ಮಹಾರಾಷ್ಟ್ರ : ಶಿವಸೇನೆಯ 15 ಬಂಡಾಯ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ, ಶಿಂಧೆ ಹೆಸರು ಮಾಯ
Team Udayavani, Jun 26, 2022, 5:26 PM IST
ಮಹಾರಾಷ್ಟ್ರ : ಶಿಂಧೆ ಪಾಳಯದಲ್ಲಿರುವ ಶಿವಸೇನೆಯ ಹದಿನೈದು ಮಂದಿ ಬಂಡಾಯ ಶಾಸಕರಿಗೆ ಕೇಂದ್ರ ಸರಕಾರ ಭಾನುವಾರ Y+ ಭದ್ರತೆ ಒದಗಿಸಿದೆ.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇಂದ್ರ ಸರಕಾರ ಒದಗಿಸಿದ Y+ ಭದ್ರತೆಯಲ್ಲಿ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಹೆಸರು ಭದ್ರತಾ ಪಟ್ಟಿಯಲ್ಲಿ ಮಾಯವಾಗಿರುವುದು.
ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು ಎನ್ನಲಾಗಿದೆ.
ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂಧೆ ನೇತೃತ್ವದ 40 ಕ್ಕೂ ಹೆಚ್ಚು ಶಾಸಕರು ಗುವಾಹಟಿಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಮಂದಿ ಶವವಾಗಿ ಪತ್ತೆ! ಕಾರಣ ನಿಗೂಢ
‘ವೈ’ ವರ್ಗದ ಭದ್ರತೆಯಲ್ಲಿ ಎಂಟು ಸಿಬ್ಬಂದಿಯನ್ನು ಒಳಗೊಂಡಿರುತ್ತದೆ, ಇದರಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ.
Centre provides ‘Y+’ CRPF security cover to 15 rebel Shiv Sena MLAs
Read @ANI Story | https://t.co/1l9MzTD4QM#MaharashtraPolitcalCrisis #MahaVikasAghadi #ShivSenaBalasaheb #ShivSenaMLAs #CRPF pic.twitter.com/97ksSsjXpj
— ANI Digital (@ani_digital) June 26, 2022
ರಮೇಶ ಬೋರ್ನಾರೆ, ಮಂಗೇಶ್ ಕುಡಾಳ್ಕರ್, ಸಂಜಯ್ ಶಿರ್ಸತ್, ಲತಾಬಾಯಿ ಸೋನವಾನೆ, ಪ್ರಕಾಶ್ ಸರ್ವೆ, ಸದಾನಂದ ಸರನವಂಕರ್, ಯೋಗೇಶ್ ದಾದಾ ಕದಂ, ಪ್ರತಾಪ್ ಸರ್ನಾಯಕ್, ಯಾಮಿನಿ ಜಾಧವ್, ಪ್ರದೀಪ್ ಜೈಸ್ವಾಲ್, ಸಂಜಯ್ ರಾಥೋಡ್, ದಾದಾಜಿ ಭೂಸೆ, ದಿಲೀಪ್ ಲಾಂಡೆ, ಬಾಲಾಜಿ ಕಲ್ಯಾಣರ್, ಸಂದೀಪನ ಭೂಮಾರೆ ಈ ಹದಿನೈದು ಶಾಸಕರ ಹೆಸರುಗಳು ಕೇಂದ್ರ ಸರಕಾರ ಒದಗಿಸುವ ಭದ್ರತಾ ಪಟ್ಟಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.