ಮನೆ ನಿರ್ಮಾಣಕ್ಕೆ ಹಣ ಬೇಕೆಂದು ನೆರೆಮನೆಯ ಬಾಲಕನನ್ನೇ ಅಪಹರಣ ಮಾಡಿ ಕೊಲೆಗೈದ ವ್ಯಕ್ತಿ
ಗೋಣಿ ಚೀಲದಲ್ಲಿ ಶವ ತುಂಬಿಟ್ಟ ಪಾಪಿ.!
Team Udayavani, Mar 26, 2024, 8:52 AM IST
ಥಾಣೆ: ಹಣಕ್ಕಾಗಿ 9 ವರ್ಷದ ಬಾಲಕನನ್ನು ಅಪಹರಣಗೈದು ಭೀಕರವಾಗಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಬದ್ಲಾಪುರದಲ್ಲಿ ಭಾನುವಾರ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಥಾಣೆಯ ಬದ್ಲಾಪುರ ಮೂಲದ ಬಾಲಕ ಇಬಾದ್(9) ಕೊಲೆಯಾದ ಬಾಲಕ.
ಏನಿದು ಘಟನೆ?: ಭಾನುವಾರ ಸಂಜೆ ಇಬಾದ್ ಮಸೀದಿಗೆ ಹೋಗಿ ತನ್ನ ಮನೆಗೆ ವಾಪಾಸಾಗುತ್ತಿದ್ದ.ಈ ವೇಳೆ ನೆರೆಹೊರೆಯಲ್ಲಿರುವ ಸಲ್ಮಾನ್ ಮೌಲ್ವಿ ಎಂಬಾತ ಇಬಾದ್ ನನ್ನು ಅಪಹರಿಸಿದ್ದಾನೆ. ಮಗ ಸಮಯ ಕಳೆದರೂ ಇನ್ನು ಮನೆಗೆ ವಾಪಾಸ್ ಬರಲಿಲ್ಲ ಎನ್ನುವ ಕಾರಣಕ್ಕೆ ಇಬಾದ್ ಪೋಷಕರು ಅತ್ತಿತ್ತ ಹುಡುಕಾಡಿದ್ದಾರೆ. ಇದೇ ವೇಳೆ ಇಬಾದ್ ಅವರ ತಂದೆ ಮುದ್ದಾಸಿರ್ ಅವರ ಮೊಬೈಲ್ ಗೆ ನಿಮ್ಮ ಮಗನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಬೇಕಾದರೆ 23 ಲಕ್ಷ ನೀಡಬೇಕೆಂದು ಬೆದರಿಕೆಯ ಕರೆಯೊಂದು ಬಂದಿದೆ. ಯಾವುದೇ ಮಾಹಿತಿ ನೀಡದೇ ಕರೆಯನ್ನು ಕಟ್ ಕಟ್ ಮಾಡಲಾಗಿದೆ. ಇದರಿಂದ ಭೀತಿಗೆ ಒಳಗಾದ ಇಬಾದ್ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬರುವ ಮುನ್ಸೂಚನೆಯಲ್ಲಿದ್ದ ಆರೋಪಿಗಳು ತಮ್ಮ ಸಿಮ್ ಕಾರ್ಡ್ ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪೊಲೀಸರು ಸೋಮವಾರ ಮಧ್ಯಾಹ್ನದ ವೇಳೆಗೆ ಸಲ್ಮಾನ್ ಅವರ ಮನೆಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಬಾಲಕನನ್ನು ಪೊಲೀಸರು ಬರುವ ಮುನ್ನವೇ ಕೊಲೆಗೈದು ಗೋಣಿ ಚೀಲದಲ್ಲಿ ತುಂಬಿ ಮನೆಯ ಹಿಂದೆ ಮುಚ್ಚಿಯಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ವೃತ್ತಿಯಲ್ಲಿ ಟೈಲರ್ ಆಗಿರುವ ಸಲ್ಮಾನ್ ಹಾಗೂ ಆತನ ಸಹೋದರ ಸಫುವಾನ್ ಮೌಲ್ವಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಸಲ್ಮಾನ್ ಹೊಸ ಮನೆ ಕಟ್ಟುವ ಯೋಜನೆಯಲ್ಲಿದ್ದ, ಇದಕ್ಕಾಗಿ 23 ಲಕ್ಷ ರೂ. ಅಗತ್ಯವಿತ್ತು. ಬಾಲಕನನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದರೆ ಅಂದುಕೊಂಡ ದುಡ್ಡು ಸಿಗುತ್ತದೆನ್ನುವ ಕಾರಣದಿಂದ ಈ ಕೃತ್ಯವನ್ನು ಎಸೆದಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಸಲ್ಮಾನ್ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದು, ಈ ಕೃತ್ಯದಲ್ಲಿ ಕುಟುಂಬದ ಸದಸ್ಯರು ಸೇರಿದಂತೆ ಇತರ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬದ್ಲಾಪುರ ಹಿರಿಯ ಪೊಲೀಸ್ ಅಧಿಕಾರಿ ಗೋವಿಂದ್ ಪಾಟೀಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
MUST WATCH
ಹೊಸ ಸೇರ್ಪಡೆ
Teacher: ಟೀ ಫಾರ್ ಟೀಚರ್
US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್
Nivin Pauly: ಲೈಂಗಿಕ ದೌರ್ಜನ್ಯ ಪ್ರಕರಣ; ʼಪ್ರೇಮಂʼ ನಟ ನಿವಿನ್ ಪೌಲಿಗೆ ಕ್ಲೀನ್ ಚಿಟ್
Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ
R Ashok ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿರುವುದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.