ಸಿನಿಮಾ ಮಂದಿರ ತೆರೆಯಲು ಮಹಾರಾಷ್ಟ್ರ ಸರ್ಕಾರ ಅನುಮತಿ;ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ
Team Udayavani, Oct 12, 2021, 3:58 PM IST
ಮುಂಬೈ:- ಮಹಾರಾಷ್ಟ್ರ ಸರ್ಕಾರವು ಅ.22ರ ನಂತರ ರಾಜ್ಯದ ಎಲ್ಲಾ ಸಿನಿಮಾ ಮಂದಿರಗಳು ಮತ್ತು ಸಭಾಂಗಣಗಳು ಶೇ.50ರಷ್ಟು ಮಂದಿ ಸೇರಲು ಮಂಗಳವಾರ ಅನುಮತಿ ನೀಡಿದೆ. ಸರ್ಕಾರ ತಿಳಿಸಿರುವ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ)ಯ ಪ್ರಮಾಣಿತ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕಳೆದ 17 ತಿಂಗಳುಗಳಲ್ಲಿ ಸೋಮವಾರ(ಅ.11) ಅತ್ಯಂತ ಕನಿಷ್ಠ ಅಂದರೆ 1736 ಕೋವಿಡ್ ಪ್ರಕರಣಗಳು ದಾಖಲಾಗಿದ್ದರಿಂದ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ 65,79,608 ಪ್ರಕರಣಗಳು ಮತ್ತು 1,39,578 ಸಾವು ದಾಖಲಾಗಿವೆ.
ಅನುಸರಿಸಬೇಕಾದ ಕೆಲ ನಿಯಮಗಳು:-
- ಒಟ್ಟು ಶೇ.50ರಷ್ಟು ಮಾತ್ರ ಜನರಿಗೆ ಅವಕಾಶ.
- ಸಭಾಂಗಣ ಮತ್ತು ಸಿನಿಮಾ ಮಂದಿರಗಳಿಗೆ ಬರುವ ಎಲ್ಲರ ಮೊಬೈಲ್‌ನಲ್ಲೂ ಆರೋಗ್ಯ ಸೇತು ಆ್ಯಫ್ ಹೊಂದಿರಬೇಕು.
- ಸಭಾಂಗಣ ಅಥವಾ ಸಿನಿಮಾ ಹಾಲ್ ನಿರ್ವಹಿಸುವ ಎಲ್ಲಾ ಸಿಬಂದಿಗಳು 2 ಡೋಸ್ ಲಸಿಕೆ ಪಡೆದಿರಬೇಕು ಮತ್ತು 2ನೇ ಡೋಸ್ ಪಡೆದು ಕನಿಷ್ಠ 14 ದಿನಗಳಾಗಿರಬೇಕು.
- ಮಲ್ಟಿಪ್ಲೆಕ್ಸ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಶೋಗಳನ್ನು ವಿವಿಧ ಸಮಯಗಳಲ್ಲಿ ನಿಗದಿ ಮಾಡಿರಬೇಕು.
- ಆಹಾರ ಮತ್ತು ತಿನಿಸುಗಳಿಗೆ ಹಾಗು ಸಿನಿಮಾ ಟಿಕೇಟ್‌ಗಳಿಗೆ ಆನ್‌ಲೈನ್ ಪಾವತಿಯನ್ನು ಮಾತ್ರ ಸ್ವೀಕರಿಸಬೇಕು.
- ಪಾರ್ಕಿಂಗ್ ಮತ್ತು ಕೋವಿಡ್ ಥರ್ಮಲ್ ಸ್ಕಾನಿಂಗ್ ಮಾಡುವಾಗ ಜನಸಂದಣಿ ಸೇರದಂತೆ ನಿರ್ವಹಣೆ ಮಾಡಬೇಕು ಮತ್ತು ಕೋವಿಡ್ ರೋಗ ಲಕ್ಷಣಗಳಿಲ್ಲದವರನ್ನು ಮಾತ್ರ ಒಳ ಬಿಡಬೇಕು.
- ಆಗಾಗ ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕು ಮತ್ತು ಸೂಕ್ತ ಅಂತರಗಳನ್ನು ಕಾಯ್ದುಕೊಳ್ಳಬೇಕು.
- ಸಿನಿಮಾ ಹಾಲ್‌ನ ಒಳಗೆ ತಿಂಡಿ- ತಿನಿಸುಗಳನ್ನು ತರಬಾರದು, ಹೊರಗೆ ತಿಂದು ಬರಬೇಕು.
ಇದನ್ನೂ ಓದಿ;- ತಡವಾಗಿ ಮನೆಗೆ ಬಂದ ಮಗಳನ್ನು ಹೊಡೆದು ಸಾಯಿಸಿದ ಪಾಪಿ ತಂದೆ
ಕೋವಿಡ್ ಮೊದಲ ಅಲೆಯಲ್ಲಿ ಅಂದರೆ, 2020ರ ಮಾರ್ಚ್‌ನಿಂದ ಕೆಲ ತಿಂಗಳ ಕಾಲ ವ್ಯವಹಾರ ಚಟುವಟಿಕೆಗಳನ್ನು ಮುಚ್ಚಲಾಗಿತ್ತು. ದೇಶದ ಕೆಲಭಾಗಗಳಲ್ಲಿ 2020ರ ಅಕ್ಟೋಬರ್ – ನವೆಂಬರ್‌ನಲ್ಲೂ ಈ ಸ್ಥಿತಿ ಮುಂದುವರಿದಿತ್ತು. ಕೋವಿಡ್‌ನ ಎರಡನೇ ಅಲೆಯಿಂದಾಗಿ 2021ರ ಮೇ ತಿಂಗಳಿನಿಂದ ಮತ್ತೆ ವ್ಯವಹಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ಅಕ್ಟೋಬರ್ ತಿಂಗಳಲ್ಲಿ ಮತ್ತೆ ನಿರ್ಬಂಧಗಳ ಜೊತೆಗೆ ಮಹರಾಷ್ಟ್ರ ಸಹಜ ಸ್ಥಿತಿಗೆ ಮರಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.