಟ್ಟ. 30 ವರ್ಷಗಳ ಕಾಲ ಪ್ರತಾಪ್ ಅಕ್ಬರ್ ನನ್ನು ಹಿಮ್ಮೆಟ್ಟಿಸಿದ್ದ ಮತ್ತು ಪ್ರತಾಪ್ ತನ್ನ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ ತನ್ನ ರಾಜಧಾನಿಯ ಹೆಚ್ಚಿನ ಭಾಗಗಳನ್ನು ಮುಕ್ತಗೊಳಿಸಲು ಸಮರ್ಥನಾದ. ಆದರೆ ಚಿತ್ತೂರು ಮತ್ತು ಮಂಡಲ್ ಗಢ್ ಎರಡು ಕೋಟೆಗಳನ್ನು ಪ್ರತಾಪ್ ಗೆ ಮರುವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಆತನನ್ನು ತೀವ್ರ ನಿರಾಸೆಗೊಡ್ಡಿತ್ತು.
ಬೇಟೆಯಾಡುವಾಗ ಸಂಭವಿಸಿದ ಗಾಯಗಳಿಂದಾಗಿ ಮಹಾರಾಣಾ ಪ್ರತಾಪ್ ಚಾವಂದ್ ನಲ್ಲಿ 1597ರ ಜನವರಿ 29ರಂದು ಸಾವನ್ನಪ್ಪಿದ್ದ. ಆಗ ಮಹಾರಾಣಾ ಪ್ರತಾಪ್ ಗೆ 56 ವರ್ಷ ವಯಸ್ಸಾಗಿತ್ತು. ಪ್ರತಾಪ್ ನ ಮರಣಶಯ್ಯೆಯಲ್ಲಿ ತನ್ನ ಪುತ್ರ ಮತ್ತು ಉತ್ತರಾಧಿಕಾರಿ ಅಮರ್ ಸಿಂಗ್ ಮೊಘಲ್ ರ ವಿರುದ್ಧ ನಿರಂತರ ಹೋರಾಟವನ್ನು ಮುಂದುವರಿಸುವ ಪ್ರತಿಜ್ಞೆ ಮಾಡಿಸಿದ್ದ. ಚಿತ್ತೂರು ಕೋಟೆಯನ್ನು ಶತ್ರುಗಳಿಂದ ಮುಕ್ತಗೊಳಿಸುವ ತನಕ ನೆಲದ ಮೇಲೆ ನಿದ್ರಿಸುವುದಾಗಿ ಮತ್ತು ಗುಡಿಸಲಿನಲ್ಲಿ ವಾಸಿಸುವುದಾಗಿ ಮಹಾರಾಣಾ ಶಪಥತೊಟ್ಟಿದ್ದರಿಂದ ಪ್ರತಾಪ್ ಹಾಸಿಗೆಯ ಮೇಲೆ ಮಲಗಲಿಲ್ಲ ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.